ನ.20ರಿಂದ ಡಿ.8 ವರೆಗೆ ಗೋ ರಥಯಾತ್ರೆ; 25 ಲಕ್ಷ ಸಹಿ ಸಂಗ್ರಹದ ಗುರಿ

Shreya Hegde
0



ಧಾರವಾಡ: ಗೋ ರಾಷ್ಟ್ರಮಾತೆ, ಗೋ ಹತ್ಯೆ ನಿಷೇಧ ಬೇಡಿಕೆಗಾಗಿ ದೇಶಾದ್ಯಂತ ನಡೆಯುತ್ತಿರುವ ಗೋ ಸಮ್ಮಾನ ಆಹ್ವಾನ ಅಭಿಯಾನದ ಅಂಗವಾಗಿ  ರಾಮಚಂದ್ರಾಪುರ ಮಠದ ವತಿಯಿಂದ ನವೆಂಬರ್ 20 ರಂದು ಶುಕ್ರವಾರ ಬೆಳಿಗ್ಗೆ 10 ಘಂಟೆಗೆ ಕುಮಟಾದಿಂದ ರಥಯಾತ್ರೆ ಹೊರಡಲಿದೆ. ಅಭಿಯಾನದ ರಾಜ್ಯ ಮುಖ್ಯಸ್ಥ ನಂದಬಾಬಾ ಶ್ರೀ ರವೀಂದ್ರಾನಂದ ಸರಸ್ವತಿ ಸ್ವಾಮೀಜಿ, ರಾಜ್ಯ ವಕ್ತಾರ ಡಾ ಆರೂಢಭಾರತೀ ಸ್ವಾಮೀಜಿ, ರಾಮಚಂದ್ರಾಪುರ ಮಠದ ಶಾಸನ ತಂತ್ರದ ಅಧ್ಯಕ್ಷ ಡಾ ವೈ.ವಿ ಕೃಷ್ಣಮೂರ್ತಿ ಮುಂತಾದವರ ಸಮ್ಮುಖದಲ್ಲಿ ಗೋ ಪ್ರೇಮಿಗಳು ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ.


ಕುಮಟಾ ಹೊನ್ನಾವರ ಸಿದ್ಧಾಪುರ ಶಿರಸಿ ಸಾಗರ ತೀರ್ಥಹಳ್ಳಿ ಹೊಸನಗರ ಹಾಗೂ ಶಿವಮೊಗ್ಗ ತಾಲ್ಲೂಕು ಸೇರಿದಂತೆ ಎರಡು ಜಿಲ್ಲೆಗಳ ಹಳ್ಳಿ ಪಟ್ಟಣಗಳಲ್ಲಿ ಸಂಚರಿಸಿ ಡಿಸೆಂಬರ್ 8 ರಂದು ಯಾತ್ರೆ ಶಿವಮೊಗ್ಗದಲ್ಲಿ ಕೊನೆಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಶುಕ್ರವಾರ ಬೆಳಿಗ್ಗೆ 10 ಘಂಟೆಗೆ ಉತ್ತರ ಕನ್ನಡ ಶಿವಮೊಗ್ಗ ಉಡುಪಿ ದಕ್ಷಿಣ ಕನ್ನಡ ಕೊಡಗು ಬೆಂಗಳೂರಿನ ಗಿರಿನಗರ ವ್ಯಾಪ್ತಿ ಸೇರಿದಂತೆ ನೂರು ಕೇಂದ್ರಗಳಲ್ಲಿ ಏಕ ಕಾಲದಲ್ಲಿ ಸಹಿ ಸಂಗ್ರಹಕ್ಕೆ ಚಾಲನೆ ನೀಡಲಾಗುವುದು. ಈ ಮೂಲಕ ಅಂದಾಜು 25 ಲಕ್ಷ ಸಹಿ ಸಂಗ್ರಹಿಸುವ ಉದ್ದೇಶವಿದೆ ಎಂದು ಮಠದ ಕೃಷ್ಣಪ್ರಸಾದ್ ತಿಳಿಸಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top