ಮಂಗಳೂರು: ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣದ ಜೊತೆಗೆ ಕೌಶಲ್ಯಾಧಾರಿತ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಪ್ರಸಿದ್ಧ 'ತ್ರಿಶಾ ಸಂಸ್ಥೆ'ಯಲ್ಲಿ ಸಿಎ ಇಂಟರ್‌ಮೀಡಿಯಟ್ ತರಗತಿಗಳು ಇದೇ ನವೆಂಬರ್ 11 ರಿಂದ ಪ್ರಾರಂಭಗೊಳ್ಳಲಿವೆ.
ವೃತ್ತಿಪರ ಶಿಕ್ಷಣದೊಂದಿಗೆ ಪದವಿ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ನೀಡುತ್ತಿರುವ ಈ ಸಂಸ್ಥೆಯಲ್ಲಿ ಇದುವರೆಗೆ ಸುಮಾರು 80,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿ, ಪ್ರತಿಷ್ಠಿತ ಸಂಸ್ಥೆಗಳಲ್ಲಿ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಂಡಿದ್ದಾರೆ. ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ಪದವಿ ಮುಗಿಸಿ ನೇರ ಪ್ರವೇಶ (Direct Entry) ಬಯಸುವ ಅಭ್ಯರ್ಥಿಗಳಿಗೆ ನವೆಂಬರ್ 11 ರಿಂದ ನೂತನ ತರಗತಿಗಳು ಆರಂಭವಾಗಲಿವೆ.
ತರಗತಿಯ ಪ್ರಮುಖ ವೈಶಿಷ್ಟ್ಯಗಳು:
ಅನುಭವಸ್ಥ ಮತ್ತು ನುರಿತ ಪ್ರಾಧ್ಯಾಪಕರ ವೃಂದ.
ವಿದ್ಯಾರ್ಥಿಗಳಿಗೆ ಸಂಪೂರ್ಣ 'ಸ್ಟಡಿ ಮೆಟೀರಿಯಲ್' ಪುಸ್ತಕಗಳ ಲಭ್ಯತೆ.
ಪರೀಕ್ಷೆಗೆ ಪೂರಕವಾಗಿ ಪ್ರಶ್ನೆ ಪತ್ರಿಕೆಗಳನ್ನು ಉತ್ತರಿಸುವ ಶೈಲಿ ಹಾಗೂ ವಿಧಾನಗಳ ಕುರಿತು ವಿಶೇಷ ತರಬೇತಿ.
ನಿರಂತರ ಮಾಕ್ ಟೆಸ್ಟ್ (Mock Test) ಸರಣಿಗಳು.
ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ (ಹಾಸ್ಟೆಲ್) ವ್ಯವಸ್ಥೆ.
ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ.
ಪ್ರಸ್ತುತ ಸಾಲಿನ ಸಿಎ ಇಂಟರ್‌ಮೀಡಿಯಟ್ ಕೋರ್ಸ್‌ಗೆ ದಾಖಲಾತಿಗಳು ಈಗಾಗಲೇ ಆರಂಭಗೊಂಡಿದ್ದು, ಆಸಕ್ತ ವಿದ್ಯಾರ್ಥಿಗಳು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜು ಅಥವಾ ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿರುವ ತ್ರಿಶಾ ಕಾಲೇಜಿಗೆ ಭೇಟಿ ನೀಡಿ ಪ್ರವೇಶ ಪಡೆಯಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

