ವಿಶ್ವ ಯೋಗ ದಿನದ ಅಂಗವಾಗಿ 21ರಂದು ಪಂಚಾಯತ್‌ರಾಜ್ ವಿವಿಯಲ್ಲಿ ಗೋಶಾಲೆ ಆರಂಭ

Upayuktha
0

ನಿರ್ವಹಣೆಗೆ ತಜ್ಞರ ಸಮಿತಿ ಸದಸ್ಯರಾಗಿ ಮಹೇಶ ಬೀದರಕರ ಆಯ್ಕೆ



ಕಲಬುರಗಿ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗನಲ್ಲಿ ಇದೆ ಜೂನ್ 21 ರಂದು ವಿಶ್ವ ಯೋಗದಿನದ ಅಂಗವಾಗಿ ಗೋಶಾಲೆ ಆರಂಭಗೊಳ್ಳಲಿದೆ. ಈ ಗೋಶಾಲೆಯ ಪ್ರಕಲ್ಪದ ನಿರ್ವಹಣೆಗೆ ತಜ್ಞರ ತಂಡವೊಂದು ರಚಿಸಲಾಗಿದೆ.


ಈ ಗೋಶಾಲೆಯ ನಿರ್ವಹಣೆಗೆ ರಚಿಸಲಾಗಿರುವ ತಜ್ಞರ ಸಮಿತಿಗೆ ಸದಸ್ಯರಾಗಿ ಕಲಬುರ್ಗಿಯ ಶ್ರೀ ಮಾಧವ ಗೋಶಾಲೆಯ ಮುಖ್ಯಸ್ಥರಾದ ಮಹೇಶ ಬೀದರಕರ ಅವರನ್ನು ಆಯ್ಕೆ ಮಾಡಲಾಗಿದೆ. ಈ ವಿಷಯವನ್ನು ಸ್ವತಃ ಅವರೇ ಉಪಯುಕ್ತ ನ್ಯೂಸ್ ಜತೆ ಹಂಚಿಕೊಂಡಿದ್ದಾರೆ.


'ನನ್ನನ್ನು ಈ ತಂಡದ ಸದಸ್ಯನನ್ನಾಗಿ ಆಯ್ಕೆ ಮಾಡಲಾಗಿದೆ. ಇಂದು ಈ ಗೋಶಾಲೆಯ ಸಮಿತಿಯ ಸದಸ್ಯರ ಆನ್ಲೈನ್ ಸಭೆ ಕರೆಯಲಾಗಿತ್ತು' ಎಂದು ಅವರು ತಿಳಿಸಿದ್ದಾರೆ.


ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ವಿಷ್ಣುಕಾಂತ ಚಟಪಳ್ಳಿ, ಕುಲಸಚಿವರು, ಹಾಗೂ ಇತರ ಹಿರಿಯ, ಗೌರವಾನ್ವಿತ ಅಧಿಕಾರಿಗಳು, ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.


ಇದೊಂದು ವಿನೂತನ ಯೋಜನೆಯಾಗಿದ್ದು ವಿಶ್ವವಿದ್ಯಾಲಯದಲ್ಲಿ ದೇಸಿ ಗೋವುಗಳ ಮೂಲಕ ಗ್ರಾಮೀಣಾಭಿವೃದ್ಧಿ, ಉದ್ಯೋಗ ಸೃಷ್ಟಿ, ಸಂಶೋಧನೆ ಹಾಗು ವಿಸ್ತಾರ ಈ ಉದ್ದೇಶಗಳನ್ನೊಳಗೊಂಡು ಗೋಶಾಲೆ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲಿದೆ. ಬಹುಶಃ ಸರ್ಕಾರಿ ವ್ಯವಸ್ಥೆಯಲ್ಲಿ ಇಂತಹ ಪ್ರಯತ್ನ ಇದೆ ಮೊದಲು ಎನ್ನಬಹುದು.


ಇಂತಹದೊಂದು ಉನ್ನತ ಅಧಿಕಾರಿಗಳ ತಂಡದಲ್ಲಿ ಅತ್ಯಂತ ಕಿರಿಯನಾದ ನನಗೆ ಸಮಾಜದ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ.

-ಮಹೇಶ ಬೀದರಕರ

ಮುಖ್ಯಸ್ಥರು, ಮಾಧವ ಗೋಶಾಲೆ, ಕಲಬುರ್ಗಿ


Summary: Karnataka State Rural Development and Panchayat Raj University, Gadag selected me as the member of expert committee for the Gaushala they are starting on June 21st. Today its first online meeting was organized. Shared my views about making the Gaushala self-sistianable


Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top