ಕವನ: ಉಲ್ಟಾ-ಪಲ್ಟಾ.!

Shreya Hegde
0


ಲೋಕ ನಮ್ಮನ್ನು

ಹೊಗಳಿದರೆ ಆರತಿ

ನಾವೇ ನಮ್ಮನ್ನು

ಹೊಗಳಿದರೆ ಆತ್ಮರತಿ.!


ನಾವು ರೈಲಿನ ಮೇಲೆ

ಹತ್ತಿದರೆ ಸಾಹಸ

ರೈಲು ನಮ್ಮ ಮೇಲೆ

ಹತ್ತಿದರೆ ಇತಿಹಾಸ.!


ಗಂಡ ಹೆಂಡತಿಗೆ

ಹೊಡೆದರೆ ಸದ್ದು

ಹೆಂಡತಿಯೇ ಗಂಡನಿಗೆ

ಹೊಡೆದರೆ ಸುದ್ದಿ.!


ನಾಯಿ ನಮ್ಮನ್ನು

ಕಚ್ಚಿದರೆ ದವಾಖಾನೆ

ನಾವೇ ನಾಯಿಯನ್ನು

ಕಚ್ಚಿದರೆ ಬಂಧೀಖಾನೆ.!


ಹಿರಿಯರು ಮದುವೆ

ಮಾಡಿದರೆ ಸಾದಾ ಹತ್ಯೆ

ನಾವೇ ಪ್ರೀತಿಸಿ ಮದುವೆ

ಮಾಡಿಕೊಂಡರೆ ಆತ್ಮಹತ್ಯೆ.!


ಒಬ್ಬರ ಬರಹ ಕದ್ದು

ಬರೆದರೆ ಕೃತಿಚೌರ್ಯ

ಎಲ್ಲರ ಬರಹ ಮೆದ್ದು

ಬರೆದರೆ ಮಹಾಕಾವ್ಯ.!


ಹುಡುಗಿಯ ನಗದನ್ನು

ಕದ್ದರೆ ಕಿಸೆಗಳ್ಳ.!

ಹುಡುಗಿಯ ಮನಸನ್ನೇ

ಕದ್ದುಬಿಟ್ಟರೆ ಛೀಕಳ್ಳ.! 


ಕೆಲವರಿಗೆ ಟೋಪಿ

ಹಾಕಿದರೆ ವಂಚಕ

ಊರವರಿಗೆಲ್ಲ ಟೋಪಿ

ಹಾಕಿದರೆ ನಾಯಕ.!


ಹೊಟ್ಟೆ ಹೊರೆಯಲು

ನಟಿಸಿದರೆ ಅಭಿನಯ.

ಹೊಟ್ಟೆ ಬಿರಿಯಲು

ನಟಿಸಿದರೆ ರಾಜಕೀಯ.!


ನಾವೇ ನಮ್ಮ ಕಾಲೆಳೆದು

ನಕ್ಕಿದರೆ ಹಾಸ್ಯ-ಲಾಸ್ಯ

ಪರರ ಕಾಲುಗಳ ಎಳೆದು

ನಕ್ಕಿದರೆ ವ್ಯಂಗ್ಯ-ಕ್ರೌರ್ಯ.!


ಮನಸಾಕ್ಷಿ ನುಡಿಗಳಂತೆ

ನಡೆದರೆ ಕೀರ್ತಿಕೊಂಬು

ಮಂದಿಯ ಮಾತಿನಂತೆ

ಮರಹತ್ತಿದರೆ ಕೈಗೆಚೆಂಬು.!


ನಾವು ಹೂಮೇಲೆ ಮಲಗಿ

ಸಂಭ್ರಮಿಸಿದರೆ ಜೀವನಜಾತ್ರೆ

ನಮ್ಮ ಮೇಲೆ ಹೂವು ಮಲಗಿ

ಶೋಕಿಸಿದರೆ ಅಂತಿಮಯಾತ್ರೆ.!


- ಎ,ಎನ್.ರ ಮೇಶ್.ಗುಬ್ಬಿ.


Tags

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top