ಅಮೆರಿಕದ ಸ್ಯಾನ್ ಡಿಯಾಗೋದಲ್ಲಿ ಪುತ್ತಿಗೆ ಶ್ರೀಗಳಿಂದ ಗೋಪೂಜೆ

Shreya Hegde
0

ಬಲಿಪ್ರತಿಪದೆಯ ಪುಣ್ಯ ಸಂದರ್ಭದಲ್ಲಿ ಗೋಮಾತೆಯ ಪೂಜೆ ನೆರವೇರಿಸಿದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು‌




ಸ್ಯಾನ್ ಡಿಯಾಗೋ, ಅಮೆರಿಕ: ಬಲಿಪ್ರತಿಪದೆಯ ಪುಣ್ಯ ಸಂದರ್ಭದಲ್ಲಿ ಉಡುಪಿ ಶ್ರೀಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಡಿಯಾಗೋದಲ್ಲಿರುವ ಗೋಶಾಲೆಗೆ ಭೇಟಿ ನೀಡಿ, ಗೋಮಾತೆಯ ಪೂಜೆಯನ್ನು ಭಕ್ತಿಶ್ರದ್ಧೆಯಿಂದ ನೆರವೇರಿಸಿದರು.


ಶ್ರೀಕಂಠ ಶಾಸ್ತ್ರಿಗಳು ನಿರ್ವಹಿಸುತ್ತಿರುವ ಈ ಗೋಶಾಲೆಯಲ್ಲಿ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಶ್ರೀಪಾದರು, ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ ಭಕ್ತರನ್ನು ಅನುಗ್ರಹಿಸಿದರು. ಗೋಶಾಲೆಯ ಆವರಣದಲ್ಲಿರುವ ಭವ್ಯ ದೇವಾಲಯಕ್ಕೂ ಶ್ರೀಪಾದರು ಭೇಟಿ ನೀಡಿದರು. ಪರಮಪೂಜ್ಯ ಪುತ್ತಿಗೆ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಶ್ರೀಮಠದ ಶ್ರೀ ಪ್ರಸಾದಾಚಾರ್ಯರು ಪೂಜಾ ವಿಧಿವಿಧಾನಗಳನ್ನು ನಿರ್ವಹಿಸಿದರು. ಈ ಸಂದರ್ಭದಲ್ಲಿ ಶ್ರೀಕಂಠ ಶಾಸ್ತ್ರಿಗಳು, ಗೀತಾ ಪ್ರಚಾರಕರಾದ ಶ್ರೀ ಪಿ. ಎಸ್. ಆಚಾರ್ಯರು ಹಾಗೂ ಅನೇಕ ಭಕ್ತರು ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top