ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಹೊಸ ಚಿತ್ರಕ್ಕೆ ಕಲಬುರಗಿ ಕಲಾವಿದರು ಹಾಜರು

Shreya Hegde
0



ಕಲಬುರಗಿ: ಕಾಂತಾರ ಚಿತ್ರದ ಖ್ಯಾತಿಯ ರಿಷಭ್ ಶೆಟ್ಟಿ ಅವರ ಹೊಸ ಚಿತ್ರ ಶೀಘ್ರದಲ್ಲಿ ಸೆಟ್ಟೇರಲಿದ್ದು  ಹೊಸ ಪ್ರತಿಭೆಗಳ ಹುಡುಕಾಟದ ಆಡಿಷನ್, ಕಾಸ್ಟಿಂಗ್ ಕಾಲ್‌ಗೆ ಕಲಬುರಗಿಯ ಸಾವಿರಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡು ಅದ್ಭುತ ಯಶಸ್ಸು ಕಂಡಿದೆ. ಕಲಾವಿದರ ಉತ್ಸಾಹಕ್ಕೆ ಗಣ್ಯರ ತಂಡ ಶುಭ ಹಾರೈಸಿದೆ.


ಕಲಬುರಗಿಯ ಶ್ರೀ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಆವರಣದಲ್ಲಿ ಅ. 18 ಮತ್ತು 19 ರಂದು  ಎರಡು ದಿನಗಳಲ್ಲಿ  ಹೊಸ ನಟ ನಟಿಯರ ಆಡಿಶನ್ ಕಾಸ್ಟಿಂಗ್ ಕಾಲ್ ಗೆ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ. ಸುಮಾರು ಸಾವಿರಕ್ಕೂ ಹೆಚ್ಚು ರಂಗಭೂಮಿ ಕಲಾವಿದರು ನೃತ್ಯ ತಂಡದ ಸದಸ್ಯರು, ಯೂಟ್ಯೂಬರ್ ಗಳು, ಟಿಕ್ ಟಾಕ್ ಖ್ಯಾತಿಯ ಕಲಾವಿದರು, ಹಾಡುಗಾರರು,ಹವ್ಯಾಸಿ ರಂಗಭೂಮಿ ಕಲಾವಿದರು ರಿಷಭ್ ಶೆಟ್ಟಿ ಅವರ ಹೊಸ ಚಿತ್ರಕ್ಕೆ ಸೇರಲು ಕಲ್ಯಾಣ ಕರ್ನಾಟಕ ಭಾಗದ ನಟ ನಟಿಯರು  ನಟಿಯರು ಉತ್ಸಾಹದಿಂದ ಪಾಲ್ಗೊಂಡರು. ಉತ್ತರ ಕರ್ನಾಟಕದ ಕಥಾ ವಸ್ತುವಿನೊಂದಿಗೆ ರಚನೆ ಮಾಡಿದ ಬೆಲ್ ಬಾಟಮ್ ಚಿತ್ರ ಖ್ಯಾತಿಯ ನಿರ್ದೇಶಕ ಚಿರಂತ್ ಅವರ ನೇತೃತ್ವದ ತಂಡ ನಟ ನಟಿಯರ ಆಯ್ಕೆ ಪ್ರಕ್ರಿಯೆಯನ್ನು ನಡೆಸಿತು. ಚಿತ್ರಕಥೆಯ ಚಿತ್ರೀಕರಣವು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಚಿರಂತನ್ ಹಾಗೂ ತಂಡದ ಸದಸ್ಯ ಸುಹಾಸ್ ಶೆಟ್ಟಿ ತಿಳಿಸಿದರು. ಚಿತ್ರತಂಡದ ನಿರ್ದೇಶಕ ಚಿರಂತ್ ಕ್ಯಾಮರಾಮ್ಯಾನ್ ಅಭಿನವ್, ಆದಿತ್ಯ, ಸುಭಾಷ್ ಶೆಟ್ಟಿ, ದಿವ್ಯಾಧರ್ ಶೆಟ್ಟಿ, ಅಕ್ಷಯ್, ಛಾಯಾಗ್ರಾಹಕಿ ಪೂಜಾ ಸೇರಿದಂತೆ 20ಕ್ಕೂ ಹೆಚ್ಚು ಚಿತ್ರತಂಡದ ಸದಸ್ಯರು ಆಯ್ಕೆ ಪ್ರಕ್ರಿಯೆ ನಡೆಸಿದರು. 


ಚಿತ್ರದ ಯಶಸ್ವಿಗೆ ಬ್ಯಾಂಕ್ ಆಫ್ ಬರೋಡ ಸನ್ಮಾನ- ಗಣ್ಯರ ಹಾರೈಕೆ:

ಕಾಂತಾರ ಚಿತ್ರದ ಮೂಲಕ ವಿಶ್ವದಲ್ಲೇ ಜನಪ್ರಿಯತೆ ಗಳಿಸಿದ ರಿಷಭ್ ಶೆಟ್ಟಿ ಆವರು ಶರಣರ ನಾಡಿನಲ್ಲಿ  ಉತ್ತರ ಕರ್ನಾಟಕ ಶೈಲಿಯ ಹಾಗೂ ಭಾಷಾ ಸೊಗಡಿನೊಂದಿಗೆ ಚಿತ್ರ ನಿರ್ಮಾಣ ಮಾಡುತ್ತಿರುವುದು ಸಂತಸದ ಸಂಗತಿ. ಆ ಮೂಲಕ ಈ ಭಾಗದ ಕಲಾವಿದರಿಗೆ ಅವಕಾಶದ ಬಾಗಿಲು ತೆರೆದಂತಾಗಿದೆ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ  ಚಿತ್ರತಂಡಕ್ಕೆ ಸನ್ಮಾನ ನೆರವೇರಿಸಿದ ನಂತರ ಹೇಳಿದರು. ಬ್ಯಾಂಕ್ ಆಫ್ ಬರೋಡದ ಹೆಚ್ಚುವರಿ ಮಹಾ ಪ್ರಬಂಧಕರಾದ ಅಮಿತ್ ಶೆಟ್ಟಿ ಮಾತನಾಡಿ ಈ ಭಾಗದ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ರಿಷಬ್ ಶೆಟ್ಟಿ ಅವರ ಚಿಂತನೆ ಸ್ವಾಗತಾರ್ಹವಾಗಿದ್ದು ಚಿತ್ರ ಯಶಸ್ಸು ಹೊಂದಲಿ ಎಂದು ಶುಭಹಾರೈಸಿದರು. ಬ್ಯಾಂಕ್ ವತಿಯಿಂದ ಚಿತ್ರತಂಡದ ಸದಸ್ಯರಿಗೆ ಸ್ಮರಣಿಕೆ ನೀಡಿ  ಗೌರವದ ಸನ್ಮಾನ ನೆರವೇರಿಸಲಾಯಿತು.

‌



ಖ್ಯಾತ ನಿರ್ದೇಶಕ ಹಾಗೂ ನಟರಾದ ರಿಷಬ್ ಶೆಟ್ಟಿ ಅವರ ಹೊಸ ಚಿತ್ರಕ್ಕಾಗಿ ಕಲಬುರಗಿಯ ಕಲಾವಿದರ ಆಯ್ಕೆ ಮಾಡಿರುವುದು ಹೆಮ್ಮೆಯ ಸಂಗತಿ. ಅವರ ತಂಡಕ್ಕೆ ಶುಭವಾಗಲಿ ಎಂದು ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲರಾದ ರಾಮಕೃಷ್ಣ ರೆಡ್ಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರಂಗಭೂಮಿ ನಿರ್ದೇಶಕ ವಿಶ್ವರಾಜ್, ಕಲಾವಿದರಾದ ಅರವಿಂದ ಕುಲಕರ್ಣಿ, ಮಹೇಶ್ ಕಡೇಚೂರ್ ಮತ್ತಿತರು ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top