ಹುಟ್ಟಿದಾಗಿನಿಂದ ಶುರುವಾಗುವ ಕಲಿಕೆಯ ತುಡಿತ ಕೊನೆ ಉಸಿರಿನವರೆಗೂ ಉಳಿಯುವುದು ಮಾನವರಲ್ಲಿಯೇ. ಸದಾ ಹೊಸತನ್ನು ಕಲಿಯಬೇಕೆನ್ನುವ ಮನುಕುಲದ ಬಯಕೆ ನಿನ್ನೆ ಮೊನ್ನೆಯದಲ್ಲ. ತುಂಡು ಬಟ್ಟೆಯಲ್ಲಿದ್ದ ಮನುಷ್ಯ ಇಂದು ಚಂದ್ರಲೋಕಕ್ಕೆ ಹೋಗಿ ಬರುವುದಕ್ಕೆ ಮೂಲ ಕಾರಣ ಆತನಲ್ಲಿದ್ದ ಹೊಸತನ್ನು ಕಲಿಯಬೇಕೆನ್ನುವ ಹಂಬಲ ಹಾಗೂ ಅದಕ್ಕೆ ಸಿಕ್ಕ ಅವಕಾಶ.
ನಾವು ಬದುಕಿನುದ್ದಕ್ಕೂ ಸದಾ ಕಲಿಯುತ್ತಲೇ ಇರುತ್ತೇವೆ. ಜೀವನ ನೂರಾರು ಪಾಠಗಳನ್ನು ಬೋಧಿಸುತ್ತವೆ. ಸಣ್ಣ ಮಕ್ಕಳನ್ನು ನೋಡಿ ನಿಷ್ಕಲ್ಮಶ ನಗುವನ್ನು ಕಲಿಯುವುದರಿಂದ ಹಿಡಿದು, ವಯೋ ವೃದ್ಧರಿಂದ ಅವರ ಬದುಕಲ್ಲಿ ಬಂದ ಏಳು ಬೀಳುಗಳನ್ನು ಹೇಗೆ ದಾಟಿರುವರು ಹಾಗೂ ಇಲ್ಲಿ ವಯಸ್ಸು ಐಶ್ವರ್ಯ, ಅಂದ, ಚಂದ, ಯಾವುದು ಶಾಶ್ವತವಲ್ಲವೆಂದು ಕಲಿಯುವುದು ಜೀವನದ ಅತಿ ದೊಡ್ಡ ಕಲಿಕೆಯೇ ಸರಿ.
ಕಲಿಕೆ, ನಾವು ಪ್ರತಿಯೊಂದರಿಂದಲೂ ಕಲಿಯುತ್ತೇವೆ. ಪುಸ್ತಕಗಳು, ದಿನ ಪತ್ರಿಕೆಗಳನ್ನು ಓದುವುದರಿಂದ ನಮ್ಮ ಜ್ಞಾನಭಂಡಾರವು ಹೆಚ್ಚುತ್ತವೆ. ಅಂತಹ ಕಲಿಕೆಯನ್ನು ಒದಗಿಸುವ ಒಂದು ಪತ್ರಿಕೆಯೇ ಉಪಯುಕ್ತ ಇ ಪತ್ರಿಕೆ. "ಪಾಸಿಟಿವ್ ನ್ಯೂಸ್; ಭರವಸೆಯ ನಾಳೆಗಳು" ಎನ್ನುವುದು ಇದರ ಧ್ಯೇಯವಾಕ್ಯ. ಇದು ಕೆಲವು ಹೊಸ ಬರಹಗಳನ್ನು ಪ್ರಕಟಿಸುವ ಮೂಲಕ ಬರಹಗಾರರನ್ನು ಪ್ರೋತ್ಸಾಹಿಸುವ ಪತ್ರಿಕೆಯಾಗಿವೆ. ಪತ್ರಿಕೋದ್ಯಮದ ಕಲಿಕೆಯ ಹಾದಿಯಲ್ಲಿ ವಿದ್ಯಾರ್ಥಿಗಳ ಲೇಖನ, ಕವನಗಳನ್ನು ತಮ್ಮಲ್ಲಿ ಪ್ರಕಟಿಸಿ ಹಾರೋ ಹಕ್ಕಿಗೆ ರೆಕ್ಕೆ ಕಟ್ಟುವ ಕಾರ್ಯವನ್ನು ಉಪಯುಕ್ತ ಪತ್ರಿಕೆಯು ಮಾಡುತ್ತಲೇ ಬಂದಿವೆ. ಸಮಗ್ರ ಸ್ಥಳೀಯ, ರಾಜ್ಯ ರಾಷ್ಟ್ರೀಯ ಸುದ್ದಿಗಳು, ಶೈಕ್ಷಣಿಕ ಮಾಹಿತಿ ಹಾಗೂ ಉದ್ಯೋಗ ಮಾಹಿತಿ, ಸೇರಿದಂತೆ ಎಲ್ಲಾ ವಿಧದ ಮಾಹಿತಿಗಳನ್ನೂ ಈ ಪತ್ರಿಕೆಯು ಒಳಗೊಂಡಿದೆ. ನಿಖರ ಮಾಹಿತಿಗಳನ್ನೊಳಗೊಂಡ ಉಪಯುಕ್ತ ಇ ಪತ್ರಿಕೆಯು ಬಹು ಬೇಗನೆ ಜನ ಮನಸೂರೆಗೊಂಡಿವೆ. ಕಳೆದ ಐದು ವರ್ಷಗಳಿಂದ 40 ಲಕ್ಷಕ್ಕೂ ಅಧಿಕ ಓದುಗ ಬಳಗವನ್ನು ಹೊಂದಿರುವುದನ್ನು ಕಂಡಾಗಲೆ ಈ ಪತ್ರಿಕೆಯು ಜನ ಮಾನಸಗಳಲ್ಲಿ ಎಷ್ಟೊಂದು ಒಗ್ಗಿವೆ ಎನ್ನುವುದು ಖಚಿತವಾಗುತ್ತವೆ.
ಎಲ್ಲಾ ವಯಸ್ಸಿನ ಓದುಗ ಬಳಗವನ್ನು ಹೊಂದಿರುವ ಉಪಯುಕ್ತ ಇ ಪತ್ರಿಕೆಯು ಹೆಚ್ಚಾಗಿ ಪ್ರಭಾವ ಬೀರುತ್ತಿರುವುದು ಯುವ ಜನತೆಯಲ್ಲಿ. ಮೊಬೈಲ್ ನಲ್ಲಿ ಸದಾ ರೀಲ್ಸ್ ಗಳನ್ನು ನೋಡುತ್ತಾ ಕಳೆದು ಹೋಗುತ್ತಿದ್ದವರಿಗೆ ಉಪಯುಕ್ತ ಇ ಪತ್ರಿಕೆಯು ಮೌಲ್ಯಯುತ ಜ್ಞಾನವನ್ನು ನೀಡುತ್ತಿವೆ. ಅವರಲ್ಲಿ ಬರವಣಿಗೆಯ ಆಸಕ್ತಿಯನ್ನು ಮೂಡಿಸುತ್ತಿವೆ. ಮುಂದುವರಿದ ಸಮಾಜದಲ್ಲಿ ಇ ಪತ್ರಿಕೆಯು ಬಹಳಷ್ಟು ಓದುಗರನ್ನು ಹಾಗೂ ಅದರ ಜೊತೆಗೆ ಬರಹಗಾರರನ್ನೂ ಹುಟ್ಟುಹಾಕುತ್ತವೆ. ಒಟ್ಟಾರೆಯಾಗಿ ಹೇಳುವುದಾದರೆ, ಉಪಯುಕ್ತ ಇ ಪತ್ರಿಕೆಯು ಎಲ್ಲಾ ವಯಸ್ಸಿನವರಿಗೂ ಜೀವನದ ಕಲಿಕೆಯ ಹಾದಿಯಲ್ಲಿ 'ಉಪಯುಕ್ತ'.
-ಸಂಶೀನ ಸೂರ್ಯ

