300 ವರ್ಷ ಹಳೆಯದಾದ ದೈವದ ಮೂರ್ತಿ, ಪರಿಕರಗಳು ಪತ್ತೆ

Upayuktha
0

ಗುರುಪುರ: ಗುರುಪುರ ಮಾಣಿಬೆಟ್ಟು ಶ್ರೀ ಕೊರ್‍ದಬ್ಬು ಪರಿವಾರ ದೈವಸ್ಥಾನದ ಸಮೀಪ ಮೂಲ ಸಾನಿಧ್ಯವಿದ್ದ ಜಾಗದಲ್ಲಿ ಉತ್ಖನನ ಮಾಡಿದ ಸಂದರ್ಭ ಸುಮಾರು 300 ವರ್ಷಗಳಷ್ಟು ಹಳೆಯದಾದ ದೈವದ ಮೂರ್ತಿ, ಪರಿಕರಗಳು ಪತ್ತೆಯಾಗಿವೆ.


ಇಲ್ಲಿನ ಪರಿಸರವಾಸಿಗಳಿಗೆ ಹಲವಾರು ವರ್ಷಗಳಿಂದ ಈ ಜಾಗದಲ್ಲಿ ದೋಷಗಳು ಕಂಡುಬರುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಈ ಹಿಂದೆ ನಡೆಸಿದ ಹಲವಾರು ಪ್ರಶ್ನೆ ಚಿಂತನೆಗಳು ಅಷ್ಟೊಂದು ಸಮರ್ಪಕವಾದ ಪರಿಹಾರ ವಿಧಾನಗಳನ್ನು ಸೂಚಿಸುವಲ್ಲಿ ವಿಫಲವಾಗಿತ್ತು. ಈ ಕಾರಣದಿಂದ ಇನ್ನಷ್ಟು ಸಮಸ್ಯೆಗಳು ಕಂಡುಬರಲು ದೈವಜ್ಞರಾದ ಶ್ರೀ ಶಶಿಕುಮಾರ್‌ ಪಂಡಿತ್ ಅವರನ್ನು ಸಂಪರ್ಕಿಸಿದಾಗ ತಕ್ಷಣವೇ ಇಲ್ಲಿ ಪ್ರಶ್ನೆ ಚಿಂತನೆಗಳು ನಡೆಸುವ ಅನಿವಾರ್ಯವಿದ್ದು, ಪರಿಹಾರ ಕ್ರಮಗಳು ಆದಷ್ಟು ಬೇಗನೇ ನಡೆಸದಿದ್ದರೆ ಮುಂದೆ ಹಲವಾರು ದೋ಼ಷಗಳು ಸಂಭವಿಸುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದರಿಂದ ಇಲ್ಲಿ ಪ್ರಶ್ನೆ ಚಿಂತನೆಯನ್ನು ದೈವಜ್ಞರಾದ ಶ್ರೀ ಶಶಿಕುಮಾರ್‌ ಪಂಡಿತ್‌ರವರ ನೇತೃತ್ವದಲ್ಲಿ ನಡೆಸಲಾಯಿತು.


ಅದರಲ್ಲಿ ಕಂಡುಕೊಂಡಂತೆ, ಈ ಜಾಗದಲ್ಲಿ ಕಾವೂರಿನ ತಂತ್ರಿಗಳಾದ ಕೆ. ವಿನಾಯಕ ಕಾರಂತರವರ ನೇತೃತ್ವದಲ್ಲಿ ನಡೆಸಿದ ಉತ್ಖನನ ಸಂದರ್ಭದಲ್ಲಿ ಈ ಹಿಂದೆ ಭೂಗರ್ಭದಲ್ಲಿ ಹುದುಗಿದ್ದ ಪ್ರಾಚೀನ ಕಾಲದ ಸುಮಾರು 300 ವರ್ಷಗಳಷ್ಟು ಹಳೆಯದಾದ ಕೊರ್‍ದಬ್ಬು ಅಥವಾ ಪಂಜುರ್ಲಿ ದೈವದ ಮೂರ್ತಿ, ಕಂಚಿನ ಮೊಲ, ಖಡ್ಸಲೆ, ಗೋಣ (ಕೋಣ), ದೈವದ ಕಲ್ಲು, ಗಂಟೆಮಣಿ, ಸುತ್ತಿಗೆ, ತಂದೇಲ್, ದೀಪ ಮತ್ತಿತರ ಸೊತ್ತುಗಳು ಪತ್ತೆಯಾಗಿವೆ. ಇವುಗಳಲ್ಲಿ ದೀಪ ಮಣ್ಣಿದ್ದಾಗಿದ್ದರೆ, ಉಳಿದ ಸೊತ್ತುಗಳು ಪಂಚಲೋಹ, ಕಂಚು, ಹಿತ್ತಾಳೆ ಮತ್ತು ಕಬ್ಬಿಣದ್ದಾಗಿವೆ.


ಇವುಗಳಲ್ಲಿ ವಿಶೇಷವೆಂದರೆ ಇಷ್ಟು ವರ್ಷ ಹಳೆಯದಾಗಿದ್ದರೂ ಈ ಪರಿಕರಗಳು ಮಣ್ಣಿನಡಿಯಲ್ಲಿ ಹುದುಗಿಯೂ ನಾಶವಾಗದೇ ಉಳಿದಿರುವುದು ವಿಸ್ಮಯವೇ ಸರಿ. ಅಲ್ಲದೆ ತುಳು ನಾಡಿನ ದೈವಗಳ ಕಾರಣೀಕತೆಯನ್ನು ಪ್ರತಿಬಿಂಬಿಸುವ ಮತ್ತೊಂದು ನಿದರ್ಶನವಾಗಿದೆ.


ಈ ವಿಷಯಕ್ಕೆ ಸಂಬಂಧಿಸಿದಂತೆ ಉತ್ಖನನದ ಮುಂದಾಳತ್ವವನ್ನು ವಹಿಸಿದ್ದ ವಿನಯ ಕುಮಾರ್‌ ಶೆಟ್ಟಿಯವರು ಈ ಕುರಿತು ಮಾತನಾಡಿದರು.


ಈ ಹಿಂದೆಯೂ ಹಲವಾರು ವರ್ಷಗಳ ಇತಿಹಾಸವಿರುವ ಪುರಾತನ ಕ್ಷೇತ್ರಗಳನ್ನು ಪ್ರಶ್ನೆ ಚಿಂತನೆಯ ಮುಖಾಂತರ ಉತ್ತಮವಾದ ಪರಿಹಾರ ಮಾರ್ಗಗಳನ್ನು ಸೂಚಿಸಿ, ಜೀರ್ಣೋದ್ಧಾರವನ್ನು ಮಾಡಿಸಿದಂತಹ ದೈವಜ್ಞರಾದ ಶ್ರೀ ಶಶಿಕುಮಾರ್‌ ಪಂಡಿತ್‌ರವರು ಇಲ್ಲಿಯೂ ಈ ಕ್ಷೇತ್ರದ ದೈವಗಳ ಪುನರ್‌ ಪ್ರತಿಷ್ಠಾಪನೆಗೆ ಕಾರಣೀಭೂತರಾಗಿರುವುದು ಮತ್ತೊಮ್ಮೆ ಜ್ಯೋತಿಷ್ಯ ಚಿಂತನೆಯನ್ನು ಜನಸಾಮಾನ್ಯರು ಭಕ್ತಿ ಗೌರವದಿಂದ ಕಾಣುವಂತಾಗಿದೆ:

- ವಿನಯ ಕುಮಾರ್‌ ಶೆಟ್ಟಿ



ಅಲ್ಲದೆ ಇಲ್ಲಿ ಈ ಹಿಂದೆ ಭೂಗರ್ಭದಲ್ಲಿ ಅಡಗಿದ್ದ ದೈವ ಪರಿಕರಗಳನ್ನು ಪತ್ತೆ ಹಚ್ಚುವಲ್ಲಿ ಹಲವಾರು ಬಾರಿ ವಿಫಲವಾಗಿದ್ದು, ಈ ಕುರಿತಂತೆ ಕಾವೂರಿನ ವಿನಾಯಕ ಕಾರಂತರು, ಇದನ್ನು ಸಮರ್ಪಕವಾಗಿ ಪತ್ತೆ ಹಚ್ಚಿ ಹೊರ ತೆಗಿಯುವಲ್ಲಿ ಇವರು ಹಾಗೂ ಇವರ ತಂಡದ ಸದಸ್ಯರಾದ ವಾಸುದೇವ ಭಟ್ ಸಫಲರಾಗಿದ್ದಾರೆ.

-ದೈವಜ್ಞ ಶಶಿಕುಮಾರ್‌ ಪಂಡಿತ್‌



ಭೂತಾರಾಧನೆಯ ಬಗ್ಗೆ ಜನಸಾಮಾನ್ಯರಲ್ಲಿ ಹಲವಾರು ಗೊಂದಲಗಳು ಮೂಡುತ್ತಿರುವ ಈ ಸಂದರ್ಭದಲ್ಲಿ ದೈವಗಳ ಕಾರಣೀಕತೆಗಳನ್ನು ಸಾರುವಂತಹ ಇಂತಹ ನಿದರ್ಶನಗಳು ಹಾಗೂ ಇದಕ್ಕೆ ಕಾರಣೀಭೂತರಾದಂತಹ ದೈವಜ್ಞರಾದ ಶ್ರೀ ಶಶಿಕುಮಾರ್‌ ಪಂಡಿತ್‌ ಹಾಗೂ ತಂತ್ರಿಗಳಾದ ಕಾವೂರಿನ ಕೆ ವಿನಾಯಕ್‌ ಕಾರಂತ್‌ರವರ ದಕ್ಷ ಹಾಗೂ ನಿಷ್ಟೆಯ ಶ್ರಮ ಹಾಗೂ ಗ್ರಾಮವಾಸಿಗಳ ಬೆಂಬಲ ಪ್ರಯತ್ನ ಯಶಸ್ವಿಯಾಗಿರುವುದು ನಿಜಕ್ಕೂ ಶ್ಲಾಘನೀಯ.

-ಕೆ. ವಿನಾಯಕ ಕಾರಂತ


 ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top