ಪುಸ್ತಕ ಪರಿಚಯ: ಅಲೆ - ವಿಧಿ ಬೀಸಿದ ಬಲೆ

Shreya Hegde
0





ಪುಸ್ತಕವೆಂದರೆ ಒಂದು ಮಾಯಾ ಲೋಕ ಎನ್ನಬಹುದು. ಓದಿದಷ್ಟು ಮತ್ತೆ ಮತ್ತೆ ಓದಿಸುವ ಮಸ್ತಕಕ್ಕೆ ಜ್ಞಾನ ವೃದ್ಧಿಸುವ ಪುಟಗಳು. ಹೆಚ್ಚಿನವರು ಬೇರೆಯವರ ಜೊತೆ ಕೇಳಿ ಯಾವ ಪುಸ್ತಕ ಒಳ್ಳೆದಿದೆ, ಕಥೆ ಚೆನ್ನಾಗಿದೆಯೇ ಎಂದು ಕೇಳಿ ಆಯ್ಕೆ ಮಾಡುತ್ತಾರೆ. ಆದರೆ ಇನ್ನು ಕೆಲವರು ಪುಸ್ತಕ ಮುಖ ಪುಟ ನೋಡಿ ಆಯ್ಕೆ ಮಾಡುವವರು ಇದ್ದಾರೆ. ಇನ್ನು ಕೆಲವರು ಅಮ್ಮ ಅಥವಾ ಶಾಲೆಯ ಶಿಕ್ಷಕರು ಪುಸ್ತಕ ಒಂದಾದರು ಓದುವ ಹವ್ಯಾಸ ಇರಬೇಕು ಎಂದು ಒತ್ತಾಯದಲ್ಲಿ ಓದುವವರ ಗುಂಪು ಇನ್ನೊಂದು. ಆದರೆ ಈ ರೀತಿಯ ಒತ್ತಾಯವೇ ನನಗೆ ಪುಸ್ತಕದ ಮೇಲೆ ಒಲವು ಬರುವ ರೀತಿ ಮಾಡಿದ್ದು ಮಾತ್ರ ನಿಜ.


ನಾನು ಕೂಡ ಏನು ಪುಸ್ತಕದ ಅಭಿಮಾನಿಯೇ ಅಲ್ಲ.., ಆದರೆ ನನಗೆ ಕಾಲೇಜಿನಲ್ಲಿ ಲೈಬ್ರರಿ ಆಗಬೇಕು ಎಂದು ಆದೇಶವಿದ್ದಾಗ ನನ್ನ ಕೈಗೆ ಸಿಕ್ಕ ಮೊದಲ ಪುಸ್ತಕ ಸಾಯಿಸುತೆ ಬರೆದ “ಬಾಡದ ಹೂ” ಎಂಬ ಕಾದಂಬರಿ. ಈ ಒಂದು ಪುಸ್ತಕವೇ ನನ್ನ ಓದಿನ ರುಚಿ ಹೆಚ್ಚಿಸಿದ್ದು. ಯಾವತ್ತು ಕಾದಂಬರಿಯ ಕಲ್ಪನೆಯೇ ಇರದವಳಿಗೆ ನಂತರ ಪುಸ್ತಕ ಇಷ್ಟವಾಗುತ್ತ ಹೋಯಿತು. ಕೆಲವು ನನ್ನ ನೆಚ್ಚಿನ ಪುಸ್ತಕವೆಂದು ಪಟ್ಟಿ ಮಾಡಿ ಇಟ್ಟದು ಇದೇ. ಮಂಡೋವಿ, ಸಿಂದೂರ, ಕಾಡಿನೊಳಗೆ 36 ಗಂಟೆಗಳು, ತಲ್ಲಣ, ಹಾಗೂ ಅಲೆ ಎಂಬ ಪುಸ್ತಕ ಹಾಗೂ ಇಂಗ್ಲೀಷ್ ಕಾದಂಬರಿಯಾದ “tooth and nail”.


ಹೇಳಿದ ಹಾಗೆ “ಅಲೆ” ಎಂಬ ಪುಸ್ತಕ ಓದಲು ಹಾಗೂ ಅರ್ಥ ಮಾಡಿಕೊಳ್ಳಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಈ ಪುಸ್ತಕ ಒಂದು ಪ್ರೇಮ ಕಥೆ. ಹರಿ ಮತ್ತು ಸೌಮ್ಯ ಎಂಬ ಎರಡು ಪಾತ್ರ. ಈ ಕಥೆ ಹೇಗೆಂದರೆ ನಮ್ಮ ಅಹಂಕಾರ ಹೇಗೆ ಇನ್ನೊಬ್ಬರ ಜೀವನವನ್ನು ಮುಳ್ಳಾಗಿ ಚುಚ್ಚುತ್ತದೆ, ಹಾಗೂ ಕೊನೆಗೆ ಎಷ್ಟೇ ಪಶ್ಚಾತಪ ಪಟ್ಟರು ಅದು ಪ್ರಯೋಜನವಿಲ್ಲ ವೆಂದು ಈ ಪುಸ್ತಕ ಓದುವಾಗ ಅರ್ಥ ಆಗುತ್ತದೆ. ಕೊನೆಗೆ ಈ ಪ್ರೀತಿ ಗೆಲುವು ಸಾಧಿಸುತ್ತದೆಯೇ ಅಥವಾ ಅಹಂಕಾರದ ಬೆಂಕಿಗೆ ಸುಟ್ಟು ಭಸ್ಮವಾಗುತ್ತದೆಯೋ ಎಂದು ಪುಸ್ತಕ ಓದಿದಾಗಲೇ ಆ ರೋಚಕ ಕಥೆ ತಿಳಿಯುವುದು. ಹಾಗೆ ಈ ಪುಸ್ತಕ ಹೇಳುವಾಗ ಹಾಗೆ ವಿಧಿ ಬೀಸಿದ ಬಲೆ ಹೇಗೆ ವರ್ಣನೆ ಆಗುತ್ತದೆ ಎಂಬ ಸ್ಪಷ್ಟ ಉತ್ತರ ಸಿಗುತ್ತದೆ.


ಈ ಪುಸ್ತಕ ಹಲವಾರು ವಿದ್ಯಾರ್ಥಿಗಳು ಓದಿದರೆ ಎಂದು ತಿಳಿಯುವುದು ಅವರು ಎಲ್ಲ ಪುಟಗಳಲ್ಲಿ ಬರೆದ ಅವರ ಅಭಿಪ್ರಾಯಗಳು. ನಿಮಗೆ ಕಥೆ ಗಿಂತ ಹೆಚ್ಚು ಅಭಿಪ್ರಾಯಗಳೇ ಪುಟಗಳ ತುಂಬಾ ಕಾಣಿಸಿಕೊಳ್ಳುತ್ತದೆ. ಕಥೆ ಮುಗಿದರೂ, ಅದರ ಭಾವನೆಗಳು ಓದುಗರ ಮನಸ್ಸಿನಲ್ಲಿ ಮುಂದುವರಿಯುತ್ತವೆ.




- ಅಂಜಲಿ ಮುಂಡಾಜೆ

ತ್ರೀತಿಯ ಪತ್ರಿಕೋದ್ಯಮ ವಿದ್ಯಾರ್ಥಿನಿ 

ಎಸ್ ಡಿ ಯಂ ಕಾಲೇಜು ಉಜಿರೆ



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top