ರಾಷ್ಟ್ರ ನಾಯಕರ ಆದರ್ಶ ಪಾಲನೆಗೆ ಕರೆ

Upayuktha
0



ಹುನಗುಂದ: ತಮ್ಮ ಸರಳತೆ ಮತ್ತು ಆದರ್ಶ ಬದುಕಿನ ಮೌಲ್ಯಗಳ ಮೂಲಕ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ವಿಶ್ವ ಮಾನ್ಯತೆ ಪಡೆದರು. ಅಂಥವರ ಆದರ್ಶ ಬದುಕಿನ ನಡೆಯಲ್ಲಿ ನಾವು ಸಾಗಬೇಕು ಎಂದು ನಿವೃತ್ತ ಶಿಕ್ಷಕ ಎಸ್ಕೆ ಕೊನೆಸಾಗರ ಹೇಳಿದರು.


ಅವರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕ ಹಮ್ಮಿಕೊಂಡ ಇಬ್ಬರೂ ನಾಯಕರ ಜಯಂತಿ ಕಾರ್ಯಕ್ರಮದ ಅತಿಥಿಗಳಾಗಿ ಮಾತನಾಡಿದರು.


ಪ್ರಭಾರಿ ಪ್ರಾಚಾರ್ಯ ವಿ.ಕೆ. ಶಶಿಮಠ ಅಧ್ಯಕ್ಷತೆ ವಹಿಸಿದ್ದರು. ಎಲ್ಲ ಉಪನ್ಯಾಸಕರು ಉಪಸ್ಥಿತರಿದ್ದರು. ಸಿ.ಎಂ.ಪುರಂದರೆ ಸರ್ವ ಧರ್ಮ ಪ್ರಾರ್ಥನೆ ಮಾಡಿಸಿದರು. ಐ.ಎಚ್.ನಾಯಕ ಸ್ವಾಗತಿಸಿದರು. ಡಾ.ಎನ್.ವೈ.ನದಾಫ್ ವಂದಿಸಿದರು. ಕಾರ್ಯಕ್ರಮ ಮೊದಲು ಸ್ವಚ್ಛತಾ ಶ್ರಮದಾನ ನಡೆಯಿತು.


ನಿವೃತ್ತ ನೌಕರರ ಸಂಘದಲ್ಲಿ ಆಚರಣೆ 

ಹುನಗುಂದ: ತಾಲೂಕು ಸರ್ಕಾರಿ ನಿವೃತ್ತ ಸಂಘದ ಕಚೇರಿಯಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಅವರ ಜಯಂತಿಯನ್ನು ಅಧ್ಯಕ್ಷ ಎ.ಕೆ.ಉಪನಾಳ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.


ಕಾರ್ಯದರ್ಶಿ ಡಿ.ವೈ. ಕೊಡಗಾನೂರ, ನಿರ್ದೇಶಕ ನಾಗಪ್ಪ ಕರಂಡಿ, ಸಿ.ಎಸ್. ಅಂಗಡಿ, ಎಲ್.ಜಿ. ದಿವಟಗಿ, ಎಸ್ಕೆ ಕೊನೆಸಾಗರ, ಸದಸ್ಯ ಆರ್.ಎಸ್. ರಾಜಮನಿ ಉಪಸ್ಥಿತರಿದ್ದರು.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top