ಮಂಗಳೂರು: ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಬಿಸಿನೆಸ್ ಅಂಡ್ ಮ್ಯಾನೇಜ್‌ಮೆಂಟ್‌ನ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಆನ್ ವರ್ಗೀಸ್ ಅವರಿಗೆ "ಹೋಟೆಲ್ ಉದ್ಯಮದಲ್ಲಿ ಉದ್ಯೋಗಿ ಉತ್ಪಾದಕತೆಯ ಮೇಲೆ ಮಾನವ ಸಂಪನ್ಮೂಲ ನಿರ್ವಹಣಾ ಅಭ್ಯಾಸಗಳ ಪ್ರಭಾವದ ತುಲನಾತ್ಮಕ ಅಧ್ಯಯನ"ಎಂಬ ಶೀರ್ಷಿಕೆಯ ತಮ್ಮ ಪ್ರಬಂಧಕ್ಕಾಗಿ ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.
ಅವರು ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕ ಡಾ. ಸುರೇಶ್ ರಮಣ ಮಯ್ಯ ಅವರ ಮಾರ್ಗದರ್ಶನದಲ್ಲಿ ತಮ್ಮ ಡಾಕ್ಟರೇಟ್ ಪ್ರಬಂಧವನ್ನು ಮಂಡಿಸಿದ್ದರು. ಆನ್ ವರ್ಗೀಸ್ ರವರು ವರ್ಗೀಸ್ ಚಿರಾಯತ್ ಮತ್ತು ದಿವಂಗತ ಜೆಸ್ಸಿ ವರ್ಗೀಸ್ ಅವರ ಪುತ್ರಿ ಹಾಗೂ ಟಿನು ಸಿರಿಯಾಕ್ ಜಾಯ್ ಅವರ ಪತ್ನಿ.
