ಸೇವಾ ಸಂಕಲ್ಪ ಅಭಿಯಾನ: ಕುಲಶೇಖರ ನವೀಕೃತ ಬಸ್‌ ಸ್ಟ್ಯಾಂಡ್ ಉದ್ಘಾಟನೆ

Shreya Hegde
0


ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಸಾರ್ಥಕ 25 ವರ್ಷಗಳ ನಿರಂತರ ಜನಸೇವೆಯ ಪ್ರಯುಕ್ತ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಸೇವಾ ಸಂಕಲ್ಪ ಅಭಿಯಾನದ ಭಾಗವಾಗಿ ಕುಲಶೇಖರ ಕಲ್ಪನೆ ಪರಿಸರದಲ್ಲಿ ನವೀಕರಣಗೊಳಿಸಲಾದ ಬಸ್ ಸ್ಟ್ಯಾಂಡ್ ನ ಉದ್ಘಾಟನಾ ಕಾರ್ಯಕ್ರಮವು ನಡೆಯಿತು.


ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ರವರು, ನಂತೂರಿನಿಂದ ಕುಡುಪು ಹೋಗುವ ಮುಖ್ಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ನವೀಕೃತ ಬಸ್ ಸ್ಟ್ಯಾಂಡ್ ಹಿಂದೆ ಪಾಳು ಬಿದ್ದು ಯಾರಿಗೂ ಉಪಯೋಗವಾಗದಂತಹ ಸ್ಥಿತಿಯಲ್ಲಿತ್ತು. ಇದೀಗ ಸೇವಾ ಸಂಕಲ್ಪ ಅಭಿಯಾನದ ಭಾಗವಾಗಿ ಮಂಗಳೂರು ನಗರ ದಕ್ಷಿಣದ ಹಿಂದುಳಿದ ವರ್ಗಗಳ ಮೋರ್ಚಾದವರು ತಮ್ಮ ದುಡಿಮೆಯಿಂದಲೇ ನವೀಕೃತಗೊಳಿಸಿರುವುದು ಮಾದರಿ ಕಾರ್ಯ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಇದರ ಉಪಯೋಗವಾದರೆ ಈ ಸೇವಾ ಸಂಕಲ್ಪದ ಉದ್ದೇಶ ಸಾಕಾರಗೊಳ್ಳಲಿದೆ. ಆ ಕಾರಣಕ್ಕೆ ಹಿಂದುಳಿದ ವರ್ಗಗಳ ಮೋರ್ಚಾದ ಪ್ರತಿಯೊಬ್ಬರಿಗೂ ಸಮಸ್ತ ಜನತೆಯ ಪರವಾಗಿ ಧನ್ಯವಾದಗಳು ಎಂದರು.


ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಒಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷರಾದ ಮಹೇಶ್ ಜೋಗಿ, ಜಿಲ್ಲಾ ಕಾರ್ಯದರ್ಶಿ ದೀಪಿಕಾ ಮನೋಜ್, ಮಂಡಲದ ಒಬಿಸಿ ಮೋರ್ಚಾದ ಪ್ರಭಾರ ಅಧ್ಯಕ್ಷರಾದ ಅರುಣ್ ಉರ್ವ, ಪ್ರಧಾನ ಕಾರ್ಯದರ್ಶಿಗಳಾದ ಕಿರಣ್ ದೇವಾಡಿಗ ಹಾಗೂ ಸುಕೇಶ್ ಅಳಪೆ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ನಿಕಟ ಪೂರ್ವ ಪಾಲಿಕೆ ಸದಸ್ಯರುಗಳಾದ ಕಿಶೋರ್ ಕೊಟ್ಟಾರಿ, ಕಾವ್ಯ ನಟರಾಜ್ ಆಳ್ವ, ಪೂರ್ವ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ರವಿಚಂದ್ರ, ದಕ್ಷಿಣ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಪ್ರವೀಣ್ ನಿಡ್ಡೆಲ್, ಪ್ರಮುಖರಾದ ರಾಘವೇಂದ್ರ, ಅಜಯ್ ಕುಲಶೇಖರ, ಜಯಕುಮಾರ್, ರಾಮ್ ಪ್ರಸಾದ್, ಪ್ರವೀಣ್ ಗುಂಡಳಿಕೆ, ಸೇರಿದಂತೆ ಮಂಡಲದ, ಜಿಲ್ಲೆಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top