ಮಂಗಳೂರಿನಲ್ಲಿ ನಾಳೆ 'ಅರ್ಪಣಾ' ಕಾರ್ಯಕ್ರಮ

Shreya Hegde
0

  ಸ್ವಚ್ಛತಾ ಕಾರ್ಮಿಕ ಮಹಿಳೆಯರಿಗೆ ಗೌರವಾಭಿನಂದನೆ



ಮಂಗಳೂರು: ಮಹಾತ್ಮ ಗಾಂಧೀಜಿಯವರ ಜಯಂತಿಯ ಸಂದರ್ಭದಲ್ಲಿ, ನಮ್ಮ ನಗರವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿ ಉಳಿಸಲು ಪ್ರತಿದಿನ ನಿಸ್ವಾರ್ಥವಾಗಿ ಶ್ರಮಿಸುವ ಸ್ವಚ್ಛತಾ ಕಾರ್ಮಿಕರನ್ನು ಗೌರವಿಸುವ ಸಲುವಾಗಿ ಸ್ವಚ್ಛ ಮಂಗಳೂರು ಪ್ರತಿಷ್ಠಾನದ ವತಿಯಿಂದ ನಾಳೆ (ಅಕ್ಟೋಬರ್ 02, 2026) ಬೆಳಗ್ಗೆ 8:00 ಗಂಟೆಗೆ ಮಂಗಳೂರು ಪುರಭವನದ ಆವರಣದಲ್ಲಿರುವ ರಾಜಾಜಿ ಪಾರ್ಕ್‌ನಲ್ಲಿ “ಅರ್ಪಣಾ- ನಮ್ಮ ನಗರವನ್ನು ಸ್ವಚ್ಛವಾಗಿಡುವ ತಾಯಂದಿರಿಗೆ ಗೌರವಾಭಿನಂದನೆ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.


ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಪ್ರೇರಣೆಯಿಂದ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛ ಮಂಗಳೂರು ಪ್ರತಿಷ್ಠಾನವು, ಸ್ವಚ್ಛತಾ ಕಾರ್ಮಿಕರ ಪರಿಶ್ರಮ, ಸೇವೆ ಮತ್ತು ಸಮರ್ಪಣೆಗೆ ಕೃತಜ್ಞತೆಯ ಸಂಕೇತವಾಗಿ ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.


ದಿವ್ಯ ಸಾನಿಧ್ಯ ಹಾಗೂ ಅತಿಥಿಗಳು:

ಈ ಕಾರ್ಯಕ್ರಮದಲ್ಲಿ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಜಿತಕಾಮಾನಂದಜೀ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ರಾಹುಲ್ ರತ್ನಮ್ ಪಾಂಡೆ, ಐ.ಎ.ಎಸ್. ಅವರು ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಮಂಗಳೂರು ಮಹಾನಗರ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆಯ ನೋಡೆಲ್ ಅಧಿಕಾರಿ ಅರ್ಚಿತ್ ಪರಾಂಗ್ ಡೊಂಗ್ರೆ, ಐ.ಎ.ಎಸ್. (ಪ್ರೊಬೇಷನರ್) ಹಾಗೂ ಆಹ್ವಾನಿತರಾಗಿ ದ.ಕ. ಜಿಲ್ಲಾ ಸಿವಿಕ್ ವರ್ಕರ್ಸ್ ಮತ್ತು ಗ್ರೂಪ್ 4 ಎಂಪ್ಲಾಯೀಸ್ ಅಸೋಸಿಯೇಷನ್‌ನ ಜಿಲ್ಲಾ ಕಾರ್ಯದರ್ಶಿ ಆನಂದ್ ಎಸ್ಪಿ ಉಪಸ್ಥಿತರರಿರುವರು.


ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತು ಸ್ವಚ್ಛ ಮಂಗಳೂರು ಅಭಿಯಾನದ ಸ್ವಯಂಸೇವಕರು ಕೋರಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top