ರಾಜ್ಯದ ಉನ್ನತ ಶಿಕ್ಷಣ ಸಚಿವರು ರಾಜ್ಯದ ಎಲ್ಲಾ ವಿ.ವಿ.ಗಳ ಕುಲಪತಿಗಳಿಗೆ ಸೂಚನೆ ನೀಡಿದ್ದಾರಂತೆ. ಈ ಶೆೈಕ್ಷಣಿಕ ವರುಷದಿಂದಲೇ ಜ್ಯಾರಿಗೊಳ್ಳುವಂತೆ ಕನಾ೯ಟಕದ ಎಲ್ಲಾ ಪದವಿ ಕಾಲೇಜುಗಳಲ್ಲಿ ಮಾನವಿಕ ವಿಜ್ಞಾನ ಮೂಲ ವಿಜ್ಞಾನ, ಕಾಮರ್ಸ್ ಮುಂತಾದ ಪದವಿಗಳನ್ನು ಮೂರು ವರುಷದಿಂದ ನಾಲ್ಕು ವರುಷಗಳ ಅಂದರೆ ಎಂಟು ಸೆಮಿಸ್ಟರುಗಳ ಪದವಿ ಕೇೂಸು೯ಗಳಾಗಿ ಅನುಷ್ಠಾಗೊಳಿಸಬೇಕು ಅನ್ನುವ ಸೂಚನೆ ನೀಡಿದ್ದಾರೆನ್ನುವ ಸುದ್ದಿ ಇದೆ. ರಾಷ್ಟೀಯ ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುತ್ತೇವೆ ಅನ್ನುವ ತರಾತುರಿಯಲ್ಲಿ ಯಾವುದೇ ಪೂವ೯ ಮಾಹಿತಿ ಪೂರ್ವತಯಾರಿ ಇಲ್ಲದೆ ಏಕಾಏಕಿಯಾಗಿ ಈ ರೀತಿಯ ಸೂಚನೆ ನೀಡುವುದರಿಂದ ಉನ್ನತ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಬಹುದು ಅನ್ನುವುದು ಹಲವು ಶಿಕ್ಷಣ ತಜ್ಞರ ಅಭಿಪ್ರಾಯವೂ ಹೌದು. ಈ ಕುರಿತಾಗಿ ಉನ್ನತ ಶಿಕ್ಷಣ ವಲಯದಲ್ಲಿ ಗಂಭೀರವಾಗಿ ಚಿಂತನೆ ಮಾಡಬೇಕಾದ ಅಗತ್ಯವಿದೆ.
1. ವಿದ್ಯಾರ್ಥಿಗಳು ಯಾವ ಯಾವ ವಿಷಯ ಯಾವ ತರಗತಿಯಲ್ಲಿ ಅಧ್ಯಯನ ಮಾಡ ಬೇಕು. ನಾಲ್ಕನೇ ವರುಷದ ಜೇೂಡಣೆಯಿಂದ ವಿದ್ಯಾರ್ಥಿಗಳಿಗೆ ಸಿಗುವ ವಿಶೇಷ ಅನುಕೂಲವೇನು? ಈ ಕುರಿತಾಗಿ ವಿ.ವಿ.ಗಳಲ್ಲಿ ಸಂಪೂರ್ಣ ಮಾಹಿತಿ ಇದೆಯೇ? ಇದನ್ನು ವಿ.ವಿ. ಪ್ರಾಧ್ಯಾಪಕರುಗಳಾಗಲಿ ಕಾಲೇಜಿನ ಪ್ರಾಧ್ಯಾಪಕರುಗಳು ಕೂತು ವಿಷಯಗಳ ಅಧ್ಯಯನ ಸ್ವರೂಪವನ್ನು ಚರ್ಚೆ ಮಾಡಿ ನಿರ್ಧಾರಕ್ಕೆ ಬಂದಿದ್ದಾರೆಯೇ? ಇಂತಹ ಹತ್ತು ಹಲವು ಪ್ರಶ್ನೆಗಳು ನೇರ ಫಲಾನುಭವಿಗಳಾದ ಶಿಕ್ಷಕರು ಹಾಗುಾ ವಿದ್ಯಾರ್ಥಿಗಳಲ್ಲಿ ಮೂಡುವುದು ಸಹಜ ತಾನೇ?
2. ಈ ಹಿಂದೆ ಕೂಡಾ ಪದವಿ ಮಟ್ಟದಲ್ಲಿ ಇಂತಹ ಕೆಲವೂ ಸುಧಾರಣೆಗಳನ್ನು ತಂದಾಗ ಕೂಡಾ ಅದೇನು ಅಷ್ಟೊಂದು ಫಲಕಾರಿಯಾದ ಫಲಿತಾಂಶ ಇಂದಿಗೂ ನೀಡಿಲ್ಲ ಅನ್ನುವುದನ್ನು ಮತ್ತೆ ಮತ್ತೆ ನೆನಪಿಸ ಬೇಕಾಗುತ್ತದೆ.
3. ವಿದ್ಯಾರ್ಥಿಗಳಲ್ಲಿ ವಿಶೇಷ ಕೌಶಲ್ಯ ಮೂಡಿಸಬೇಕೆಂಬ ನಿಟ್ಟಿನಲ್ಲಿ ಪಠ್ಯೇತರ ಚಟುವಟಿಕೆಗಳಿಗೂ ಅಂಕ ನೀಡಿ ಪದವಿ ನೀಡ ಬೇಕು ಅನ್ನುವ ಕಾರಣಕ್ಕಾಗಿ (ECA) ಅದಕ್ಕಾಗಿಯೇ ಐವತ್ತು ಅಂಕಗಳನ್ನು ನೀಡುವ ಕ್ರಮ ಜ್ಯಾರಿಗೆ ತಂದರು ಅದು ಎಷ್ಟರ ಮಟ್ಟಿಗೆ ಫಲ ನೀಡಿದೆಯೊ ಅಥವಾ ಕಾಟಾಚಾರದ ಅಂಕಗಳೊ ಗೊತ್ತಿಲ್ಲ.
4. ಭಾರತೀಯ ಸಂವಿಧಾನವನ್ನು ಕಡ್ಡಾಯವಾಗಿ ಎಲ್ಲಾ ಪದವಿ ತರಗತಿಗಳಿಗೆ ಅಧ್ಯಯನದ ವಿಷಯವಾಗಿ ಅಳವಡಿಸಿದರೂ ಅಲ್ಲಿ ಕೂಡಾ ಈ ವಿಷಯವನ್ನು ಕಲಿಸುವ ಅಧ್ಯಾಪಕರ ಆಹ೯ತೆ ಏನು ಅನ್ನುವುದನ್ನು ಖಾತ್ರಿಪಡಿಸಲೇ ಇಲ್ಲ. ಕೆಲಸ ಕಡಿಮೆ ಆದರೆ ಯಾರು ಕೂಡಾ ಕಲಿಸಬಹುದೆಂಬ ಅನುಕೂಲ ಶಾಸ್ತ್ರದ ಪಾಠವನ್ನು ಕಾಲೇಜುಗಳಿಗೆ ಕಲಿಸಿ ಕೊಟ್ಟರು. ಇದು ಎಷ್ಟು ತಮಾಷೆ ಆಗಿದೆ ಅಂದರೆ, ಪಾಠ ಯಾರೂ ಮಾಡಬಹುದು, ಮೌಲ್ಯ ಮಾಪನ ರಾಜ್ಯಶಾಸ್ತ್ರ ಉಪನ್ಯಾಸಕರು ಮಾಡಲಿ. ಹಾಗಾದರೆ ಈ ವಿಷಯದ ಪಾವಿತ್ರ್ಯತೆ ಎಲ್ಲಿಗೆ ಬಂತು?
5. ಅದೇ ರೀತಿಯಲ್ಲಿ ಹೊಸ ಶಿಕ್ಷಣ ನೀತಿ ಒಂದು ಕ್ರಾಂತಿಕಾರಿ ಹೆಜ್ಜೆ ಅಂದು ಹೇಳಿಕೊಂಡು ಯಾವುದೇ ಪೂವ೯ ಯೇೂಜನೆ ಇಲ್ಲದೇ ನಾವೇ ಮೊದಲ ಬಾರಿಗೆ ಜ್ಯಾರಿ ಮಾಡಿದ್ಧೇವೆ ಅನ್ನುವ ವರದಿಯನ್ನು ಕೇಂದ್ರ ಸರಕಾರಕ್ಕೆ ರವಾನಿಸಿ ಸಾಧನೆಯ ಪಟ್ಟಿಯಲ್ಲಿ ಸೇರಿಸಿಕೊಳ್ಳುವುದೇ ಒಂದು ಉದ್ದೇಶವಾದರೆ ಖಂಡಿತವಾಗಿಯೂ ಇದರಿಂದ ಉನ್ನತ ಶಿಕ್ಷಣಕ್ಕೆ ಸಾಧಕಕ್ಕಿಂತ ಬಾಧಕವೇ ಜಾಸ್ತಿ.
6. ಇದರ ಪರಿಣಾಮಗಳ ಸಾಧ್ಯತೆ ಏನು? ಇದಾಗಲೇ ಇಂತಹ ಪದವಿಗಳಿಗೆ ಬರುವ ವಿದ್ಯಾರ್ಥಿಗಳಿಗೂ ಮತ್ತು ಹೆತ್ತವರಿಗೂ ಇರುವ ಒಂದು ಮನ:ಸ್ಥಿತಿ ಅಂದರೆ ಮೂರು ವರುಷಗಳಲ್ಲಿ ಪದವಿ ಮುಗಿದು ಬಿಡುತ್ತದಲ್ಲಾ... ಮತ್ತೆ ಉದ್ಯೋಗಕ್ಕೋ, ಉನ್ನತ ಶಿಕ್ಷಣಕ್ಕೋ ಹೇೂಗಬಹುದೆಂಬ ನಿಟ್ಟಿನಲ್ಲಿ ಅದೆಷ್ಟೊ ಬಡ ಕುಟುಂಬದ ಮಕ್ಕಳು ಇಂತಹ ಪದವಿ ಕಾಲೇಜುಗಳಿಗೆ ಸೇರಬಯಸುತ್ತಾರೆ. ಇಂತಹ ಆಥಿ೯ಕ ಸಾಮಾಜಿಕ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳಿಗೆ ಈ ಹೊಸ ಶಿಕ್ಷಣ ನೀತಿಯ ಮಾಹಿತಿ ಸಿಗದೇ ಹೇೂದರೆ ಅವರು ಕಾಲೇಜಿನ ಕಡೆಗೆ ಮುಖ ಮಾಡುವುದೇ ಕಷ್ಟವಾದೀತು. ಉಪನ್ಯಾಸಕರೇನೊ ವರ್ಕ್‌ಲೇೂಡ್ ಜಾಸ್ತಿ ಆಯಿತೆಂದು ಲೆಕ್ಕ ಹಾಕಬಹುದು. ಆದರೆ ಕೆಲವೊಂದು ವಿಷಯಗಳಿಗೆ ವಿದ್ಯಾರ್ಥಿಗಳ ಸೇಪ೯ಡೆ ಕಮ್ಮಿಯಾಗಬಹುದು ಎಂಬ ಎಚ್ಚರಿಕೆಯೂ ಬೇಕು.
7. ವಿದ್ಯಾರ್ಥಿಗಳು ಕಡಿಮೆಯಾಗುತ್ತಾರೆ ಅನ್ನುವುದಕ್ಕೆ ಉದಾ: ನನ್ನ ಅನುಭವಕ್ಕೆ ಬಂದ ಹಾಗೇ ಬಿ.ಎ. ತರಗತಿಗಳಲ್ಲಿ ಮೊದಲ ವಷ೯ದಲ್ಲಿ ಸುಮಾರು 25 ರಿಂದ 30 ವಿದ್ಯಾರ್ಥಿಗಳು ಸೇಪ೯ಡೆಗೊಂಡರೆ 2ನೇ ವರುಷದಲ್ಲಿಅದು 20ಕ್ಕೆ ಬಂದಿರುತ್ತದೆ. ಅದೇ ಮೂರನೇ ಅಂತಿಮ ವರುಷಕ್ಕೆ ಬಂದಾಗ 15ಕ್ಕೆ ಬಂದು ನಿಂತರೆ ನಾವು ಬಚಾವ್ ಅನ್ನುವ ಮಟ್ಟದಲ್ಲಿ ಹೆಚ್ಚಿನ ಪದವಿ ಕಾಲೇಜುಗಳು ಉಸಿರಾಡುವ ಪರಿಸ್ಥಿತಿಯಲ್ಲಿ ಇರುವಾಗ ಏಕಾ ಏಕಿಯಾಗಿ ಪದವಿ ನಾಲ್ಕು ವರುಷ ಅಂದರೆ ವಿದ್ಯಾರ್ಥಿಗಳ ಪ್ರವೇಶಾತಿ ಮೇಲೆ ಯಾವ ಪರಿಣಾಮ ಬೀರಬಹುದು ಅನ್ನುವ ಕುರಿತಾಗಿ ಅಧ್ಯಯನ ನಡೆಸಬೇಕಾದ ಅಗತ್ಯ ಇಲ್ಲವೇ?
ಅಂತೂ ಯಾವುದೇ ಹೊಸ ಪ್ರಯೇೂಗ ಶಿಕ್ಷಣ ವಲಯದಲ್ಲಿ ಮಾಡುವಾಗ ಹತ್ತು ಬಾರಿ ಆಲೇೂಚಿಸಿ ಚಚಿ೯ಸಿ ನಿಧಾ೯ರ ತೆಗೆದುಕೊಳ್ಳುವುದು ಹಿತಕರವಲ್ಲವೇ? ಮೊದಲು ನಿಧಾ೯ರ ಅನಂತರ ಮಾಹಿತಿ ಅನ್ನುವುದು ಆರೇೂಗ್ಯ ಪೂರ್ಣವಾದ ಆಡಳಿತದ ಲಕ್ಷಣ ಅಲ್ಲವೇ ಅಲ್ಲ ಅನ್ನುವುದು ನನ್ನ ಖಚಿತ ಅಭಿಪ್ರಾಯ. ನಿಮ್ಮ ಅಭಿಪ್ರಾಯಕ್ಕೂ ಸ್ಥಳವಿದೆ.
-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ