ಹೊಸಬೆಟ್ಟು ರಾಘವೇಂದ್ರ ಭಜನಾ ಮಂಡಳಿಯ ಆಮಂತ್ರಣ ಪತ್ರಿಕೆ ಬಿಡುಗಡೆ

Shreya Hegde
0



ಸುರತ್ಕಲ್‌: ರಾಘವೇಂದ್ರ ಭಜನಾ ಮಂಡಳಿಯ ವತಿಯಿಂದ ಆಯೋಜಿಸಲಾಗುತ್ತಿರುವ 24ನೇ ವರ್ಷದ ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ ಹಾಗೂ 28ನೇ ವರ್ಷದ ವಾರ್ಷಿಕ ಭಜನಾ ಮಂಗಳೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಹೊಸಬೆಟ್ಟು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಜರಗಿತು.


ಸಂಘದ ಅಧ್ಯಕ್ಷರಾದ ಶ್ರೀಯುತ ಕೇಶವರಾಯರ ಅನುಮತಿಯ ಮೇರೆಗೆ ರಾಘವೇಂದ್ರ ಮಠದ ಮೆನೇಜರ್ ಶ್ರೀ ಶ್ರೀನಿಧಿ ಆಸ್ರಣ್ಣರು ಹಾಗೂ ಶ್ರೀ ನಾಗರಾಜ ಬಳಕ್ಕುರಾಯರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮಿ, ವನಜಸಂಜೀವರಾವ್, ಪದ್ಮ, ರಮಾಬಾಯಿ, ಕೆ ಕಲಾವತಿ, ಸುನಂದಾ, ಸಂಧ್ಯಾ ನಾಗರಾಜ್, ಶ್ಯಾಮಲಾ, ಸುಶೀಲಾ ರಾಮಕೃಷ್ಣ, ಚಂದ್ರಮತಿ, ಜಯಶ್ರೀ ಐತಾಳ್, ಮುರಾರಿರಾವ್, ಗೋಪಾಲಕೃಷ್ಣ ರಾವ್, ರಾಮಚಂದ್ರ ಹೆಬ್ಬಾರ್, ಕೆ. ರಾಜೇಶ್ವರ, ವೇಣುಗೋಪಾಲ, ಶುಭಕರನ್ ಹಾಗೂ ವಿಶ್ವೇಶ್ವರ ಕಾರಂತ ಸೇರಿದಂತೆ ಹಲವಾರು ಸದಸ್ಯರು ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top