ಗ್ರಾಹಕ ಸೇವೆಯ ಸಂಭ್ರಮೋತ್ಸವ; ಸಾಂಸ್ಕೃತಿಕ ಕಾರ್ಯಕ್ರಮ

Upayuktha
0

 



ಕಾಸರಗೋಡು: ಅಮ್ಮಾ ಡಿನ್ನರ್ ಸೆಟ್ ಹಾಗೂ ಅಮ್ಮಾ ಇವೆಂಟ್ ಮ್ಯಾನೇಜ್ಮೆಂಟ್ಸ್ ಇದರ ಹತ್ತು ವರ್ಷಗಳ ಯಶಸ್ವೀ ಗ್ರಾಹಕ ಸೇವೆಯ ಸಂಭ್ರಮೋತ್ಸವ ಸಮಾರಂಭವು ಕಾಸರಗೋಡು ಕೋಟೆಕಣಿ ರಮಾನಾಥ ಸಾಂಸ್ಕೃತಿಕ ಭವನದಲ್ಲಿ ಬಹಳ ಸರಳ ಹಾಗೂ ಅಚ್ಚುಕಟ್ಟಾಗಿ ಜರುಗಿತು.


ರವೀಶ್ ತಂತ್ರಿಯವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದ ಕಾರ್ಯಕ್ರಮದ ವೇದಿಕೆಯಲ್ಲಿ ಸಾಹಿತಿ ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ, ಹಂಸ, ಲವ ಕುಮಾರ, ಗುರುಪ್ರಸಾದ್ ಕೋಟೆಕಣಿ, ಕುಶಾ, ಕಾವ್ಯ, ಶ್ರೀಕಾಂತ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಜಗದೀಶ್ ಕೂಡ್ಲು ಕಾರ್ಯಕ್ರಮವನ್ನು ನಿರ್ವಹಿಸಿದರು. ಸಮಾರಂಭದ ಅಂಗವಾಗಿ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.) ಕಾಸರಗೋಡು ಸಂಸ್ಥೆಯ 'ಸಾಂಸ್ಕೃತಿಕ ಕಲಾ ವೈಭವ ಕಲಾವಿದರ ಕಲರವ' ಕಾರ್ಯಕ್ರಮ ಅತ್ಯಂತ ವರ್ಣರಂಜಿತವಾಗಿ ನಡೆದು ಜನಮನ ರಂಜಿಸಿತು.


ಸಂಸ್ಥೆಯ ಕಾರ್ಯದರ್ಶಿ ಗುರುರಾಜ್ ಕಾಸರಗೋಡು ಅವರ ಸಂಯೋಜನೆ ಹಾಗೂ ನಿರೂಪಣೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ವರ್ಷಾ ಶೆಟ್ಟಿ, ಭವಿಷ್ಯ ಪೂಜಾರಿ, ಆನ್ಮೇತಾ ಶೆಟ್ಟಿ ಕೋಡಿಜಲ್, ತೇಜುಷಾ, ಹಂಶಿತ್ ಆಳ್ವ, ಶಿವಾನ್ಯ, ಧ್ಯೇಯಾ, ಭಾನ್ವಿ ಕುಲಾಲ್, ಅರ್ಚನಾ ಹೇರೂರ್, ಅಪೂರ್ವ ಕೆ.ಎಸ್., ತ್ರಿಷಾ ಅಡೆಕಲಕಟ್ಟೆ ಮುಂತಾದ ಸಂಸ್ಥೆಯ ಅಪ್ರತಿಮ ಕಲಾವಿದರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಸಹಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವೇದಿಕೆಯ ಗಣ್ಯರ ಉಪಸ್ಥಿತಿಯಲ್ಲಿ ಭಾಗವಹಿಸಿದ ಸಂಸ್ಥೆಯ ಕಲಾವಿದರಿಗೆ ಅಮ್ಮಾ ಡಿನ್ನರ್ ಸೆಟ್ ವತಿಯಿಂದ ಗೌರವ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು.


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top