ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ
ಮಂಗಳೂರು: ರಾಜ್ಯ ಸರಕಾರ ಪಿಯುಸಿ ಪರೀಕ್ಷೆ ರದ್ದುಮಾಡಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘಟನೆ ಆರೋಪಿಸಿದೆ.
ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎನ್ಎಸ್‌ಯುಐ ಪ್ರಧಾನ ಕಾರ್ಯದರ್ಶಿ ಮನೀಷ್ ಜಿ ರಾಜ್, ಕೊರೋನಾದಿಂದ ದೇಶದಲ್ಲಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇಲ್ಲಿ ಸರ್ಕಾರ ಇದೆಯೋ ಇಲ್ಲವೊ ಅಥವಾ ಸರ್ಕಾರ ಇಲ್ಲದೇ ಜನರು ಜೀವನ ನಡೆಸುತ್ತಿದ್ದಾರಾ...? ಎಂದು ಪ್ರಶ್ನಿಸಿದರು.
ರಾಜ್ಯದ ಶಿಕ್ಷಣ ಸಚಿವರು ಇತ್ತೀಚಿಗೆ ಪಿಯು ವಿದ್ಯಾರ್ಥಿಗಳ ಪರೀಕ್ಷೆ ರದ್ದು ಮಾಡಿದ್ದಾರೆ. ಸರಕಾಕ್ಕೆ ಇದರ ಬಗ್ಗೆ ಯಾವುದೇ ಒಂದು ಪ್ಲಾನಿಂಗ್ ಇಲ್ಲ. ಪರೀಕ್ಷೆ ರದ್ದು ಮಾಡಿ ಮುಂದಿನ ಯೋಜನೆ ಏನು ಎಂಬುದನ್ನು ಇನ್ನೂ ಯೋಚಿಸಿಲ್ಲ. ಕೇಂದ್ರದಲ್ಲಿ ಸಿಬಿಎಸ್‌ಇ ಪರೀಕ್ಷೆ ರದ್ದು ಮಾಡಿದ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಪಿಯು ಪರೀಕ್ಷೆ ರದ್ದು ಮಾಡಿದ್ದಾರೆ. ಹಾಗಿದ್ದರೂ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡುತ್ತೇವೆ ಅಂತ ಹೇಳ್ತಾರೆ ಎಂದು ಅವರು ಟೀಕಿಸಿದರು.
ಇಲ್ಲಿ ವಿದ್ಯಾರ್ಥಿಗಳ ಜೀವನದಲ್ಲಿ ಸರಕಾರ ಚೆಲ್ಲಾಟಾವಾಡುತ್ತಿದೆ. ಈ ಬಗ್ಗೆ ಎನ್ಎಸ್‌ಯುಐ ವಿದ್ಯಾರ್ಥಿಗಳ ಪರವಾಗಿ ಹೋರಾಟ ಮಾಡಲಿದೆ. ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ ಹಾಕುವ ಮತ್ತು ಮೂಲಕ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಿದೆ ಎಂದು ಅವರು ತಿಳಿಸಿದರು.