ಹೊರಟಿರಾ ಮೆರವಣಿಗೆ ಇಹ ಲೋಕವನು ತ್ಯಜಿಸಿ
ಹೊರಟಿರಾ ಊರುಕೇರಿಯನು ತ್ಯಜಿಸಿ
ಯಾರಿಗಿತ್ತೆಂದು ಅರಿಯದೆಯೆ ಸ್ವಾತಂತ್ರ್ಯಹುಡುಕಿದಿರಿ
ಹೊರಟಿರಾ ಸೇರಿಸಿದ ಭಾವ ರಾಶಿಯನು ತ್ಯಜಿಸಿ
ಐವತ್ತನಾಲ್ಕರಲಿ ಧರೆಯ ನೋಡಿದ ದಲಿತ ನೀವಲ್ಲವೇ
ಹೊರಟಿರಾ ಈವತ್ತು ಹೋರಾಟವನು ತ್ಯಜಿಸಿ
ಹಲವು ಪರಿ ಜೀವನದ ಕೋನವನು ಸತತ ನೋಡಿದಿರಿ
ಹೊರಟಿರಾ ಅಪ್ಪಿಕೋ ಎನುವುದನು ತ್ಯಜಿಸಿ
ಅರೆದರೆದು ಬರೆದವರು ಗ್ರಾಮ ದೇವತೆಗಳನು ಕೂಡಾ
ಹೊರಟಿರಾ ಹೊಲೆ ಮಾದಿಗರ ಹಾಡುಗಳನು ತ್ಯಜಿಸಿ
ರಸಗಳಿಗೆ ಹಕ್ಕಿಗಳ ನೋಟ ಎಡಬಲದಿ ರಸಿಕ ತನ ಸಾಕ್ಷಿ
ಹೊರಟಿರಾ ನೆಲಸಮದ ಸಾವಿರ ನದಿಗಳನು ತ್ಯಜಿಸಿ
ಅಡಿಗಡಿಗೆ ಏನಲ್ಲ ಏನಿಲ್ಲ ಸಂಸದರು ಗುರುವಾದವರು
ಹೊರಟಿರಾ ನಿಮ್ಮ ಜನಗಳ ಅವತಾರವನು ತ್ಯಜಿಸಿ
ನುಡಿಸಿರಿಯ ವೇದಿಕೆಯನೇರಿ ಗಡುಗಿದಿರಂದು ಕಾವ್ಯದಲ್ಲಿ
ಹೊರಟಿರಾ ಸೈಜು ಕಲ್ಲು ಹೊತ್ತ ಜನಗಳನು ತ್ಯಜಿಸಿ
ಪಂಚಮನೊ ಏಕಲವ್ಯನೋ ಅರಿಯೆ ನಿಜವ ಸುರೇಶ
ಹೊರಟಿರಾ ಅಲ್ಲೆ ಕುಂತವರ ಪೀಠವನು ತ್ಯಜಿಸಿ
-ಡಾ ಸುರೇಶ ನೆಗಳಗುಳಿ
ಸುಹಾಸ
ಬಜಾಲ್ ಪಕ್ಕಲಡ್ಕ ಎಕ್ಕೂರು ರಸ್ತೆ
ಮಂಗಳೂರು 575009
9448216674
negalagulis@gmail.com
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ