ಹೊನ್ನಾವರ ಚೌಡೇಶ್ವರಿ ಸನ್ನಿಧಿಯಲ್ಲಿ ಮನಸೂರೆಗೊಂಡ ಭಕ್ತಿಸಂಗೀತ

Shreya Hegde
0

ಆಯ್ದ ಗಾಯಕರ ಸುಮಧುರ ಗಾಯನಕ್ಕೆ ಭಕ್ತರಿಂದ ಮೆಚ್ಚುಗೆ; ಕಲಾವಿದರಿಗೆ ಸನ್ಮಾನ



ಹೊನ್ನಾವರ: ಶರನ್ನವರಾತ್ರಿ ಉತ್ಸವದ ಎಂಟನೇ ದಿನವಾದ ಅಕ್ಟೋಬರ್ 18ರ ಭಾನುವಾರ, ಹೊನ್ನಾವರ ತಾಲೂಕಿನ ಕೆರೆಕೋಣ ಕೊಂತಪಾಲದ ಶ್ರೀ ಚೌಡೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ಜಿಲ್ಲೆಯ ಆಯ್ದ ಗಾಯಕರ ಸಮ್ಮಿಲನದಲ್ಲಿ ಸುಮಧುರ ಭಕ್ತಿಸಂಗೀತ ಕಾರ್ಯಕ್ರಮ ನಡೆಯಿತು.


ಹೊನ್ನಾವರದ ನರಸಿಂಹ ನಾಯ್ಕ ಹರಡೆ ಅವರ ಸಂಯೋಜನೆಯಲ್ಲಿ ಜಿಲ್ಲೆಯ ಪ್ರತಿಭಾವಂತ ಗಾಯಕರನ್ನು ಒಳಗೊಂಡು ರೂಪಿಸಲಾಗಿದ್ದ ಭಕ್ತಿಸಂಗೀತ ಕಾರ್ಯಕ್ರಮ ಭಕ್ತಿಭಾವದೊಂದಿಗೆ ಅದ್ಭುತವಾಗಿ ಮೂಡಿಬಂದಿತು. ಪ್ರಸಿದ್ಧ ಗಾಯಕ ಮಾರುತಿ ನಾಯ್ಕ ಹಿರೇಬೈಲು, ರಾಜ್ಯ ಪ್ರಶಸ್ತಿ ಪುರಸ್ಕೃತ ಸುಗಮಸಂಗೀತ ಗಾಯಕ ಉಮೇಶ ಮುಂಡಳ್ಳಿ ಭಟ್ಕಳ ಹಾಗೂ ಸಂಗೀತ ಶಿಕ್ಷಕಿ, ಗಾಯಕಿ ಮಧುರಾ ನಾಯ್ಕ ಅವರ ಸುಮಧುರ ಗಾಯನ ಸಂಗೀತಾಸಕ್ತರ ಮನಸೂರೆಗೊಂಡಿತು.


ವಾದ್ಯಸಂಗೀತದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಿಜಯಕುಮಾರ್ ಮಹಾಲೆ ಕುಮಟಾ ಅವರು ಕೀಬೋರ್ಡ್‌ನಲ್ಲಿ, ಮಧುರಾ ನಾಯ್ಕ ಅಳ್ಳಂಕಿ ಅವರು ಹಾರ್ಮೋನಿಯಂನಲ್ಲಿ ಹಾಗೂ ಪ್ರದೀಪ ಭಂಡಾರಿ ಹೊನ್ನಾವರ ಅವರು ತಬಲದಲ್ಲಿ ಸಹಕರಿಸಿ ಗಾಯನಕ್ಕೆ ಮೆರುಗು ನೀಡಿದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಭಕ್ತಿಸಂಗೀತ ಕಾರ್ಯಕ್ರಮವು ಭಕ್ತರ ಮನದಲ್ಲಿ ಭಕ್ತಿರಸವನ್ನು ತುಂಬಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದ ಅಂತ್ಯದಲ್ಲಿ ಕ್ಷೇತ್ರದ ಆಡಳಿತ ಮಂಡಳಿಯ ವತಿಯಿಂದ ಭಾಗವಹಿಸಿದ ಕಲಾವಿದರನ್ನು ಗೌರವಿಸಲಾಯಿತು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top