ಕರ್ಣಾಟಕ‌ ಬ್ಯಾಂಕ್ ವತಿಯಿಂದ ಮುಜುಂಗಾವು ಭಾರತೀ ವಿದ್ಯಾಪೀಠಕ್ಕೆ ಶಾಲಾವಾಹನ ಹಸ್ತಾಂತರ

Shreya Hegde
0



ಮಂಗಳೂರು: ಕರ್ಣಾಟಕ  ಬ್ಯಾಂಕ್ ಮಂಗಳೂರು ವತಿಯಿಂದ ಶ್ರೀ ಭಾರತೀ ವಿದ್ಯಾಪೀಠ ಮುಜುಂಗಾವಿಗೆ ಕೊಡುಗೆಯಾಗಿ ನೀಡಲಾದ ಶಾಲಾವಾಹನದ ಹಸ್ತಾಂತರ ಕಾರ್ಯಕ್ರಮವು ವಿದ್ಯಾಲಯದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಕರ್ಣಾಟಕ  ಬ್ಯಾಂಕ್ ನ ಅಸಿಸ್ಟೆಂಟ್ ರೀಜನಲ್ ಮ್ಯಾನೇಜರ್ ಅಶ್ವಿನ್ ಟಿ.ಎಂ. ಹಾಗೂ ನೀರ್ಚಾಲ್ ಶಾಖೆಯ ಪ್ರಬಂಧಕರಾದ  ಸತ್ಯನಾರಾಯಣ ಹೊಳ್ಳ ಅವರು ಉಪಸ್ಥಿತರಿದ್ದು, ಶಾಲಾವಾಹನವನ್ನು ವಿದ್ಯಾಲಯಕ್ಕೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಅನುಕೂಲತೆ ಹಾಗೂ ಶಾಲೆಯ ಸಾರಿಗೆ ವ್ಯವಸ್ಥೆಗೆ ಸಹಕಾರಿಯಾಗುವ ಈ ಮಹತ್ವದ ಕೊಡುಗೆಗಾಗಿ ಕರ್ಣಾಟಕ  ಬ್ಯಾಂಕ್ ನ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಿಗೆ ವಿದ್ಯಾಲಯದ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top