ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಬಟ್ಟೆ ಬ್ಯಾಗ್ ವಿತರಣೆ

Shreya Hegde
0


‌

ಮಂಗಳೂರು: ಮುಂಬೈಯ ಲೋಬೊ ಫೌಂಡೇಶನ್ ಹಾಗೂ ಗ್ಲೋಬಲ್ ಸಿಂಪಥಿ ಫೌಂಡೇಶನ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ಬಿಜೈ ಕಾಪಿಕಾಡ್ ಅಂಗನವಾಡಿ ಶಾಲೆಯ ಮಕ್ಕಳಿಗೆ ಬಟ್ಟೆ ಬ್ಯಾಗ್ ಹಾಗೂ ಸಿಹಿ ತಿಂಡಿ ವಿತರಣೆ ಮಾಡಲಾಯಿತು. ಇದೇ ವೇಳೆ ಶಾಲಾ ಮಕ್ಕಳ ಶೈಕ್ಷಣಿಕ ಕಲಿಕೆಗೆ ಅಗತ್ಯ ವಿರುವ ಇಂಟರ್ನೆಟ್ ವ್ಯವಸ್ಥೆ ಯನ್ನು ಕಲ್ಪಿಸುವುದಾಗಿ ಫೌಂಡೇಶನ್ ಅಧ್ಯಕ್ಷ ರೋನ್ಸ್ ಬಂಟ್ವಾಳ್ ತಿಳಿಸಿದರು.


ಅಂಗನವಾಡಿ ಕೇಂದ್ರದ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಾಯ ನೀಡಲಾಗುವುದು ಹಾಗೂ ಅಂಗನವಾಡಿ ಕೇಂದ್ರದ ಪುಟಾಣಿಗಳಿಗೆ ಸಮವಸ್ತ್ರ ಒದಗಿಸುವುದಾಗಿ ಅಂತಾರಾಷ್ಟ್ರೀಯ ಜೂಡೋ ತರಬೇತುದಾರ ಹಾಗೂ ಕರ್ನಾಟಕ ರಾಜ್ಯ ಜೂಡೋ ಅಸೋಸಿಯೇಷನ್ ಅಧ್ಯಕ್ಷ ಯತೀಶ್ ಎನ್ ಬಂಗೇರಾ ತಿಳಿಸಿದರು.


ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ, ಶಾಲಾ ಶಿಕ್ಷಕಿ ನಂದಾ, ಲಕ್ಷ್ಮೀ ಉಪಸ್ಥಿತರಿದ್ದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top