ಅ.24ರಂದು ಅಯ್ಯನ ಕಥೆಗಳು ಪುಸ್ತಕ ವಿತರಣಾ ಅಭಿಯಾನ

Shreya Hegde
0



ಕಲಬುರಗಿ: ಶ್ರೀಮತಿ ಬಾಲಮ್ಮ ಮಹಾದೇವಪ್ಪ ಕಡೇಚೂರ್ ಟ್ರಸ್ಟ್ ಕಲಬುರಗಿ ಇದರ ವತಿಯಿಂದ ಹಮ್ಮಿಕೊಳ್ಳಲಾಗುವ "ಅಯ್ಯನ ಕಥೆಗಳು" ಪುಸ್ತಕ ವಿತರಣಾ ಅಭಿಯಾನದ ನಾಲ್ಕನೇ  ಕಾರ್ಯಕ್ರಮ ಅ. 24ರಂದು ಶನಿವಾರ ಕಲಬುರಗಿಯ ಸೈಯದ್ ಚಿಂಚೋಳಿಯ ದಿ.ಚಂದ್ರಶೇಖರ್ ಪಾಟೀಲ್ ರೇವೂರು ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಜರಗಲಿದೆ.


ರಾಜ್ಯ ಪ್ರಶಸ್ತಿ ಪುರಸ್ಕೃತರು ಹೈದರಾಬಾದ್ ಸಂಸ್ಥಾನ ವಿಮೋಚನಾ ಹೋರಾಟಗಾರ, ಸಾಹಿತಿ ದಿ.ಮಹಾದೇವಪ್ಪ ಕಡೇಚೂರ್ ಅವರು ಮಕ್ಕಳಿಗಾಗಿ ಬರೆದ ನೀತಿ ಕಥೆಗಳ ಸಂಗ್ರಹ "ಅಯ್ಯನ ಕಥೆಗಳು" ಕೃತಿಯನ್ನು ಶಾಲಾ ಗ್ರಂಥಾಲಯಗಳಿಗೆ ನೀಡಿ ಮಕ್ಕಳಿಗೆ ಉಚಿತವಾಗಿ ಓದಲು ಅವಕಾಶ ಕಲ್ಪಿಸುವ ಪುಸ್ತಕ ವಿತರಣಾ ಅಭಿಯಾನದ ನಾಲ್ಕನೇ ಕಾರ್ಯಕ್ರಮಕ್ಕೆ ಅ.24ರ ಶನಿವಾರ ಬೆಳಗ್ಗೆ 11ಗಂಟೆಗೆ ಕಲಬುರಗಿಯ ಸಯ್ಯದ್ ಚಿಂಚೋಳಿಯ ಶಾಲೆಯಲ್ಲಿ ರಾಘವೇಂದ್ರ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಯಶೋಧಾ ಕಟಕೆ  ಚಾಲನೆ ನೀಡಲಿದ್ದಾರೆ.


ಖ್ಯಾತ ಕತೆಗಾರ್ತಿ ಹಾಗೂ ಸಾಹಿತಿ ಸಂಧ್ಯಾ ಹೊನಗುಂಟಿಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಲೆಯ ಆಡಳಿತ ಸಮಿತಿ ಅಧ್ಯಕ್ಷರಾದ ಸುನೀತಾ ಅನಿಲ್ ಕುಮಾರ್ ಡಾoಗೆ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಲಾ ನಿರ್ದೇಶಕರಾದ ಅನಿಲ್ ಕುಮಾರ್ ಡಾoಗೆ, ಮುಖ್ಯ ಗುರುಗಳಾದ ಅನಿತಾ ಪೂಜಾರಿ, ಡಾ.ಸದಾನಂದ ಪೆರ್ಲ ಮತ್ತು ಮಹೇಶ್ ಕಡೇಚೂರ್ ಉಪಸ್ಥಿತರಿರುವರು ಎಂದು ಟ್ರಸ್ಟ್ ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top