ಸುರತ್ಕಲ್: ಶಾಸ್ತ್ರೀಯ ಸಂಗೀತವು ಮನಸ್ಸಿಗೆ ನೆಮ್ಮದಿ ಮತ್ತು ಪ್ರಶಾಂತತೆಯನ್ನು ನೀಡುವ ದೈವೀಕ ಕಲೆಯಾಗಿದೆ. ಭಕ್ತಿ ಮತ್ತು ಆಧ್ಯಾತ್ಮಿಕತೆಯ ಭಾವವನ್ನು ತಂದು ಕೊಡುವ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಲೆಗಳಿಗೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ಅಗತ್ಯವಿದೆ ಎಂದು ಹೊಸಬೆಟ್ಟು ನಾಗರಿಕ ಹಿತ ರಕ್ಷಣಾ ಸಮಿತಿ ಯ ಅಧ್ಯಕ್ಷ ಆನಂದ ಭಂಡಾರಿ ನುಡಿದರು.
ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ ) ಮತ್ತು ನಾಗರಿಕ ಸಲಹಾ ಸಮಿತಿ (ರಿ ) ಸುರತ್ಕಲ್ ಸಹಯೋಗದಲ್ಲಿ ಸುರತ್ಕಲ್ ಫ್ಲೈ ಓವರ್ ತಳಭಾಗದ ಎಂ. ಸಿ. ಎಫ್. ನಾಗರಿಕ ಸಲಹಾ ಸಮಿತಿ ಸಾಂಸ್ಕೃತಿಕ ವೇದಿಕೆ ಯಲ್ಲಿ ಆಯೋಜಿಸುತ್ತಿರುವ ಉದಯ ರಾಗ ಸರಣಿ ಕಾರ್ಯಕ್ರಮ ದ ಉದಯ ರಾಗ.. 65 ರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕರಾವಳಿ ಕಡಲಕಿನಾರೆ ಯ ಸ್ವಚ್ಛತಾ ಕಾರ್ಯಕರ್ತ ಗೋಪಾಲ ಬಾಳಿಗ, ಉಡುಪಿ ರಾಷ್ಟಕವಿ ಎಂ.ಗೋವಿಂದ ಪೈ ಸಂಶೋಧನ ಕೇಂದ್ರದ ಸಂಶೋಧಕ ಅಧಿಕಾರಿ ಡಾ. ಅರುಣ ಕುಮಾರ್, ನಾಗರಿಕ ಸಲಹಾ ಸಮಿತಿ ಯ ಅಧ್ಯಕ್ಷ ಡಾ. ಕೆ. ರಾಜಮೋಹನ ರಾವ್, ಕಾರ್ಯದರ್ಶಿ ಸತೀಶ್ ಸದಾನಂದ, ಸುರತ್ಕಲ್ ನಾಟ್ಯಾಂಜಲಿ ನೃತ್ಯ ಅಕಾಡೆಮಿ ಯ ಸ್ಥಾಪಕ ನಿರ್ದೇಶಕ ವಿದ್ವಾನ್ ಚಂದ್ರಶೇಖರ ನಾವಡ, ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ವಿಭು ರಾವ್ ಉಪಸ್ಥಿತರಿದ್ದರು.
ಮಣಿ ಕೃಷ್ಣಸ್ವಾಮಿ ಅಕಾಡೆಮಿ ಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಸ್ವಾಗತಿಸಿದರು. ಕೃಷ್ಣ ಮೂರ್ತಿ ವಂದಿಸಿದರು. ಮಯೂರಿ ಭಟ್, ಪೊಳಲಿ ಯವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ನಡೆಯಿತು. ವಯಲಿನ್ ನಲ್ಲಿ ಮಹತೀ. ಕೆ., ಕಾರ್ಕಳ ಮತ್ತು ಮೃದಂಗದಲ್ಲಿ ಅವಿನಾಶ್.ಬಿ,ಮಂಗಳೂರು ಸಹಕರಿಸಿದರು.
