ಕತ್ತಲೆ ಕಳೆಯುವ ಹಬ್ಬ ದೀಪಾವಳಿ

Shreya Hegde
0



ದೀಪಾವಳಿ ಇದೊಂದು ಬೆಳಕಿನ ಹಬ್ಬ. ಐದು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸುವ ಉತ್ಸವವಾಗಿದೆ. ದೀಪ ಹಚ್ಚಿ ಲಕ್ಷ್ಮಿ ಪೂಜೆ ಮಾಡಿ  ಸಿಹಿ ಹಂಚುದರ ಜೊತೆಗೆ ಪಟಾಕಿ ಸಿಡಿಸಿ ಸಂಭ್ರಮಿಸಲಾಗಿತ್ತದೆ. ಅಜ್ಞಾನ ಮತ್ತು ಕೆಟ್ಟದ್ದನ್ನು  ದೂರವಾಗಿ ಜೀವನದಲ್ಲಿ ಬೆಳಕು ಪಸರಿಸಲಿ ಎಂದು ಸಾಲು ಸಾಲು ದೀಪಗಳನ್ನು ಬೆಳಗಿಸುವ ಮೂಲಕ ಕತ್ತಲನ್ನು ಹೋಗಲಾಡಿಸಲಾಗುತ್ತದೆ.


ಈ ಹಬ್ಬವು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದ್ದು  ಮನಸ್ಸಿನಲ್ಲಿರುವ ಕತ್ತಲೆಯನ್ನು ಹೋಗಲಾಡಿಸುತ್ತದೆ ಪ್ರತಿಯೊಂದು ಮನೆಯಲ್ಲಿ ದೀಪಗಳನ್ನು ಬೆಳಗಿಸುವ ಅಂಧಕಾರ ಮರೆಯಾಗಿ ಶಾಂತಿ, ನೆಮ್ಮದಿ, ಆರೋಗ್ಯ, ಐಶ್ವರ್ಯ ನೆಲಿಸುವಂತೆ ಪ್ರಾರ್ಥಿಸಿ ಲಕ್ಷ್ಮೀದೇವಿಯನ್ನು ಪೂಜಿಸುತ್ತೇವೆ. ದೀಪಾವಳಿಯನ್ನು ಕೇವಲ ಹಿಂದುಗಳು ಮಾತ್ರವಲ್ಲದೆ ಜೈನ್, ಸಿಖ್ ಮತ್ತು ಬೌದ್ಧರು ಕೂಡ ಈ ಹಬ್ಬವನ್ನು ವಿವಿಧ ರೂಪದಲ್ಲಿ ಆಚರಣೆಯನ್ನು ಮಾಡುತ್ತಾರೆ‌.


ದೀಪಾವಳಿಯ ಕೊನೆಯ ದಿನವು ಹಿಂದು ಸಂಪ್ರದಾಯದಲ್ಲಿ ಅಣ್ಣ ತಂಗಿ ಬಾಂಧವ್ಯವನ್ನು ಬಲಿಷ್ಠಗೊಳಿಸುವ ವಿಶೇಷ ದಿನವನ್ನಾಗಿ ಆಚರಿಸಲಾಗುತ್ತದೆ. ಅಕ್ಕ, ತಂಗಿಯರು ತಮ್ಮ ಅಣ್ಣನಿಗೆ ಆರತಿ ಮಾಡುವುದರ ಮೂಲಕ ಯಾವುದೇ ತೊಂದರೆ, ಕಷ್ ಗಳು ಬಾರದಿರಲಿ ಎಂದು ಪ್ರಾರ್ಥಿಸುತ್ತಾರೆ. ಅಣ್ಣ ತನ್ನ ತಂಗಿಯ ರಕ್ಷಣೆಗೆ ಯಾವಾಗಲೂ ಇರುತ್ತಾನೆ ಹೀಗೆ ದೀಪಾವಳಿಯನ್ನು ಎಲ್ಲರೂ ಒಂದಾಗಿ ಆಚರಿಸುವುದೇ ಒಂದು ಸಂಭ್ರಮ.




- ನೀಲಮ್ಮ  ಬಾಣಕಾರ

ಪತ್ರಿಕೋದ್ಯಮ ವಿಭಾಗ, 

ಬಸವೇಶ್ವರ ಕಲಾ ಮಹಾವಿದ್ಯಾಲಯ 

ಬಾಗಲಕೋಟೆ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top