ಅಕ್ಟೋಬರ್ 25 ರಂದು ಒಡಿಯೂರಿನಲ್ಲಿ ವಿಭಿನ್ನ ರೀತಿಯ ನಾಟಕ ರಚನಾ ಸ್ಪರ್ಧೆ

Shreya Hegde
0


ಬಂಟ್ವಾಳ: ದಕ್ಷಿಣದ ಗಾಣಗಾಪುರ ಎಂದು ಪ್ರಸಿದ್ದ ವಾದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿರುವ ಶ್ರೀ ಒಡಿಯೂರು ದತ್ತಾoಜನೇಯ  ಗುರುದೇವದತ್ತ ಸಂಸ್ಥಾನ ದಲ್ಲಿ ಅಕ್ಟೋಬರ್ 25 ಭಾನುವಾರ ಸಂಜೆ 3 ರಿಂದ "ಕಥೆ ಕೇಳಿ -ನಾಟಕ ಬರೆಯಿರಿ " ಎನ್ನುವ ಪರಿಕಲ್ಪನೆಯ ನಾಟಕ ರಚನಾ ಸ್ಪರ್ಧೆ ನಡೆಯಲಿದೆ. ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ತಮ್ಮ ಪೂರ್ವಾಶ್ರಮ ದಲ್ಲಿ ನಾಟಕ ರಚನೆ, ಅಭಿನಯ ದಲ್ಲಿ ಒಲವು ಹೊಂದಿದ್ದು ಸಾಮಾಜಿಕ ನಾಟಕ ರಚಿಸಿದ್ದರು. ಒಡಿಯೂರು ಸಂಸ್ಥಾನವು ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಸೇವಾ ಚಟುವಟಿಕೆ ಗಳೊಂದಿಗೆ ನಿರಂತರ ಸಾಂಸ್ಕೃತಿಕ ಕಲಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ.


ತುಳು ನಾಟಕ ಸ್ಪರ್ಧೆ,ಜಾನಪದ ನೃತ್ಯ,ಕಾಲೇಜು ವಿದ್ಯಾರ್ಥಿಗಳ ಕಿರು ನಾಟಕ ಸ್ಪರ್ಧೆ ಗಳನ್ನೂ ಕ್ಷೇತ್ರದಲ್ಲಿ ಆಯೋಜಿಸಲಾಗಿತ್ತು. ಹಲವಾರು ಕವಿ ಗೋಷ್ಠಿಗಳೂ ಇಲ್ಲಿ ನಡೆದಿವೆ. ಹೊಸ ಸಾಮಾಜಿಕ ನಾಟಕ ಕೃತಿಗಳ ರಚನೆಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಹಾಗೂ ಪ್ರಬುದ್ಧ, ಉದಯೊನ್ಮುಖ ಹಾಗೂ ಯುವ ನಾಟಕ ರಚನಾಕಾರರಿಗೆ ಪ್ರೇರಣೆ ನೀಡಲು ಸ್ಪರ್ಧೆಯನ್ನು ನಡೆಸಲಾಗುವುದು.


ಸ್ಪರ್ಧಾ ಸ್ವರೂಪ :

ಪೂಜ್ಯ ಸ್ವಾಮಿಜಿ ಅವರು ಕೃತಿಗಾರರು ರಚಿಸ ಬೇಕಾದ  ನಾಟಕದ ಕಥಾ ವಸ್ತು ವಿನ ಪೂರ್ಣ ವಿವರ ನೀಡುತ್ತಾರೆ. ಆ ಕಥೆ ಯನ್ನು ಆಧರಿಸಿ ನಾಟಕ ರಚಿಸಿ ಹತ್ತು ದಿನಗಳ ಒಳಗೆ ಕಳುಹಿಸಬೇಕು. ಪಾತ್ರ ಗಳ ಹೆಸರು, ನಾಟಕದ ಶಿರೋನಾಮ , ಗೀತಾ ಸಾಹಿತ್ಯ ವನ್ನು ಸ್ಪರ್ಧಾಳುಗಳು ನೀಡಬೇಕು.


ಪ್ರದರ್ಶನ ಯೋಗ್ಯ ಕೃತಿ ಯಾಗಿರಬೇಕು.

ಕನ್ನಡ, ತುಳು ಭಾಷೆಯಲ್ಲಿ ನಾಟಕ ರಚಿಸಬಹುದು.

ಆಸಕ್ತರು ಹೆಚ್ಚಿನ 

ಮಾಹಿತಿಗೆ :

9448123061 ಗೆ ಹೆಸರು, ಮೊಬೈಲ್ ಸಂಖ್ಯೆ ವಾಟ್ಸಪ್ ಮಾಡಲು ಕೋರಲಾಗಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top