ಮೊಂಟೆಪದವು ಚೇತನಾ ದಿವ್ಯಾಂಗ ಮಕ್ಕಳ ಶಾಲೆಯಲ್ಲಿ ಶಾರದಾ ಪೂಜೆ

Shreya Hegde
0



ಮಂಗಳೂರು: ಸೇವಾಭಾರತಿ (ರಿ) ಮಂಗಳೂರು ಇದರ ಅಂಗಸಂಸ್ಥೆಯಾದ ಅದಮ್ಯ ಚೇತನಾ ದಿವ್ಯಾಂಗ ಮಕ್ಕಳ ವಸತಿಯುತ ಶಾಲೆ ಮೊಂಟೆಪದವು, ಮಾಧವ ವನದಲ್ಲಿ ದಿನಾಂಕ 19-10-2026 ರಂದು ಶಾರದಾ ಪೂಜೆ ಮತ್ತು ಆಯುಧ ಪೂಜೆಯನ್ನು ಭಕ್ತಿ ಹಾಗೂ ಸಡಗರದಿಂದ ಆಚರಿಸಲಾಯಿತು.


ಎಲ್ಲಾ ಸಿಬ್ಬಂದಿ ವರ್ಗದವರು ಭಜನೆ ಮಾಡುವುದರ ಮೂಲಕ ಶಾರದಾ ಪೂಜೆಯನ್ನು ಮತ್ತು ಪೀಠೋಪಕರಣಗಳಿಗೆ ಪೂಜೆಯನ್ನು ಸಲ್ಲಿಸುವುದರ ಮೂಲಕ ಆಯುಧ ಪೂಜೆಯನ್ನು ನೆರವೇರಿಸಿ ದೇವರ ಕೃಪೆಗೆ ಪಾತ್ರರಾದರು.

ಕಾರ್ಯಕ್ರಮದಲ್ಲಿ ಸೇವಾಭಾರತಿ ಸಂಸ್ಥೆಯ ಗೌರವ ಕಾರ್ಯದರ್ಶಿ ಹೆಚ್.ನಾಗರಾಜ ಭಟ್, ಖಜಾಂಚಿ ವಿನೋದ್ ಶೆಣೈ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೃಥ್ವೀಪಾಲ್.ಕೆ, ಸಂಸ್ಥೆಯ ವಿಶ್ವಸ್ಥರು, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ, ಸ್ವಯಂಸೇವಕರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top