ಧರ್ಮಸ್ಥಳ: ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ 7ನೇ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ “ರಾಜ್ಯ ಮಟ್ಟದ ಯೋಗ ಪ್ರಬಂಧ ಸ್ಪರ್ಧೆ”ಯನ್ನು ಆಯೋಜಿಸಲಾಗುತ್ತಿದೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ (ರಿ), (ಗಿನ್ನೆಸ್ ಪ್ರಶಸ್ತಿ ಪುರಸ್ಕೃತ ಸಂಸ್ಥೆ) ಇದರ ವತಿಯಿಂದ ಪ್ರಾಥಮಿಕ, ಪ್ರೌಢ, ಕಾಲೇಜು, ಹಾಗೂ ಸಾರ್ವಜನಿಕ ವಿಭಾಗದಿಂದ ರಾಜ್ಯ ಮಟ್ಟದ ಯೋಗ ಪ್ರಬಂಧ ಸ್ಪರ್ಧೆಯನ್ನು ನಡೆಸಲಾಗುವುದು.
ಶಾಂತಿವನ ಟ್ರಸ್ಟ್ (ರಿ) ಕಾರ್ಯದರ್ಶಿ ಹಾಗೂ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಇದರ ನಿರ್ದೇಶಕ ಡಾ| ಐ ಶಶಿಕಾಂತ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಷಯ:
* ಪ್ರಾಥಮಿಕ ಶಾಲಾ ವಿಭಾಗ– “ಮಕ್ಕಳಿಗೆ ಯೋಗದ ಅಗತ್ಯತೆ”.
* ಪ್ರೌಢಶಾಲಾ ವಿಭಾಗ “ಆರೋಗ್ಯ ಕಾಪಾಡುವಲ್ಲಿ ಯೋಗದ ಅಗತ್ಯತೆ”.
* ಕಾಲೇಜು ವಿಭಾಗ “ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಯುವಜನತೆ ಮತ್ತು ಯೋಗ”.
* ಸಾರ್ವಜನಿಕ ವಿಭಾಗ “ಸುಂದರ ಬದುಕಿಗೆ ಯೋಗದ ಅವಶ್ಯಕತೆ”.
-:ಸೂಚನೆ:-
* ಜನ್ಮ ದಿನಾಂಕದ ದೃಢೀಕರಣವನ್ನು ಸಲ್ಲಿಸುವುದು.
* ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ಹಾಗೂ ಪ್ರತೀ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ವಿಜೇತರಿಗೆ ಪ್ರಮಾಣ ಪತ್ರ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು.
* ಪ್ರಾಥಮಿಕ ಶಾಲಾ ವಿಭಾಗ ಪ್ರಥಮ-2000/- ದ್ವಿತೀಯ–1500/- ತೃತೀಯ–1000/-.
* ಪ್ರೌಢಶಾಲಾ ವಿಭಾಗ ಪ್ರಥಮ–3000/- ದ್ವಿತೀಯ–2500/- ತೃತೀಯ-2000/-.
* ಕಾಲೇಜು ವಿಭಾಗ ಪ್ರಥಮ–3500/- ದ್ವಿತೀಯ–3000/- ತೃತೀಯ-2500/-.
* ಸಾರ್ವಜನಿಕ ವಿಭಾಗ ಪ್ರಥಮ–4000/- ದ್ವಿತೀಯ–3500/- ತೃತೀಯ-3000/-.
* ಪ್ರಬಂಧದ ಪ್ರತಿ ಪುಟದಲ್ಲಿ ತಮ್ಮ ಹೆಸರು, ಊರು, ದೂರವಾಣಿ ಸಂಖ್ಯೆ, ಹಾಗೂ ಸ್ಪರ್ಧಿಸುವ ವಿಭಾಗವನ್ನು ಕಡ್ಡಾಯವಾಗಿ ನಮೂದಿಸಬೇಕು.
* ಪ್ರಬಂಧವನ್ನು A4 SIZE ನ ಪೇಪರ್ ನಲ್ಲಿ ಎರಡು ಪುಟ ಮೀರದಂತೆ ಕನ್ನಡ ಭಾಷೆಯಲ್ಲಿ ಬರೆದು ದಿನಾಂಕ 17/06/2021 ಗುರುವಾರ ಸಂಜೆ 5:00 ಗಂಟೆಯ ಒಳಗೆ ಈ ಕೆಳಕಂಡ Whatsapp ಸಂಖ್ಯೆಗಳಿಗೆ ಪ್ರತಿ ವಿಭಾಗದವರು ಕಳುಹಿಸಿ ಕೊಡಬೇಕು. ನಂತರ ಬಂದ ಪ್ರಬಂಧವನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ ಹಾಗೂ ತೀರ್ಪುಗಾರರ ನಿರ್ಣಯವೆ ಅಂತಿಮವಾಗಿರುತ್ತದೆ.
ಪ್ರಾಥಮಿಕ ವಿಭಾಗ (5ರಿಂದ 7ನೇ ತರಗತಿ):- 9740138308 (ವಿಶ್ವನಾಥ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ)
ಪ್ರೌಢಶಾಲಾ ವಿಭಾಗ(8ರಿಂದ 10ನೇ ತರಗತಿ):- 9901474771 (ಬಾಲಕೃಷ್ಣ ರೆಖ್ಯ, ಯೋಗ ಶಿಕ್ಷಕರು)
ಕಾಲೇಜು ವಿಭಾಗ:- 9480487081 (ಶೇಖರ ಕಡ್ತಲ, ರಾಜ್ಯ ಯೋಗ ಸಂಘಟಕರು)
ಸಾರ್ವಜನಿಕ ವಿಭಾಗ:-9480146703 (ಸಂಜೀವ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ)
ಶ್ರೀ ಬಿ ಸೀತಾರಾಮ ತೋಳ್ಪಾಡಿತ್ತಾಯ.