ಶ್ರೀ ವಿಶ್ವೇಶತೀರ್ಥ ಸ್ಮೃತಿ ವನ ಅಧಿಕೃತವಾಗಿ ಪೇಜಾವರ ಮಠಕ್ಕೆ ಹಸ್ತಾಂತರ

Shreya Hegde
0



ಉಡುಪಿ: ಪದ್ಮವಿಭೂಷಣ, ಯತಿಕುಲಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಶ್ರೀಗಳ ಸ್ಮರಣಾರ್ಥ ನೀಲಾವರ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ‘ಶ್ರೀ ವಿಶ್ವೇಶತೀರ್ಥ ಸ್ಮೃತಿ ವನ’ವು ಗುರುವಾರ ಅರಣ್ಯ ಇಲಾಖೆಯಿಂದ ಅಧಿಕೃತವಾಗಿ ಶ್ರೀ ಪೇಜಾವರ ಮಠಕ್ಕೆ ಹಸ್ತಾಂತರಗೊಂಡಿತು. ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯ 2 ಕೋಟಿ ರೂ. ಅನುದಾನದಲ್ಲಿ ಈ ಸ್ಮೃತಿವನವನ್ನು ನಿರ್ಮಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡ್ಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಜೆಟ್‌ನಲ್ಲಿ ಈ ಸ್ಮೃತಿವನ ನಿರ್ಮಾಣವನ್ನು ಘೋಷಿಸಿ ಅನುದಾನ ಬಿಡುಗಡೆ ಮಾಡಿದ್ದರು. ಉಡುಪಿ ನಿರ್ಮಿತಿ ಕೇಂದ್ರದ ನೇತೃತ್ವದಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬಗೊಂಡಿದ್ದ ಈ ವನವನ್ನು ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಕಳೆದ ಮೇ ತಿಂಗಳಲ್ಲಿ ಉದ್ಘಾಟಿಸಿದ್ದರು.


ದಾಖಲೆಗಳ ಹಸ್ತಾಂತರ ಪ್ರಕ್ರಿಯೆ:

ಗುರುವಾರ ನಡೆದ ಅಧಿಕೃತ ಪ್ರಕ್ರಿಯೆಯಲ್ಲಿ ಅರಣ್ಯ ಇಲಾಖೆ ಹಾಗೂ ಪೇಜಾವರ ಮಠದ ಪ್ರತಿನಿಧಿಗಳು ಕಡತಗಳಿಗೆ ಸಹಿ ಹಾಕಿ ಜವಾಬ್ದಾರಿಯನ್ನು ಹಸ್ತಾಂತರಿಸಿದರು. ಉಡುಪಿ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ ಹಾಗೂ ಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸುಬ್ರಹ್ಮಣ್ಯ ಭಟ್ ಅವರು ದಾಖಲಾತಿಗಳಿಗೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಮಠದ ಪಿಆರ್‌ಒ ವಾಸುದೇವ ಭಟ್ ಪೆರಂಪಳ್ಳಿ ಹಾಗೂ ನಿರ್ಮಿತಿ ಕೇಂದ್ರದ ಇಂಜಿನಿಯರ್ ಹಾಗೂ ಸ್ಮೃತಿವನ ನಿರ್ಮಾಣ ಉಸ್ತುವಾರಿ ಪವನ್ ಪೆರುಮುಂಡ ಉಪಸ್ಥಿತರಿದ್ದರು. ಪರಿಸರ ಸ್ನೇಹಿ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಈ ಸ್ಮೃತಿವನವು ಶ್ರೀ ವಿಶ್ವೇಶತೀರ್ಥ ಶ್ರೀಗಳ ತಪಸ್ಸು, ಆದರ್ಶ ಹಾಗೂ ಪರಿಸರ ಪ್ರೀತಿಯನ್ನು ಸಾರುವ ಪ್ರಮುಖ ಕೇಂದ್ರವಾಗಿ ರೂಪುಗೊಂಡಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top