ಬ್ಯಾಂಕ್ ಆಫ್ ಬರೋಡಾಗೆ ₹6,532 ಕೋಟಿ ದಾಖಲೆಯ ತ್ರೈಮಾಸಿಕ ಲಾಭ

Upayuktha
0

ಮುಂಬೈ: ಬ್ಯಾಂಕ್ ಆಫ್ ಬರೋಡಾ 2026ರ ಸೆಪ್ಟೆಂಬರ್ 30ಕ್ಕೆ ಅಂತ್ಯಗೊಂಡ ಎರಡನೇ ತ್ರೈಮಾಸಿಕದಲ್ಲಿ ದಾಖಲೆಯ ₹6,532 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಗಳಿಸಿದ ಲಾಭಕ್ಕೆ ಹೋಲಿಸಿದರೆ ಶೇ. 35.8ರಷ್ಟು ಏರಿಕೆ ದಾಖಲಾಗಿದೆ ಎಂದು ಬ್ಯಾಂಕ್ ಪ್ರಕಟಿಸಿದೆ.


ತ್ರೈಮಾಸಿಕದಲ್ಲಿ ಬ್ಯಾಂಕಿನ ನಿವ್ವಳ ಬಡ್ಡಿ ಆದಾಯ ಶೇ. 9ರಷ್ಟು ಹೆಚ್ಚಳಗೊಂಡು ₹13,026 ಕೋಟಿಗೆ ತಲುಪಿದೆ. ಬಡ್ಡಿಯೇತರ ಆದಾಯವು ಶೇ. 95.8ರಷ್ಟು ಏರಿಕೆಯಾಗಿ ₹6,881 ಕೋಟಿಯಾಗಿದೆ. ಕಾರ್ಯಾಚರಣಾ ಆದಾಯ ಶೇ. 28.7ರಷ್ಟು ಹೆಚ್ಚಳಗೊಂಡು ₹19,907 ಕೋಟಿಯಾಗಿದ್ದು, ಕಾರ್ಯಾಚರಣಾ ಲಾಭವು ಶೇ. 50.9ರಷ್ಟು ಏರಿಕೆಯಾಗಿ ₹11,430 ಕೋಟಿಯ ದಾಖಲೆಯ ಮಟ್ಟ ತಲುಪಿದೆ.


ಬ್ಯಾಂಕಿನ ಆಸ್ತಿ ಗುಣಮಟ್ಟದಲ್ಲಿಯೂ ಸುಧಾರಣೆ ಕಂಡುಬಂದಿದೆ. ಒಟ್ಟು ಅನುತ್ಪಾದಕ ಆಸ್ತಿ (ಜಿಎನ್‌ಪಿಎ) ಪ್ರಮಾಣ ಕಳೆದ ವರ್ಷದ ಶೇ. 2.16ರಿಂದ ಶೇ. 1.78ಕ್ಕೆ ಇಳಿಕೆಯಾಗಿದೆ. ನಿವ್ವಳ ಅನುತ್ಪಾದಕ ಆಸ್ತಿ (ಎನ್‌ಎನ್‌ಪಿಎ) ಪ್ರಮಾಣ ಶೇ. 0.37ಕ್ಕೆ ಕುಸಿದಿದೆ.


ಸೆಪ್ಟೆಂಬರ್ 30ರ ವೇಳೆಗೆ ಬ್ಯಾಂಕಿನ ಜಾಗತಿಕ ವ್ಯವಹಾರವು ಶೇ. 17.2ರ ಬೆಳವಣಿಗೆಯೊಂದಿಗೆ ₹32.57 ಲಕ್ಷ ಕೋಟಿಗೆ ತಲುಪಿದೆ. ಜಾಗತಿಕ ಠೇವಣಿಗಳು ಶೇ. 16.4ರಷ್ಟು ಮತ್ತು ಜಾಗತಿಕ ಮುಂಗಡಗಳು ಶೇ. 18.3ರಷ್ಟು ಹೆಚ್ಚಳವಾಗಿವೆ.


2026-27ರ ಮೊದಲ ಅರ್ಧವಾರ್ಷಿಕ ಅವಧಿಯಲ್ಲಿ ಬ್ಯಾಂಕ್ ₹7,810 ಕೋಟಿ ನಿವ್ವಳ ಲಾಭ ದಾಖಲಿಸಿದ್ದು, ನಿವ್ವಳ ಬಡ್ಡಿ ಆದಾಯ ₹25,551 ಕೋಟಿಯಾಗಿದೆ.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top