ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆ ಅವರ ಹಿರಿತನಕ್ಕೆ ಶೋಭೆಯಲ್ಲ: ಶಾಸಕ ಕಾಮತ್

Upayuktha
0


ಮಂಗಳೂರು: ದೇಶದ ಜನರ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರು ಹತಾಶೆಗೊಂಡಿರುವುದು ಅವರು ಬಳಸುವ ಭಾಷೆಯಲ್ಲೇ ಅರಿವಾಗುತ್ತಿದೆ, ಮಲ್ಲಿಕಾರ್ಜುನ ಖರ್ಗೆಯವರು ಬಳಸಿರುವ ಭಾಷೆ ಅವರ ವ್ಯಕ್ತಿತ್ವವನ್ನೇ ತೋರಿಸುತ್ತಿದೆ ಹೊರತು ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ಘನತೆಗೆ ಕಿಂಚಿತ್ತೂ ಧಕ್ಕೆ ತರುವುದಿಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಹೇಳಿದರು.


ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷರು ಭಾಷಣವೊಂದರ ಮಧ್ಯೆ ತಾಳ್ಮೆ ಕಳೆದುಕೊಂಡು ವಿನಾಕಾರಣ ಮಾನ್ಯ ಪ್ರಧಾನಿಗಳ ತಂದೆಯವರನ್ನು ನಿಂದಿಸಿರುವುದು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ರಾಜಕೀಯವಾಗಿ ಸುಧೀರ್ಘ ಅನುಭವ ಹೊಂದಿರುವ ಖರ್ಗೆಯವರಂತಹ ಹಿರಿಯ ನಾಯಕರು ತಮ್ಮ ಜವಾಬ್ದಾರಿಯನ್ನು ಅರಿತು ಮಾತಾಡಬೇಕು ಹೊರತು ಇಂತಹ ಹೇಳಿಕೆಗಳ ಮೂಲಕ ಸಾರ್ವಜನಿಕವಾಗಿ ಸಣ್ಣವರಾಗಬಾರದು. ದೇಶಕ್ಕಾಗಿ, ದೇಶದ ಜನತೆಗಾಗಿ ಕರ್ತವ್ಯದಲ್ಲಿರುವ ಮಾನ್ಯ ಪ್ರಧಾನಿಗಳಿಗೆ ಜನರ ಪ್ರೀತಿ ವಿಶ್ವಾಸವೇ ಶ್ರೀರಕ್ಷೆ. ಅದರ ಮುಂದೆ ಕಾಂಗ್ರೆಸ್ಸಿನವರ ಇಂತಹ ಬಾಯಿ ಚಪಲದ, ಕ್ಷುಲ್ಲಕ ಹೇಳಿಕೆಗಳು ಲೆಕ್ಕಕ್ಕಿಲ್ಲ ಎಂಬುದನ್ನು ಜನರೇ ಪದೇಪದೇ ಉತ್ತರ ನೀಡುತ್ತಿದ್ದಾರೆ ಎಂದು ಶಾಸಕರು ಹೇಳಿದರು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top