ಹಿಂದೂ ಜನಜಾಗೃತಿ ಸಮಿತಿಯ ರಜತ ಮಹೋತ್ಸವ

Shreya Hegde
0

 ಅಕ್ಟೋಬರ್ 31 ರಂದು ಬೆಂಗಳೂರಿನಲ್ಲಿ 'ಸ್ನೇಹ ಸಮ್ಮೇಳನ' ಆಯೋಜನೆ




ಬೆಂಗಳೂರು: ರಾಷ್ಟ್ರ ಮತ್ತು ಧರ್ಮ ರಕ್ಷಣೆಯ ಉದಾತ್ತ ಧ್ಯೇಯದೊಂದಿಗೆ 2002 ರ ಅಕ್ಟೋಬರ್ 7 ರ ನವರಾತ್ರಿ ಘಟಸ್ಥಾಪನೆಯ ಶುಭ ದಿನದಂದು ಸ್ಥಾಪನೆಯಾದ 'ಹಿಂದೂ ಜನಜಾಗೃತಿ ಸಮಿತಿ'ಯು ಇದೀಗ ಯಶಸ್ವಿ 25 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ರಜತ ಮಹೋತ್ಸವದ ನಿಮಿತ್ತ ಸಮಿತಿಯ ವತಿಯಿಂದ ರಾಜಧಾನಿ ಬೆಂಗಳೂರಿನಲ್ಲಿ ಹಿಂದುತ್ವ ನಿಷ್ಠರ 'ಸ್ನೇಹ ಸಮ್ಮೇಳನ' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.


ಧರ್ಮಶಿಕ್ಷಣ, ಧರ್ಮಜಾಗೃತಿ, ಧರ್ಮರಕ್ಷಣೆ, ರಾಷ್ಟ್ರರಕ್ಷಣೆ ಹಾಗೂ ಹಿಂದೂಗಳ ಸಂಘಟನೆ ಎಂಬ ಪಂಚಸೂತ್ರಗಳ ಅಡಿಯಲ್ಲಿ ಸಮಿತಿಯು ನಿರಂತರವಾಗಿ ಶ್ರಮಿಸುತ್ತಿದೆ. ಜಾತಿ, ಸಂಪ್ರದಾಯ ಮತ್ತು ಭಾಷಿಕ ಭೇದಗಳನ್ನು ತೊರೆದು ಧರ್ಮಾಧಿಷ್ಠಿತ 'ಹಿಂದೂ ರಾಷ್ಟ್ರ' ಸ್ಥಾಪಿಸುವುದೇ ಸಮಿತಿಯ ಮುಖ್ಯ ಧ್ಯೇಯವಾಗಿದೆ. ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಸಮಿತಿಯು ದೇಶಾದ್ಯಂತ 189 ಕ್ಕೂ ಹೆಚ್ಚು ಹಿಂದೂ ರಾಷ್ಟ್ರ ಅಧಿವೇಶನಗಳು, 2,180 ಕ್ಕೂ ಹೆಚ್ಚು ಜಾಗೃತಿ ಸಭೆಗಳು, 1,700 ಕ್ಕೂ ಹೆಚ್ಚು ಆಂದೋಲನಗಳು ಹಾಗೂ 4,188 ಕ್ಕೂ ಅಧಿಕ ಧರ್ಮಶಿಕ್ಷಣ ವರ್ಗಗಳನ್ನು ಯಶಸ್ವಿಯಾಗಿ ಸಂಘಟಿಸಿದೆ. ಇದರೊಂದಿಗೆ ಲವ್ ಜಿಹಾದ್, ಹಲಾಲ್ ಪ್ರಮಾಣಪತ್ರ ಮತ್ತು ಮತಾಂತರದಂತಹ ಪ್ರಸ್ತುತ ಸವಾಲುಗಳ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದ್ದು, ದೇವಾಲಯಗಳ ರಕ್ಷಣೆಗಾಗಿ ನಿರಂತರವಾಗಿ ಶ್ರಮಿಸುತ್ತಿದೆ.


ಈ ಕಾರ್ಯಕ್ರಮವು 2026 ರ ಅಕ್ಟೋಬರ್ 31 ರ ಶನಿವಾರದಂದು ಸಂಜೆ 5:00 ಗಂಟೆಗೆ ಬೆಂಗಳೂರಿನ ವಿ.ವಿ. ಪುರಂನಲ್ಲಿರುವ ವಾಸವಿ ಟೆಂಪಲ್ ಸ್ಟ್ರೀಟ್‌ನ ಜೈನ್ ಕಾಲೇಜು ಹಿಂಭಾಗದ 'ಮಾನಂದಿ ನಂಜುಂಡ ಶೆಟ್ಟಿ ಸಭಾಂಗಣ'ದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ  ರಮೇಶ್ ಶಿಂಧೆ ಹಾಗೂ ಯುವ ಬ್ರಿಗೇಡ್ ಸಂಸ್ಥಾಪಕರಾದ  ಚಕ್ರವರ್ತಿ ಸೂಲಿಬೆಲೆ ಅವರು ಭಾಗವಹಿಸಿ ಮಾತನಾಡಲಿದ್ದಾರೆ. ಈ ಶುಭ ಸಂದರ್ಭದಲ್ಲಿ ನಡೆಯಲಿರುವ ಸ್ನೇಹ ಸಮ್ಮೇಳನದಲ್ಲಿ ಸಮಸ್ತ ಧರ್ಮಾಭಿಮಾನಿಗಳು, ರಾಷ್ಟ್ರಪ್ರೇಮಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಮಿತಿಯು ವಿನಂತಿಸಿದೆ. ಹೆಚ್ಚಿನ ಮಾಹಿತಿಗಾಗಿ 7204082609 ಸಂಖ್ಯೆಯನ್ನು ಸಂಪರ್ಕಿಸಬಹುದು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top