ಪುತ್ತೂರಿನಲ್ಲಿ ನಾಳೆ ಸರಾಫ್ ಮುಳಿಯ ಶ್ಯಾಮ್ ಭಟ್ ಸ್ಮರಣಾರ್ಥ ಶ್ರದ್ಧಾಂಜಲಿ ಕಾರ್ಯಕ್ರಮ

Shreya Hegde
0



ಪುತ್ತೂರು: ಚಿರಸ್ಮರಣೀಯರಾದ ದಿವಂಗತ ಸರಾಫ್ ಶ್ರೀ ಮುಳಿಯ ಶ್ಯಾಮ್ ಭಟ್ ಅವರ ಜೀವನದ ಮೌಲ್ಯಗಳು, ಆದರ್ಶಗಳು ಹಾಗೂ ಸಮಾಜದೊಂದಿಗಿನ ಬಾಂಧವ್ಯವನ್ನು ಸ್ಮರಿಸುತ್ತಾ, ಗೌರವಪೂರ್ವಕ ನುಡಿನಮನ ಸಲ್ಲಿಸುವ 'ಸಾರ್ಥಕ' ಶ್ರದ್ಧಾಂಜಲಿ ಹಾಗೂ ಭಾವಪೂರ್ಣ ನಾದ - ನುಡಿ ನಮನ ಕಾರ್ಯಕ್ರಮವು ನಾಳೆ ಅಕ್ಟೋಬರ್ 24 ರಂದು ಬೆಳಿಗ್ಗೆ 11 ಗಂಟೆಯಿಂದ ಪುತ್ತೂರಿನ ಶ್ಯಾಮಲೋಚನಾ ಪಾಂಗಳಾಯಿಯಲ್ಲಿ ಜರುಗಲಿದೆ.


ದಿವಂಗತರ ಸ್ಮರಣಾರ್ಥ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಅವರ ಆತ್ಮಕ್ಕೆ ಗೌರವ ಸಲ್ಲಿಸಲು ಆಗಮಿಸುವಂತೆ ಗ್ರಾಹಕ ಬಂಧು-ಬಾಂಧವರು, ಅಭಿಮಾನಿ ಮಿತ್ರರು ಹಾಗೂ ಹಿತೈಶಿಗಳಿಗೆ ಮುಳಿಯ ಕುಟುಂಬದವರು ಮತ್ತು ವಿವಿಧ ಸೌಹಾರ್ದ ಸಂಸ್ಥೆಗಳ ವತಿಯಿಂದ ಪ್ರೀತಿಪೂರ್ವಕ ಆಹ್ವಾನ ನೀಡಲಾಗಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top