ಭರತಾಂಜಲಿಯಿಂದ ನೃತ್ಯ ಸಂಧ್ಯಾ

Shreya Hegde
0



ಭರತಾಂಜಲಿ (ರಿ.) ಕೊಟ್ಟಾರ ಮಂಗಳೂರು ಇವರು ಇದೇ ಬರುವ 22 ನೇ ಆದಿತ್ಯವಾರ ಸಂಜೆ 5.00 ರಿಂದ ಪ್ರತಿಭಾನ್ವಿತ ಕಲಾವಿದೆ ವಿದುಷಿ ಮಾನಸ ಎಚ್ ಕುಲಾಲ್ ಇವರ ನೃತ್ಯ ಸಂಧ್ಯಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ.


ಕಾರ್ಯಕ್ರಮದಲ್ಲಿ ಉಳ್ಳಾಲ್ ಮೋಹನ ಕುಮಾರ್ ಆಶೀರ್ವಚನ ಮಾಡಲಿರುವರು. ಡಾಕ್ಟರ್ ಸುಧೀಂದ್ರ ರಾವ್, ಕಲಾಪೋಷಕ ಯೋಗೀಶ್ ಕುಮಾರ್ ಜೆಪ್ಪು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿರುವರು. ಹಿಮ್ಮೇಳದಲ್ಲಿ ಹಾಡುಗಾರಿಕೆಯಲ್ಲಿ ಸ್ವರಾಗ್ ಮಾಹೆ, ಮೃದಂಗದ ವಿದ್ವಾನ್ ಸುರೇಶ್ ಭಾನು ಕಣ್ಣೂರು, ಕೊಳಲು ವಾದನದಲ್ಲಿ  ದೀಪಕ್ ಹೆಬ್ಬಾರ್ ಬೆಂಗಳೂರು, ವೀಣಾ ವಾದನದಲ್ಲಿ ಪ್ರೊ. ಸೌಂದರ್ ರಾಜ್ ತಿರುವನಂತಪುರ ನಟುವಾಂಗದಲ್ಲಿ ವಿದುಷಿ ಪ್ರತಿಮಾ ಶ್ರೀಧರ್  ಸಹಕರಿಸಿರುವರು. ನೃತ್ಯ ನಿರ್ದೇಶನವನ್ನು ಗುರು ಪ್ರತಿಮಾ ಶ್ರೀಧರ್ ಮತ್ತು ವಿದುಷಿ ಪ್ರಕ್ಷೀಲ ಜೈನ್ ಮಾಡಿರುವರು ಎಂದು ಭರತಾಂಜಲಿಯ ನಿರ್ದೇಶಕ ನೃತ್ಯ ಗುರು ಶ್ರೀಧರ ಹೊಳ್ಳ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top