ನಂದವಾಡಗಿಯ ಮಹಾಂತೇಶ್ವರ ಮಠದಲ್ಲಿ ಬನ್ನಿ ಮಹಾಂಕಾಳಿಗೆ ವಿಶೇಷ ಪೂಜೆ

Shreya Hegde
0




ಬಾಗಲಕೋಟೆ: ಜಿಲ್ಲೆಯ ಇಳಕಲ್ ತಾಲೂಕಿನ ನಂದವಾಡಗಿ ಗ್ರಾಮದಲ್ಲಿ ಪ್ರತಿವರ್ಷದ ಸಂಪ್ರದಾಯದಂತೆ ನಂದವಾಡಗಿಯ ಪರಮಪೂಜ್ಯ ಶ್ರೀ ಮಹಾಂತಲಿಂಗ ಶಿವಾಚಾರ್ಯ ಶ್ರೀಗಳು ಹಾಗೂ ಕಿರಿಯ ಪೂಜ್ಯರಾದ ಚನ್ನಬಸವ ಶಿವಾಚಾರ್ಯ ಶ್ರೀಗಳವರ ಊರಿನ ಹಿರಿಯರು ಸನ್ಮುಖದಲ್ಲಿ ಬನ್ನಿ ಗಿಡದ ಮಹಾಕಾಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಬನ್ನಿ ಮುಡಿವ ಕಾರ್ಯಕ್ರಮವನ್ನು ನಡೆಸಿಕೊಟ್ಟರು.


ಪೂಜ್ಯರು ನೆರದಿದ್ದ ಭಕ್ತರೆಲ್ಲರಿಗೆ ಆಶೀರ್ವದಿಸಿ ಸದಾಕಾಲ ಸುತ ಸುಖ ಶಾಂತಿ ನೆಮ್ಮದಿಯಿಂದ ನಮ್ಮ ಮಠದ ಭಕ್ತರು ಸದಾ ಕಾಲ ಸನ್ಮಂಗಳವಾಗಿರಲಿ ಎಂದು ಆಶೀರ್ವದಿಸಿದರು. ಊರಿನ ಭಕ್ತರಲ್ಲರು ಬನ್ನಿ ಮೂಡಿದ ನಂತರ ಪ್ರಥಮವಾಗಿ ಹಿರಿಯ ಹಾಗೂ ಹಿರಿಯ ಪರಮಪೂಜ್ಯರಿಗೆ ಬನ್ನಿ ವಿನಿಯೋಗ ಮಾಡಿಕೊಂಡು ನಂತರ ಪ್ರತಿ ವರ್ಷದ ಸಂಪ್ರದಾಯದಂತೆ ಮಠದ ಗದ್ದುಗೆ ಬನ್ನಿ ಸಮರ್ಪಣೆ ಮಾಡಿ  ಊರಿನ ಸಮಸ್ತ ಜನ ಪರಸ್ಪರ ಬನ್ನಿ ಪರಸ್ಪರವಾಗಿ ವಿನಿಯೋಗ ಮಾಡುವ ಮೂಲಕ ಮಠದ ಸಂಪ್ರದಾಯವನ್ನು ಮುಂದುವರಿಸಿ ಬನ್ನಿ ವಿನಿಯೋಗ ಮಾಡಿಕೊಳ್ಳುವ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು.


ನೆರೆದಿದ್ದ ಭಕ್ತರಿಗೆ ಪರಮಪೂಜ್ಯ ಹಿರಿಯ ರೈತರು ಸೈನಿಕರು ಹಾಗೂ ಭಕ್ತರು ಮಾಡುವ ಪ್ರಾರ್ಥನೆಯಿಂದ ನಾವೆಲ್ಲರೂ ಸುಖ ಶಾಂತಿ ನೆಮ್ಮದಿಯಿಂದ ಇರಲು ಸಾಧ್ಯ ಎಂದು ಭಕ್ತರನ್ನು ಉದ್ದೇಶಿಸಿ ಮಾತನಾಡಿ ನಮ್ಮ ಮಠದ ಪರಂಪರೆಯನ್ನು ಪ್ರತಿ ವರ್ಷ ಬನ್ನಿ ಹಬ್ಬ ವಿನಿಯೋಗ ಮಾಡುವುದರ ಮೂಲಕ ಮುಂದುವರಿಸಿತ್ತಿರುವ ನಂದವಾಡಗೆ ಆಗುವ ಸುತ್ತಮುತ್ತಲಿನ ಭಕ್ತರಿಗೆ ಸದಾಕಾಲ ಸಂಪನ್ನ ವಾಗಿರುವಂತೆ ಶ್ರೀಗಳ ಆಶೀರ್ವಾದ ಸದಾ ಭಕ್ತರ ಮೇಲಿರುತ್ತದೆ ಎಂದು ಹೇಳಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top