ಔಷಧಿ ತಯಾರಿಕಾ ಸಂಸ್ಥೆಯ ನಿವೃತ್ತ ಅಧಿಕಾರಿ ಎಂ. ಲಕ್ಷ್ಮೀ ನಾರಾಯಣ ರಾವ್ ನಿಧನ

Shreya Hegde
0



ಸುರತ್ಕಲ್: ಮೈರ್ಪಾಡಿ ಕುಳಾಯಿ ಮೂಲದ ನಿವಾಸಿಯೂ, ಕಳೆದ 62 ವರ್ಷಗಳಿಂದ ಮುಂಬಯಿಯಲ್ಲಿ ನೆಲೆಸಿದ್ದ ಔಷಧಿ ತಯಾರಿಕಾ ಸಂಸ್ಥೆಯ ನಿವೃತ್ತ ಅಧಿಕಾರಿಯೂ ಆಗಿದ್ದ ಎಂ. ಲಕ್ಷ್ಮೀ ನಾರಾಯಣ ರಾವ್ (91 ವರ್ಷ) ಅವರು ಗುರುವಾರ (ಅ.22) ನಿಧನರಾಗಿದ್ದಾರೆ. ಇವರು ಸುರತ್ಕಲ್‌ನ ವಿದ್ಯಾದಾಯಿನೀ ಶಿಕ್ಷಣ ಸಂಸ್ಥೆಯ ಹಳೆವಿದ್ಯಾರ್ಥಿಯಾಗಿದ್ದರು.


ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಹಿಂದು ವಿದ್ಯಾದಾಯಿನೀ ಸಂಘದ ಮಾಜಿ ಕಾರ್ಯದರ್ಶಿ ಎಂ. ವೆಂಕಟ್ರಾವ್ ಸೇರಿದಂತೆ ಸಹೋದರ, ಸಹೋದರಿ ಮತ್ತು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಅಗಲಿಕೆಗೆ ಹಲವಾರು ಗಣ್ಯರು ಹಾಗೂ ಹಳೆವಿದ್ಯಾರ್ಥಿ ಸಂಘದ ಪ್ರಮುಖರು ಕಂಬನಿ ಮಿಡಿದಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top