ಸಂಸ್ಮರಣೆ: ಕವಿ ಕಯ್ಯಾರ

Upayuktha
0

 ಕಯ್ಯಾರ ಕಿಂಞಣ್ಣ ರೈ ಸವಿ ನೆನಪಿನಲ್ಲಿ... ಅವರಿಂದು ಬದುಕಿದ್ದರೆ 106 ವರ್ಷವಾಗಿರುತ್ತಿತ್ತು. (ಜನನ:08-06-1915- ಮರಣ: 09-08-2015)



ಕನ್ನಡ ನೆಲವದು ನಮ್ಮದು ಎನ್ನುತ

ಹೊನ್ನಿನ‌ ನುಡಿಯಲಿ ದುಡಿದವರು

ಚೆನ್ನದು ಕಾಸರಗೋಡಿನ ನೆಲವದು

ಕನ್ನಡ ಜನರುಸಿರೆಂದವರು.


ಶತಮಾನದ ಸವಿ ಬದುಕನು ಸವೆಸುತ

ಮತ ಮನುಜನದದು ಒಂದೆನುತ

ಹಿತ ಮಿತ ಪ್ರೀತಿಯ ಜೊತೆ ಸೌಹಾರ್ದದ

ಜೊತೆ ಸಕಲರನೂ ಕಂಡವರು


ದೇಶದ ಭಕ್ತಿಯ ಕೋಶವ ಕಟ್ಟುತ

ಪಾಶವ ಬಿಗಿಯುತ ಭಾಷೆಯಲಿ

ದ್ವೇಷದ ಭಾವನೆ ಇಲ್ಲದೆ ಬದುಕಲು

ರೋಷವದೇತಕೆ ಎಂದವರು.


ನಮ್ಮಯ ನಾಡಿದು ಪರರಲಿ ಯಾತಕೆ

ಹೆಮ್ಮೆಯ ಕುಟುಂಬದಂತಿರಲು

ಸುಮ್ಮನೆ ಗಡಿಯಲಿ ವಿವಾದವೇಳಲು 

ಹಮ್ಮನು ತೋರಿಸಿ ನಿಂತವರು


-ಡಾ ಸುರೇಶ ನೆಗಳಗುಳಿ, ಮಂಗಳೂರು

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Tags

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top