ಉಜಿರೆ: ಮಾಜಿ ಸಚಿವ ಸಿ.ಎಂ. ಉದಾಸಿ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.
ಸರಳ ಸಜ್ಜನಿಕೆಯ ಸಾತ್ವಿಕ ವ್ಯಕ್ತಿಯಾದ ಅವರು ಸ್ವತಃ ಕೃಷಿಕರಾಗಿದ್ದು ಕೃಷಿಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು. ನಮ್ಮ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳಿಗೆ ಪೂರ್ಣ ಬೆಂಬಲ ನೀಡಿದ್ದರು. ಹಾವೇರಿಯಲ್ಲಿ ನಾವು ಕೃಷಿಮೇಳ ಏರ್ಪಡಿಸಿದಾಗ ಸಕ್ರಿಯ ಸಹಕಾರ ನೀಡಿದ್ದರು.
ಅವರು ಅನೇಕ ಭಾಷೆಗಳನ್ನು ಬಲ್ಲವರಾಗಿದ್ದು ಭತ್ತದ ವ್ಯಾಪಾರಕ್ಕಾಗಿ ಅನೇಕ ಬಾರಿ ನಮ್ಮ ಜಿಲ್ಲೆಗೆ ಬಂದಿದ್ದು ತುಳುವಿನಲ್ಲೆ ಮಾತನಾಡುತ್ತಿದ್ದರು ಎಂದು ತಿಳಿಸಿ ಹೆಗ್ಗಡೆಯವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದ್ದಾರೆ.