ಬ್ಯೂಟಿ ಟಿಪ್ಸ್: ಕರಿಬೇವಿನಲ್ಲೂ ಸೌಂದರ್ಯ ಅಡಗಿದೆ....!

Upayuktha
0


ಕರಿಬೇವು ಎಂದಾಕ್ಷಣ ಥಟ್ಟನೆ ತಲೆಗೆ ಬರುವುದು ಪದಾರ್ಥಕ್ಕೆ ಹಾಕುವ ಒಗ್ಗರಣೆ. ಅದ್ಯಾವ ಪದಾರ್ಥವೇ ಇರಲಿ. ಕರಿಬೇವಿನಿಂದ ಕೊಟ್ಟ ಒಗ್ಗರಣೆ ಎಂದರೆ ರುಚಿ ಹಿಡಿಸದೆ ಇರದು. ಮನೆಯಲ್ಲೇ ಬೆಳೆಯುವ ಇದರ ಗಿಡ ಬಹುಶಃ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ.


ಈ ಕರಿಬೇವಿನಲ್ಲೂ ಸೌಂದರ್ಯದ ಅಂಶ ಅಡಗಿದೆ ಎಂಬ ವಿಚಾರ ಬಹಳಷ್ಟು ಜನರಿಗೆ ತಿಳಿದೇ ಇರುವುದಿಲ್ಲ. ಮಹಿಳೆಯರಂತೂ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಬ್ಯೂಟಿಪಾರ್ಲರ್ ಗಳಿಗೆ, ಸ್ಕಿನ್ ಕೇರ್ ಕ್ರೀಮ್ ಗಳಿಗೆ ಮೊರೆ ಹೋಗುತ್ತಾರೆ. ದುಬಾರಿಯಾಗಿ ಖರ್ಚು ಮಾಡುತ್ತಾರೆ. ಈ ಎಲ್ಲದರ ನಡುವೆ ಮನೆಯಲ್ಲೇ ಇರುವ ಇಂತಹ ಗಿಡಗಳ ಔಷಧೀಯ ಸತ್ವವನ್ನು ತಿಳಿಯುವ ಗೊಡವೆಗೆ ಹೋಗುವುದಿಲ್ಲ.


ಇದರಲ್ಲಿ ಮುಖ್ಯವಾಗಿ ಪ್ರೋಟೀನ್ ಅಂಶಗಳಿದ್ದು ಹೆಂಗಸರಿಗೆ ತಲೆಕೂದಲಿಗೆ ಅತ್ಯಂತ ಪರಿಣಾಮಕಾರಿ ಸತ್ವವನ್ನು ಒಳಗೊಂಡಿದೆ. ಇದು ಕೂದಲು ಉದುರುವುದನ್ನು ತಡೆಯುತ್ತದೆ.ಅಷ್ಟೇ ಅಲ್ಲದೆ ಕೆಲವು ವೈದ್ಯಕೀಯ ಕಾರಣಗಳಿಂದಾಗಿ ಸಣ್ಣ ಪ್ರಾಯದಲ್ಲೇ ಕೂದಲು ಬೆಳ್ಳಗಾಗುತ್ತದೆ. ಅದಕ್ಕೆ ತೆಂಗಿನ ಎಣ್ಣೆಯೊಡನೆ ಇದರ ಎಲೆಯನ್ನು ಹಾಕಿ ಬಿಸಿ ಮಾಡಿ ಎಣ್ಣೆಯ ಬಣ್ಣ ಹಸಿರು ಬಣ್ಣಕ್ಕೆ ಬಂದೊಡನೆ ತಣ್ಣಗಾದ ನಂತರ ಕೂದಲಿನ ಬುಡಕ್ಕೆ ಹಾಕಿಕೊಂಡು ಅರ್ಧ ಗಂಟೆಯ ನಂತರ ಸ್ನಾನ ಮಾಡುವುದರಿಂದ ಕೂದಲು ಬೆಳ್ಳಗಾಗುವುದನ್ನು ತಪ್ಪಿಸಬಹುದು. ಆದರೆ ಈ ವಿಧಾನವನ್ನು ಕೇವಲ ಒಂದೆರಡು ಬಾರಿ ಮಾತ್ರವಲ್ಲದೆ ವಾರಕ್ಕೊಮ್ಮೆಯಾದರೂ ಮಾಡುತ್ತಲೇ ಇರುವುದರಿಂದ ಕೇಶ ಸೌಂದರ್ಯವನ್ಬು ಕಾಪಾಡಿಕೊಳ್ಳಬಹುದು.


ಕೇವಲ ತಲೆಗೆ ಮಾತ್ರವಲ್ಲದೆ ನಾವು ಸೇವಿಸುವ ಆಹಾರದಲ್ಲಿಯೂ ನಾವು ಕರಿಬೇವಿನ ಎಲೆಯನ್ನು ಸೇವಿಸುವುದರಿಂದ ಅನೇಕ ರೀತಿಯ ಪ್ರಯೋಜನಗಳಿವೆ. ತ್ವಚೆಯ ಕಾಂತಿಯನ್ನು ಕೂಡ ಇದು ಕಾಪಾಡಿಕೊಳ್ಳುತ್ತದೆ. ಅಷ್ಟೇ ಅಲ್ಲದೆ ತಲೆ ಹೊಟ್ಟು ನಿವಾರಣೆಗೆ ಕೂಡ ಸಹಾಯ ಮಾಡುತ್ತದೆ‌.


ಮನೆಯಲ್ಲೇ ಸುಲಭವಾಗಿ ದೊರೆಯುವ ಈ ಔಷಧೀಯ ಎಲೆಯನ್ನುಪಯೋಗಿಸಿ ಸೌಂದರ್ಯವನ್ನು ಕಾಪಾಡಿಕೊಂಡರೆ ರಾಸಾಯನಿಕಗಳ ಅವಶ್ಯಕತೆ, ದುಬಾರಿ ಖರ್ಚಿನ ಪ್ರಮೇಯವೇ ಒದಗುವುದಿಲ್ಲ. ಏನಂತೀರಾ....?


-ಅರ್ಪಿತಾ ಕುಂದರ್

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top