ಮಂಗಳೂರು: 7ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ತಯಾರಿ ದೇಶಾದ್ಯಂತ ಸಂಭ್ರಮದಿಂದ ನಡೆದಿದೆ. ಅಂತೆಯೇ ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಇಲಾಖೆ ಮತ್ತು ದೇಲಂಪಾಡಿ ಯೋಗ ಪ್ರತಿಷ್ಠಾನದ ವತಿಯಿಂದ 7ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪೂರ್ವಭಾವಿ ತಯಾರಿ ನಡೆದಿದೆ.
ಈಗಾಗಲೇ ದೇಲಂಪಾಡಿ ಯೋಗ ಪ್ರತಿಷ್ಠಾನದ ವತಿಯಿಂದ ಬೆಳಗ್ಗೆ 6:30ರಿಂದ 8 ಗಂಟೆಯ ವರೆಗೆ ಹಾಗೂ 10ರಿಂದ 11:15ರ ವರೆಗೆ ಎರಡು ಬ್ಯಾಚ್‌ಗಳಲ್ಲಿ ಮತ್ತು ಸಂಜೆ 4ರಿಂದ 5:15ರ ವರೆಗೆ ಮೂರು ಆನ್‌ಲೈನ್ ಯೋಗಾಭ್ಯಾಸ ತರಗತಿಗಳು ಉಚಿತವಾಗಿ ನಡೆಯುತ್ತಿವೆ. ಸುಮಾರು 250ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ಸಿದ್ಧತಾ ಯೋಗ ತರಗತಿಗಳಲ್ಲಿ ಭಾಗವಹಿಸುತ್ತಿದ್ದಾರೆ.
ನಗರದ ಪ್ರತಿಷ್ಠಿತ ಅಲೋಶಿಯಸ್ ಹಾಗೂ ಎಸ್‌ಡಿಎಂ ಬಿಸಿನೆಸ್ ಮ್ಯಾನೇಜ್‌ಮೆಂಟ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.
ಯೋಗವು ಮೂಲತಃ ಒಂದು ಆಧ್ಯಾತ್ಮಿಕ ಅನುಶಾಸನವಾಗಿದೆ. ಅದರಲ್ಲಿ ಪರಿಷ್ಕೃತ ವಿಜ್ಞಾನ ಆಧರಿತ ಯೋಗವೂ ಸೇರಿದೆ. ಇದು ಆರೋಗ್ಯಕರ ಜೀವನ ಕಲೆ ಮತ್ತು ವಿಜ್ಞಾನವಾಗಿದೆ. ಇಂದು ಜಗತ್ತಿನ ಎಲ್ಲ ದೇಶ-ಜನಾಂಗಗಳನ್ನೂ ಭಾರತೀಯ ಜೀವನಪದ್ಧತಿಯ ಭಾಗವೇ ಆಗಿರುವ ಯೋಗವು ಆಕರ್ಷಿಸುತ್ತಿದೆ.
ಯೋಗದಿಂದ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ವಿಕಸನಕ್ಕೆ ಸಹಕಾರಿಯಾಗುತ್ತದೆ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


