ಕರ್ನಾಟಕ ರಾಜ್ಯ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2026
ಮೂಡುಬಿದಿರೆ: ತುಮಕೂರಿನ ಜಿಲ್ಲಾ ಪಂಚಾಯತ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಅಥ್ಲೆಟಿಕ್ ಸಂಸ್ಥೆ (ರಿ.) ಮತ್ತು ತುಮಕೂರು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಕ್ರೀಡಾಂಗಣ ತುಮಕೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ದಕ್ಷಿಣ ಕನ್ನಡವನ್ನು ಪ್ರತಿನಿಧಿಸಿದ ಆಳ್ವಾಸ್‌ನ ಕ್ರೀಡಾಪಟುಗಳು 06 ಚಿನ್ನ, 07 ಬೆಳ್ಳಿ ಹಾಗೂ 04 ಕಂಚು ಒಟ್ಟು 17 ಪದಕದೊಂದಿಗೆ ಸಾಹಿಲ್ 100ಮೀ.ನಲ್ಲಿ ಹಾಗೂ ಆರಂಭಮ್ ರಾಜು 60ಮೀ.ನಲ್ಲಿ ನೂತನ ಕೂಟ ದಾಖಲೆಯನ್ನು ಮಾಡಿರುತ್ತಾರೆ.
ಫಲಿತಾಂಶ :
ಬಾಲಕರ ವಿಭಾಗದಲ್ಲಿ : ನಿತಿನ್ ಎಲ್ ಜಿ – ಚಕ್ರ ಎಸೆತ (ದ್ವಿತೀಯ), ಆರಂಭಮ್ ರಾಜು – 60ಮೀ (ಪ್ರಥಮ), ಸಮರ್ಥ್ ಸಂಜೀವ್ ಕುಮಾರ್ – 1000ಮೀ (ಪ್ರಥಮ), ಸಾಹಿಲ್ – 100 ಮೀ (ಪ್ರಥಮ), ಅಬ್ದುಲ್ ರಜಕ್ ಶಿಗ್ಗಾನ – ಹ್ಯಾಮರ್ ತ್ರೋ (ತೃತೀಯ), ಧನುಷ್ಚಂದ್ರ – ಚಕ್ರ ಎಸೆತ (ಪ್ರಥಮ), ದರ್ಶನ್ – 200ಮೀ (ತೃತೀಯ), ಕೃಷ್ಣ – ಜಾವೆಲಿನ್ ಎಸೆತ (ದ್ವಿತೀಯ), ಪ್ರೀತಮ್ – 5ಕಿಮೀ ನಡಿಗೆ (ದ್ವಿತೀಯ), .
ಬಾಲಕಿಯರ ವಿಭಾಗದಲ್ಲಿ : ನಿರ್ಮಲಾ – 400 ಮೀ ಹರ್ಡಲ್ಸ್ (ದ್ವಿತೀಯ), ಚರೀಷ್ಮಾ –5000ಮೀ (ತೃತೀಯ), 3000ಮೀ (ದ್ವಿತೀಯ), ಚಸ್ಮಿತಾ – ಚಕ್ರ ಎಸೆತ (ದ್ವಿತೀಯ), ಬಾನವಿ ಪಿ ಎಸ್ – 200ಮೀ (ದ್ವಿತೀಯ), 400 ಮೀ (ಪ್ರಥಮ), ಪ್ರೇಕ್ಷಿತಾ – ಜಾವೆಲಿನ್ ಎಸೆತ (ತೃತೀಯ), ಪ್ರಿಯಾಂಕ – 1000ಮೀ (ಪ್ರಥಮ), ಭಗೀರಥಿ – 3ಕಿಮೀ ನಡಿಗೆ (ದ್ವಿತೀಯ).
ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು ಅಭಿನಂದಿಸಿದ್ದಾರೆ.


