ವಿದ್ಯುತ್ ತಗುಲಿ ಮಂಗ ಸಾವು; ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ

Upayuktha
0

 



ಹುನಗುಂದ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮದಲ್ಲಿ ಶುಕ್ರವಾರ ಸಂಜೆ ವಿದ್ಯುತ್ ತಗುಲಿ ಮಂಗವೊಂದು ಸಾವನ್ನಪ್ಪಿದ ಘಟನೆ ನಡೆದಿದೆ.


ಮಂಗದ ಸಾವಿನ ಬಳಿಕ ಗ್ರಾಮಸ್ಥರು ಹಿಂದೂ ಧಾರ್ಮಿಕ ಸಂಪ್ರದಾಯದಂತೆ, ಶುಕ್ರವಾರ ಅಂತ್ಯಸಂಸ್ಕಾರ ನೆರವೇರಿಸಿದರು. ಗ್ರಾಮದ ಶ್ರೀ ರಕ್ಕಸಗಿ ಮಾರುತೇಶ್ವರ ದೇವಸ್ಥಾನದ ಸಮೀಪ ಮಂಗದ ಅಂತಿಮ ವಿಧಿವಿಧಾನಗಳನ್ನು ನಡೆಸಲಾಯಿತು.


ಮಂಗಕ್ಕೆ ಸ್ನಾನ ಮಾಡಿಸಿ, ಅರಿಶಿಣ-ಕುಂಕುಮ ಹಚ್ಚಿ, ಹೂವಿನ ಹಾರಗಳನ್ನು ಹಾಕಿ ಗೌರವ ಸಲ್ಲಿಸಲಾಯಿತು. ಬಳಿಕ ಹೊಸ ಬಟ್ಟೆ ತೊಡಿಸಿ, ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ಮಾಡಲಾಯಿತು. ಮಂಗವನ್ನು ಕುರ್ಚಿಯಲ್ಲಿ ಕೂರಿಸಿ ಹೂವಿನ ಹಾರಗಳಿಂದ ಅಲಂಕರಿಸಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದು, ಮಂಗಕ್ಕೆ ಗೌರವ ಸಲ್ಲಿಸಿದರು.

ಮಂಗವನ್ನು ಆಂಜನೇಯ ಸ್ವಾಮಿಯ ಸ್ವರೂಪವೆಂದು ಭಾವಿಸುವ ಧಾರ್ಮಿಕ ನಂಬಿಕೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಂಪ್ರದಾಯಬದ್ಧವಾಗಿ ಅಂತ್ಯಸಂಸ್ಕಾರ ನೆರವೇರಿಸಿದರು.


ಪ್ರಾಣಿ ಮೃತಪಟ್ಟ ಸಂದರ್ಭದಲ್ಲಿಯೂ ಧಾರ್ಮಿಕ ನಂಬಿಕೆ ಹಾಗೂ ಸಂಪ್ರದಾಯಕ್ಕೆ ಅನುಗುಣವಾಗಿ ಅಂತಿಮ ಗೌರವ ಸಲ್ಲಿಸಿದ ಘಟನೆ ಗ್ರಾಮದಲ್ಲಿ ಗಮನ ಸೆಳೆಯಿತು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top