7ನೇ ವರ್ಷದ ವಿಶ್ವಯೋಗ ದಿನಾಚರಣೆ- ಜೂನ್ 21

Upayuktha
0

“ಯೋಗವು ಭಾರತದ ಪುರಾತನ ಸಂಪ್ರದಾಯದ ಒಂದು ಅಮೂಲ್ಯ ಕೊಡುಗೆ.  ಇದು ದೇಹ ಮತ್ತು ಮನಸ್ಸನ್ನು ಚಿಂತನೆ ಮತ್ತು ಕಾರ್ಯವನ್ನು ನಿರ್ಬಂಧ ಮತ್ತು ಸಫಲತೆಯನ್ನು ಮನುಷ್ಯ ಮತ್ತು ಪ್ರಕೃತಿಯೊಂದಿಗೆ ಹೊಂದಿಕೆಯನ್ನು ಒಟ್ಟಾಗಿರಿಸುವುದನ್ನು ಒಳಗೊಂಡಿರುತ್ತದೆ.


ಡಿಸೆಂಬರ್ 11, 2014 ರಂದು 193 ಸದಸ್ಯರೊಳಗೊಂಡ ವಿಶ್ವ ಸಂಯುಕ್ತ ಸಂಸ್ಥಾನ ಒಮ್ಮತದಿಂದ ಜೂನ್ 21 ದಿನವನ್ನು “ವಿಶ್ವ ಯೋಗ ದಿನ” ಎಂದು 177 ಸದಸ್ಯ ರಾಷ್ಟ್ರಗಳು ಸಹಭಾಗಿತ್ವ ವಹಿಸಿಕೊಂಡು ಘೋಷಿಸಿದವು. ವಿಶ್ವ ಸಂಯುಕ್ತ ಸಂಸ್ಥಾನ ಈ ನಿರ್ಧಾರವನ್ನು ಯೋಗವು ಆರೋಗ್ಯಕ್ಕೆ ಮತ್ತು ಸುಸ್ಥಿತಿಗೆ ಪರಿಪೂರ್ಣ ಸಾಮೀಪ್ಯ ಒದಗಿಸುವುದಾಗಿ ಮತ್ತು ಯೋಗಾಭ್ಯಾಸದಿಂದ ಆಗುವ ಪ್ರಯೋಜನಗಳನ್ನು ವಿಶ್ವದ ಎಲ್ಲಾ ಜನರ ಆರೋಗ್ಯಾಭಿವೃದ್ಧಿಗೆ ವ್ಯಾಪಕವಾಗಿ ಪ್ರಚಾರ ಮಾಡಬೇಕೆಂದು ಅಂಗೀಕರಿಸಿತು.  ಯೋಗವು ಹಾಗೆಯೇ ಯೋಗಾಭ್ಯಾಸವು ಕಾಯಿಲೆಗಳ ಪ್ರತಿಬಂಧನ, ಆರೋಗ್ಯದ ಸುಧಾರಣೆ ಮತ್ತು ಜೀವನ ಶೈಲಿ ಸಂಬಂಧಿ ತೊಂದರೆಗಳನ್ನು ಹತೋಟಿಯಲ್ಲಿಡಲು ಸಹಕರಿಸುವುದು ತಿಳಿದ ವಿಚಾರವೇ.

ಶ್ವಾಸಕೋಶದ ಸಾಮರ್ಥ್ಯ ವೃದ್ಧಿಗೆ, ರೋಗ ನಿರೋಧಕ ಶಕ್ತಿಯ ಬಲವರ್ಧನೆಗೆ, ಒಟ್ಟಾರೆ ದೇಹ ಮತ್ತು ಮನಸ್ಸಿನ ಉತ್ತಮ ಆರೋಗ್ಯಕ್ಕಾಗಿ ನಿರಂತರ ಯೋಗಾಭ್ಯಾಸ ಅಗತ್ಯವಿದೆ. ಅಂತರಾಷ್ಟ್ರೀಯ ಯೋಗ ದಿನ ಅಥವಾ ವಿಶ್ವ ಯೋಗ ದಿನವನ್ನು ಪ್ರತಿವರ್ಷ ಜೂನ್ 21ರಂದು ಆಚರಿಸಲಾಗುತ್ತದೆ.


ಯೋಗ ಎಂದರೆ ಏನು?

ಯೋಗವು ಮೂಲತಃ ಆಧ್ಯಾತ್ಮದ ಆಧಾರದಿಂದಿರುವ/ತಳಹದಿ ಹೊಂದಿರುವ ಒಂದು ಸೂಕ್ಷ್ಮವಾದ ವಿಜ್ಞಾನದ ಶಾಖೆಯಾಗಿದ್ದು ದೇಹ ಮತ್ತು ಮನಸ್ಸುಗಳ ಜೊತೆ ಹೊಂದಾಣಿಕೆಯನ್ನು ತರಲು ಬೆಳಕು ಹರಡುವಂತದ್ದು ಇದು ಆರೋಗ್ಯವಾಗಿ ಬಾಳಲು ಒಂದು ವಿಜ್ಞಾನ ಮತ್ತು ಕಲೆ.


ಯೋಗದ ಪ್ರಾಥಮಿಕಗಳು:

ಯೋಗವು ಮನುಷ್ಯನ ದೇಹ, ಮನಸ್ಸು, ಮನೋಭಾವ ಹಾಗೂ ಚೈತನ್ಯದ ಮಟ್ಟದ ಮೇಲೆ ಕೆಲಸ ನಿರ್ವಹಿಸುತ್ತದೆ. ಇದರಿಂದಾಗಿ ಯೋಗವು ಸ್ಥೂಲವಾಗಿ ನಾಲ್ಕು ವರ್ಗಗಳಾಗಿ ಅಭಿವೃದ್ಧಿಗೊಂಡವು, ಕರ್ಮಯೋಗದಲ್ಲಿ ದೇಹವನ್ನು ಜ್ಞಾನ ಯೋಗದಲ್ಲಿ ಮನಸ್ಸನ್ನು ಭಕ್ತಿಯೋಗದಲ್ಲಿ ಭಾವನಾತ್ಮಕ ಜೀವನವನ್ನು ಮನೋಭಾವವನ್ನು ಕ್ರಿಯಾಯೋಗದಲ್ಲಿ ದೇಹದ ಚೈತನ್ಯವನ್ನು ನಾವು ಉಪಯೋಗಿಸುತ್ತೇವೆ. ಪ್ರತಿಯೊಂದು ಯೋಗ ಪದ್ಧತಿಯೂ ಈ ಮೇಲಿನ ಒಂದು ಅಥವಾ ಹೆಚ್ಚಿನ ವರ್ಗಗಳ ವ್ಯಾಪ್ತಿಯಲ್ಲಿಯೇ ಬರುತ್ತದೆ.


ಪ್ರತಿಯೋರ್ವನೂ ತನ್ನದೇ ಆದ ವೈಶಿಷ್ಟ್ಯವನ್ನು ಈ ನಾಲ್ಕು ವಿಚಾರಗಳ ಸಂಯೋಜನೆಯಿಂದ ಹೊಂದಿಕೊಂಡಿರುತ್ತಾನೆ. ಗುರು (ಬೋಧಕ)ವಿಗೆ ಮಾತ್ರ ಈ ನಾಲ್ಕು ಪ್ರಾಥಮಿಕ ಮಾರ್ಗಗಳನ್ನು ಸೂಕ್ತವಾಗಿ ಜೋಡಿಸಿ ಪ್ರತಿಯೊಬ್ಬ ಅಕಾಂಕ್ಷಿಗೆ ತೋರಿಸಲು ಸಾಧ್ಯ.  ಗುರುಗಳ ಮಾರ್ಗದರ್ಶನದಲ್ಲೇ ಕ್ರಿಯೆ ಮಾಡುವುದು ಸೂಕ್ತವೆಂದು ಹಿಂದಿನ ಎಲ್ಲಾ ಯೋಗದ ಟೀಕೆ ಟಿಪ್ಪಣಿಗಳು ಒತ್ತಿ ಹೇಳಿವೆ.


ಪಾರಂಪರಿಕ ಯೋಗದ ಪ್ರಕಾರಗಳು ಯೋಗದ ಬೇರೆ ಬೇರೆ ತತ್ವದರ್ಶನಗಳು, ಪರಂಪರೆಗಳು, ಪೀಳಿಗೆಗಳು, ಗುರುಶಿಷ್ಯ ಪರಂಪರೆಗಳು ಬೇರೆ ಬೇರೆ ಹೊಸ ಪರಂಪರೆಗಳು ಮೇಲೆಳುವಂತೆ ಕಾರಣಗಳಾದವು. ಇವುಗಳ ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ, ಪತಾಂಜಲಿ ಯೋಗ, ಕುಂಡಲಿನಿ ಯೋಗ, ಹಠಯೋಗ, ಧ್ಯಾನಯೋಗ, ಮಂತ್ರಯೋಗ, ಲಯಯೋಗ, ರಾಜಯೋಗ, ಜೈನಯೋಗ, ಬೌದ್ಧಯೋಗ, ಇತ್ಯಾದಿಗಳನ್ನು ಒಳಗೊಂಡಿವೆ.  ಯೋಗದ ಪ್ರತಿಯೊಂದು ಪ್ರಕಾರವೂ ತನ್ನದೇ ಆದ ಮಾರ್ಗ ಮತ್ತು ಅಭ್ಯಸಿಸುವಿಕೆಯನ್ನು ಹೊಂದಿ ಯೋಗದ ಅಚಿತಿಮ ಗುರಿ ಮತ್ತು ಉದ್ದೇಶವನ್ನು ತಲುಪುವುದರಲ್ಲಿ ತೊಡಗಿವೆ.


ಆರೋಗ್ಯ ಮತ್ತು ಸುಸ್ಥಿತಿಗೆ ಯೋಗದ ಅಭ್ಯಾಸಗಳು:

ವ್ಯಾಪಕವಾಗಿ ತೊಡಗಿಸಿಕೊಂಡಿರುವ ಯೋಗಸಾಧನಗಳು ಇಂತಿವೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ ಸಮಾಧಿ, ಬಂಧುಗಳು, ಹಾಗೂ ಮುದ್ರೆಗಳು, ಷಟ್ಕರ್ಮಗಳು, ಯುಕ್ತಾಹಾರ, ಮಂತ್ರಜಪ, ಯುಕ್ತ ಕರ್ಮ ಇತ್ಯಾದಿ.


ಯೋಗಾಭ್ಯಾಸಿಗಳಿಗೆ ಸಾಮಾನ್ಯ ಮಾರ್ಗಸೂಚಿ (GENERAL GUIDELINESS FOR YOGA PRACTICE):


ಯೋಗಾಭ್ಯಾಸಿಯು ಯೋಗ ಮಾಡುವಾಗ ಕೆಳಗೆ ಕೊಟ್ಟಂತಹ ಮಾರ್ಗದರ್ಶನದ ಮಹತ್ವಗಳನ್ನು ಪಾಲಿಸಬೇಕು.

ಯೋಗಾಬ್ಯಾಸದ ಮೊದಲು

1. “ಶೌಚ” ಎಂದರೆ ಶುಚಿತ್ವ, ಇದು ಯೋಗಾಭ್ಯಾಸಕ್ಕೆ ಪ್ರಮುಖ ಅವಶ್ಯಕತೆ, ಇದು ಪರಿಸರ, ದೇಹ ಮತ್ತು ಮನಸ್ಸನ್ನು ಒಳಗೊಂಡಿರುತ್ತದೆ.

2. ಯೋಗಾಭ್ಯಾಸವನ್ನು ಶಾಂತ ಹಾಗೂ ನಿಶ್ಯಬ್ದದ ವಾತಾವರಣದಲ್ಲಿ ವಿಶ್ರಾಂತಗೊಂಡ ದೇಹ ಮತ್ತು ಮನಸ್ಸಿನಿಂದ ಮಾಡಬೇಕು.

3. ಯೋಗಾಭ್ಯಾಸವನ್ನು ಖಾಲಿ ಯಾ ಹಗುರ ಹೊಟ್ಟೆಯಲ್ಲಿ ಮಾಡಬೇಕು.  ನಿಶ್ಯಕ್ತಿ ತೋರಿದಲ್ಲಿ ಸ್ವಲ್ಪ ಜೇನನ್ನು ಉಗುರು ಬಿಸಿ ನೀರಲ್ಲಿ ಸೇವಿಸಬಹುದು.

4. ಯೋಗಾಭ್ಯಾಸದ ಮೊದಲು ಮೂತ್ರಕೋಶ ಮತ್ತು ಮಲ ಖಾಲಿಯಾಗಿರಬೇಕು.  

5. ಚಾಪೆ, ಯೋಗದ ಚಾಪೆ, ಜಮಾಖಾನ ದಪ್ಪದ ಬಟ್ಟೆ ಅಥವಾ ಚಾದರ ಯಾ ಮಡಿಸಿದ ಮಲಗುವ ಬಟ್ಟೆಯ್ನನು ಯೋಗಾಭ್ಯಾಸಕ್ಕೆ ಉಪಯೋಗಿಸಿ.

6. ಹಗುರ ಹಾಗೂ ಹಿತಕರವಾದ ಹತ್ತಿಯ ಬಟ್ಟೆ ಅಪೇಕ್ಷಣೀಯ ಇದರಿಂದ ದೇಹದ ಚಾಲನೆ ಸುಲಭವಾಗುತ್ತದೆ.

7. ಆಯಾಸಗೊಂಡ ಪರಿಸ್ಥಿತಿ ಅಸೌಖ್ಯ ಅತಿ ಒತ್ತಡದಿಂದ ಬಳಲಿದ್ದಾಗ ಯೋಗ ಮಾಡಬಾರದು.

8. ದೀರ್ಘಕಾಲದಿಂದ ರೋಗ/ನೋವು/ಹೃದಯ ಸಂಬಂಧಿ ತೊಂದರೆಗಳಿದ್ದಲ್ಲಿ ಯೋಗಾಭ್ಯಾಸ ಆರಂಭಿಸುವ ಮೊದಲು ಸೂಕ್ತ ವೈದ್ಯರನ್ನು ಅಥವಾ ಯೋಗ ಥೆರಪಿಸ್ಟ್‌ರನ್ನು ಸಂದರ್ಶಿಸಿರಿ.

9. ಗರ್ಭವತಿಯಾದ ಮತ್ತು ಋತುಸ್ರಾವದ ಸಮಯದಲ್ಲಿ ಸ್ತ್ರೀಯರು ಯೋಗ ಮಾಡುವುದಾದರೆ ಯೋಗ ತಜ್ಞರನ್ನು ಸಂಪರ್ಕಿಸಿಯೇ ಮಾಡಿರಿ.


'ಯೋಗರತ್ನ’ ಶ್ರೀ ಗೋಪಾಲಕೃಷ್ಣ ದೇಲಂಪಾಡಿ

ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್‌ಪೆಕ್ಟರ್

ಅಂತರರಾಷ್ಟ್ರೀಯ ಯೋಗ ತೀರ್ಪುಗಾರರು

ಫೋನ್ ನಂ. : 9448394987


Key Words: International Yoga Day, World Yoga Day, ಅಂತಾರಾಷ್ಟ್ರೀಯ ಯೋಗ ದಿನ, ವಿಶ್ವ ಯೋಗ ದಿನಾಚರಣೆ, ಯೋಗಾಭ್ಯಾಸ


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top