ಕಾಲಚಕ್ರ: ಜಗತ್ತು ಮುಂದುವರಿಯುತ್ತಲೇ ಹೋಗಿ ಎಲ್ಲಿಂದ ಎಲ್ಲಿಗೆ ತಲಪಿತೋ?

Upayuktha
0

(ಜಗತ್ತು ಹಿಮ್ಮುಖ ಚಲನೆಗೆ ತೊಡಗಿದೆಯೇ? ಸರಣಿ- ಭಾಗ 2)


ನಾನು ಚಿಕ್ಕವನಿದ್ದಾಗ ಪೋಸ್ಟಾಫೀಸ್ ಹಾಗೂ ಟೆಲಿಗ್ರಾಂ ಸಂಪರ್ಕ ಸಾಧನವಾಗಿದ್ದರೆ ಮುಂದೆ ಟೆಲಿಫೋನ್ ಮನೆಗಳಿಗೂ ಬಂದಿತ್ತು. ಆದರೆ ಆಗಲೂ ಕಾಲ್ ಬುಕ್ ಮಾಡಿ ಗಂಟೆಗಟ್ಲೆ ಕಾಯುವ ಪರಿಸ್ಥಿತಿ ಬದಲಾಗಿರಲಿಲ್ಲ. ಮನೆಯಲ್ಲೇ ಕಾಯೋದು ಎಂಬ ಸಮಾಧಾನ ಅಷ್ಟೆ ಆಗಿತ್ತು.  


ಇಷ್ಟು ಕಷ್ಟ ಯಾಕೆ ಆಗೆಲ್ಲಾ ಟೆಲಿಫೋನ್ ಸಂದೇಶಗಳು ವಯರುಗಳ ಮೂಲಕವೇ ಹೋಗುತ್ತಿತ್ತು. ಅದೂ 12 ಗೇಜ್ ಯಾ ಇತರ ಅಳತೆಯ ತಾಮ್ರದ ಸರಿಗೆಗಳ ಮೂಲಕ ಸಂದೇಶಗಳು ಹರಿದಾಡುತ್ತಿತ್ತು. ಇತ್ತಿಚಿಗಿನ ವರೆಗೂ ಮಾರ್ಗದ ಬದಿಯಲ್ಲಿ ಟೆಲಿಫೋನ್ ಕಂಬ ನೋಡಿದವರು ಇರಬಹುದು. ಹಿಂದೇ ಅದೇ ಕಂಬಗಳು ಎಷ್ಟು ಫೋನ್ ಕನೆಕ್ಷನ ಇದೆಯೋ ಅಷ್ಟೂ ವಯರುಗಳನ್ನು ಹೊರ ಬೇಕಿತ್ತು. ಈ ಎಲ್ಲಾ ಕನೆಕ್ಷನ್ ಗಳು ಟೆಲಿಫೋನ್ ಎಕ್ಸ್ ಚೇಂಜ್ ಗೆ ಬಂದು ಅಲ್ಲಿಂದ ಯಾರು ಯಾರಿಗೆ ತಲುಪ ಬೇಕೋ‌ ಅವರಿಗೆ ತಲಪುತ್ತಿತ್ತು.


ಕಾಲ ಬದಲಾಯಿತು. ಕೇಬಲ್‌ಗಳು ಬಂದು ಚಿಕ್ಕ ವಯರಿನಲ್ಲಿಯೇ ಸಂದೇಶಗಳು ಹರಿದಾಡ ತೊಡಗಿತು. ನಂಬರ್ ತಿರುಗಿಸುತ್ತಿದ್ದ ಫೋನ್ ನ ಬದಲು ಅಂಕೆಗಳನ್ನು ಒತ್ತುವ ಫೋನ್ ಗಳು ಬಂತು. ಯಸ್.ಟಿ.ಡಿ. ಎಂಬ ನೂತನ ವ್ಯವಸ್ಥೆ ಬಂದು ಶೀಘ್ರವಾಗಿ ಸಂಪರ್ಕಗಳು ಎಲ್ಲಿಂದ ಎಲ್ಲಿಗೂ ಸಿಗತೊಡಗಿತು. ಇದರಿಂದಲಾಗಿ ವಿದೇಶಗಳಿಗೆ ಕೂಡಾ ಚಿಕ್ಕ ಸಮಯದಲ್ಲೇ ಅಂದರೆ ಐದು ಹತ್ತು ನಿಮಿಷಗಳಲ್ಲೇ ಸಂಪರ್ಕ ಸಾಧಿಸಲು ಸಾಧ್ಯವಾಯಿತು. ಈಗ ಅದೂ ಹೋಗಿ ಓಪ್ಟಿಕ್ ಫೈಬರ್ ಎಂಬ ಕೇಬಲ್‌ ವ್ಯವಸ್ಥೆ ಸಂಪರ್ಕವನ್ನು ಇನ್ನಷ್ಟು ಸುಲಲಿತಗೊಳಿಸಿದೆ. ಇದೆಲ್ಲಾ ಸಾಧ್ಯವಾದುದು ಉಪಗ್ರಹ ಹಾಗೂ ಭೂಮಿಯ ಸಂಪರ್ಕ ವ್ಯವಸ್ಥೆಗಳಿಂದಲಾಗಿ.


ಮೊಬೈಲ್ ಬರುವುದರೊಂದಿಗೆ ಸಂಪರ್ಕ ಲೋಕದಲ್ಲೊಂದು ಕ್ರಾಂತಿಯೇ ಆಯಿತು. ಉಪಗ್ರಹ ಹಾಗೂ ಭೂಮಿಯಲ್ಲಿ ಸ್ಥಾಪಿಸಿದ ಟವರುಗಳ ಮೂಲಕ ಸಂಪರ್ಕ ಅತಿ ಶೀಘ್ರವಾಗಿ ಆಗ ತೊಡಗಿತು. ಒಂದಿಗೆ ಮೊಬೈಲ್ ಹ್ಯಾಂಡ್ ಸೆಟ್‌ಗಳಲ್ಲೂ ಕ್ರಾಂತಿಯಾಯಿತು. ಕೇವಲ ಮಾತುಕತೆಗಾಗಿ ಇದ್ದ ಫೋನ್ ಇಡೀ ಲೋಕದ ಎಲ್ಲಾ ವ್ಯವಸ್ಥೆಯನ್ನು ತನ್ನೊಳಗೇ ಅಡಗಿಸಿಕೊಂಡಿತು. ಒಂದು ಕಂಪ್ಯೂಟರ್ ಮಾಡುವ ಹೆಚ್ಚಿನೆಲ್ಲಾ ಕೆಲಸ ತಾನೇ ಮಾಡತೊಡಗಿತು. ಇನ್ನೊಂದು ಕಡೆ ಕೆಮರಾ ಎಂಬ ವ್ಯವಸ್ಥೆಯನ್ನೇ ತನ್ನೊಳಗೆ ಅಡಗಿಸಿ ಕೊಂಡು ಪ್ರತಿಯೊಬ್ಬನೂ ಫೊಟೋಗ್ರಾಫರ್ ಆಗುವಂತೆ ಮಾಡಿತು. ಪರಿಣಾಮ ಸಾಧಾರಣ ಕೆಮರಗಳು ಮೂಲೆ ಗುಂಪಾದುವು. ವೀಡಿಯೊ, ವಾಯ್ಸ್ ಮೆಸ್ಸೇಜ್ ಇತ್ಯಾದಿ ಹಲವೂ ವ್ಯವಸ್ಥೆಯನ್ನೂ ತನ್ನೊಳಗೇ ತುಂಬಿಕೊಂಡು ಇಂದಿನ ಜನಾಂಗ ಮೊಬೈಲ್ ಇಲ್ಲದ ಲೋಕವನ್ನು ಊಹಿಸಲೂ ಸಾಧ್ಯವಾಗದಂತೆ ಮಾಡಿತು. ಸಂಪೂರ್ಣ ಹಣದ ವ್ಯವಹಾರ ಕೂಡಾ ಈ ಮೊಬೈಲ್ ಮುಖಾಂತರ ನಡೆಯ ತೊಡಗುವುದರೊಂದಿಗೆ ಮೊಬೈಲ್ ಆಧುನಿಕ ಜನರ ಜೀವನದ ಅವಿಭಾಜ್ಯ ಅಂಗವಾಗಿಯೇ ಹೋಯಿತು. ಈಗಂತೂ ಶಾಲೆಗಳೂ ಮೊಬೈಲ್ ಮುಖಾಂತರ ನಡೆಯತೊಡಗಿದೆ. (ಹೆಚ್ಚಿನ ವಿವರ ಹಾಕಲು ಸ್ಥಳಾಭಾವ ಹಾಗೂ ನನ್ನ ಜ್ಞಾನದ ಕೊರತೆಯೂ ಕಾಡುತ್ತಿದೆ).


ಇನ್ನೊಂದಷ್ಟು ಚಿಂತನೆ: 

ಯೋಚಿಸಿ, ನೀವು ಎಲ್ಲೋ ನೆಟ್ ಸಿಗದ ಜಾಗಕ್ಕೆ ಹೋಗಿರುತ್ತೀರಿ. ಅಲ್ಲಿ ಒಂದು ಮೆಸ್ಸೇಜ್ ಕಳುಹಿಸ ಬೇಕೆಂದರೂ ಸಾಧ್ಯವಾಗುತ್ತಿಲ್ಲ‌. ಎಷ್ಟೆಷ್ಟೋ ಅನಿವಾರ್ಯ ಕೆಲಸಗಳು ನಡೆಯೋದಿಲ್ಲ. ಆಗ ನೀವು ಅನಿವಾರ್ಯವಾಗಿ ನೆಟ್ ಸಿಗುವ ಜಾಗಕ್ಕೆ ಹೋಗಿ ನಿಮ್ಮ ಕೆಲಸಗಳನ್ನು ಮಾಡಬೇಕಾಗುತ್ತದೆ. ಆದರೆ ಎಲ್ಲಿ ಹೋದರೂ ನೆಟ್ ಸಿಗದಿದ್ದರೆ?  ಏನು ಮಾಡಬೇಕು? ಒಂದೂ ತಿಳಿಯದೆ ಹುಚ್ಚು ಹಿಡಿದ ವ್ಯವಸ್ಥೆ ಆಗಬಹುದಲ್ಲವೇ ಆಧುನಿಕ ಮನುಷ್ಯನದ್ಧು?


ಆದ್ದರಿಂದ ಎಲ್ಲಾದರೂ ಕಾಲ ಹಿಮ್ಮುಖವಾಗಿ ಚಲಿಸತೊಡಗಿದರೆ ಮನುಷ್ಯ ಆ ಸ್ಥಿತಿ ಹೇಗಿರ ಬಹುದು ಎಂದು ತಿಳಿದು ಅದಕ್ಕೆ ಹೊಂದಿಕೊಳ್ಳಲು ತಯಾರಿರಲೇಬೇಕಾಗುತ್ತದೆ. ಹಾಗಿದ್ದರೆ ಈ ಹಿಮ್ಮುಖ ಚಲನೆ ಎಲ್ಲೆಲ್ಲಾ ಪರಿಣಾಮ ಬೀರಬಹುದು? ಇದರ ಬಗ್ಗೆ ಮುಂದೆ ಆಲೋಚಿಸೋಣ.


ಈಗ ವಿಧ್ಯುತ್ ಶಕ್ತಿಯ ಬಗ್ಗೆ ಆಲೋಚಿಸೋಣ. ವಿದ್ಯುತ್ ಇಲ್ಲದ ಲೋಕ ಒಂದು ಕ್ಷಣಕ್ಕಾದರೂ ಊಹಿಸಲೂ ಸಾಧ್ಯವೇ? ಇಂದು ಒಂದು ಊಟವಾದರೂ ವಿದ್ಯುತ್ ಇಲ್ಲವಾದರೆ ಸರಿಯಾಗಿ ಸಿಗಬಹುದೇ? ಅದೂ ಸಂದೇಹ.


ಹಾಗಾದರೆ ಹಿಂದೆ ಹೇಗಿತ್ತು ನಮ್ಮ ಈ ಲೋಕ? ಕುತೂಹಲ ಇದೆಯಲ್ಲವೇ? ಅದನ್ನು ತಿಳಿಯಲು ಮಾತ್ರವಲ್ಲ ಸಾಮಾಜಿಕ ವ್ಯವಸ್ಥೆಯಲ್ಲಿ ಏನೆಲ್ಲಾ ಏರುಪೇರುಗಳಾಗಬಹುದು ಎಂದು ತಿಳಿಯಲು ಮುಂದಿನ ಸಂಚಿಕೆಯನ್ನು ಓದಿ.


- ಎಡನಾಡು ಕೃಷ್ಣ ಮೋಹನ ಭಟ್ಟ


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top