ಸುರತ್ಕಲ್‌: ಪೋಲಿಯೋ ಜಾಗೃತಿ ನಡಿಗೆ- ವಾಕ್ ಥಾನ್

Upayuktha
0


ಸುರತ್ಕಲ್‌: ಪೋಲಿಯೋ ನಿರ್ಮೂಲನೆಯ ರೋಟರಿ ಸಂಸ್ಥೆಯ ಗುರಿ ಇದೀಗ ಸಾಧಿತವಾಗುತ್ತಿದೆ. ಪೋಲಿಯೋ ನಿರ್ಮೂಲನೆ ಬಗ್ಗೆ ಜನ ಜಾಗೃತಿ ಅತಿ ಅವಶ್ಯಕವಾಗಿದ್ದು ರೋಟರಿ ಸದಸ್ಯರ ಬದ್ಧತೆ ಮತ್ತು ಮಕ್ಕಳಿಗೆ ಲಸಿಕೆ ಹಾಕಿಸುವಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರಗಳ ಕಾರ್ಯಕರ್ತೆಯರ  ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ ಎಂದು ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್ ನುಡಿದರು.


ಸುರತ್ಕಲ್ ರೋಟರಿ ಕ್ಲಬ್ ರೋಟರಿ ಕ್ಲಬ್ ಮಂಗಳೂರು ಕೋಸ್ಟಲ್, ರೋಟರಿ ಮಂಗಳೂರು ಪೋರ್ಟ್ ಟೌನ್, ರೋಟರಿ ಕ್ಲಬ್ ಮಂಗಳೂರು ಮಿಡ್ ಟೌನ್, ಇಂಟರಾಕ್ಟ್ ಮತ್ತು ರೋಟರಾಕ್ಟ್ ಕ್ಲಬ್‌ಗಳ ಸಹಭಾಗಿತ್ವದಲ್ಲಿ ವಿಶ್ವ ಪೋಲಿಯೋ ದಿನಾಚರಣೆಯ ಅಂಗವಾಗಿ ಸುರತ್ಕಲ್ ನಗರದಲ್ಲಿ ನಡೆದ ಪೋಲಿಯೋ ಜಾಗೃತಿ ನಡಿಗೆ ವಾಕ್ ಥಾನ್ ಉದ್ಘಾಟಿಸಿ ಮಾತನಾಡಿದರು.


ರೋಟರಿ ಜಿಲ್ಲೆ 3181 ರ ಕಾರ್ಯದರ್ಶಿ (ಕಾರ್ಯಕ್ರಮ) ಡಾ. ಅರವಿಂದ ಭಟ್ ಮಾತನಾಡಿ ಪೋಲಿಯೋ ಮುಕ್ತ ವಿಶ್ವ ನಿರ್ಮಾಣಕ್ಕೆ ನಿರಂತರ ಯೋಜನೆ ಮತ್ತು ಪರಸ್ಪರ ಸಹಾಯ ಅಗತ್ಯವಿದೆ ಎಂದರು.


ಸಹಾಯಕ ಗವರ್ನರ್ ಗಳಾದ ಸಂದೀಪ್ ರಾವ್ ಇಡ್ಯಾ, ರಾಜೇಶ್ ಶೆಟ್ಟಿ, ಝೋನಲ್ ಲೆಫ್ಟಿನೆಂಟ್ ಸುಧಾಕರ್ ಸಾಲ್ಯಾನ್ ಉಪಸ್ಥಿತರಿದ್ದರು.


ರೋಟರಿ ಕ್ಲಬ್ ಸುರತ್ಕಲ್, ರೋಟರಿ ಕ್ಲಬ್ ಮಂಗಳೂರು ಕೋಸ್ಟಲ್, ರೋಟರಿ ಕ್ಲಬ್ ಮಂಗಳೂರು ಪೋರ್ಟ್ ಟೌನ್, ಸುರತ್ಕಲ್ ಇನ್ನರ್ ವೀಲ್ ಕ್ಲಬ್, ರೋಟರಿ ಕ್ಲಬ್ ಮಿಡ್ ಟೌನ್, ಡೌನ್ ಟೌನ್, ದೇರಳಕಟ್ಟೆ, ಸುರತ್ಕಲ್ ಶ್ರೀಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಇಂಟರಾಕ್ಟ್ ಕ್ಲಬ್ ನ ಪದಾಧಿಕಾರಿಗಳು ಮತ್ತು ಸದಸ್ಯರು, ಜಿಲ್ಲಾ ರೋಟರಿಯ ಪದಾಧಿಕಾರಿಗಳು ಜಾಗೃತಿ ಜಾಥಾದಲ್ಲಿ ಪಾಲ್ಗೊಂಡರು.


ಸುರತ್ಕಲ್ ರೋಟರಿ ಕ್ಲಬ್ ನ ಅಧ್ಯಕ್ಷ ಶ್ರೀಧರ ಟಿ.ಎನ್. ಸ್ವಾಗತಿಸಿದರು. ರೋಟರಿ ಕ್ಲಬ್ ಮಂಗಳೂರು ಕೋಸ್ಟಲ್ ನ ಅಧ್ಯಕ್ಷ ಕಿರಣ್ ಕುಮಾರ್ ರೈ ವಂದಿಸಿದರು.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top