ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ

Upayuktha
0



ಪುತ್ತೂರು: ಲೈಂಗಿಕ ಕಿರುಕುಳ ಎನ್ನುವುದು ಕೇವಲ ದೈಹಿಕ ಸ್ಪರ್ಶಕ್ಕೆ ಸೀಮಿತವಾಗಿಲ್ಲ ಬದಲಾಗಿ ಆಶ್ಲೀಲ ಸಂದೇಶಗಳನ್ನು ಕಳುಹಿಸುವುದು, ಮಾತುಗಳನ್ನಾಡುವುದು ಅಥವಾ ಅಂತಹ ಯಾವುದೇ ರೀತಿಯ ವರ್ತನೆಗಳೂ ಕೂಡಾ ಇದರಲ್ಲಿ ಸೇರಿವೆ ಎಂದು ಪುತ್ತೂರಿನ ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆಯ ವೃದ್ಧಾಪ್ಯ ರೋಗ ಮತ್ತು ಮಧುಮೇಹ ತಜ್ಞರಾದ ಡಾ.ಅನನ್ಯಲಕ್ಷ್ಮಿ ಸಂದೀಪ್ ಹೇಳಿದರು. 


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕಾಲೇಜು ಆಂತರಿಕ ದೂರು ಸಮಿತಿ, ಡಾಟಾ ಸೈನ್ಸ್ ಇಂಜಿನಿಯರಿಂಗ್ ವಿಭಾಗ, ಡಾಟಾ ಸೈನ್ಸ್ ವಿದ್ಯಾರ್ಥಿ ಸಂಘ, ಪೇರೆಂಟ್ ರಿಲೇಶನ್ ಸೆಲ್ ಮತ್ತು ಗ್ರೀವೆನ್ಸ್ ರೆಡ್ರೆಸ್ಸಲ್ ಸೆಲ್ ಇದರ ಸಂಯುಕ್ತ ಆಶ್ರಯದಲ್ಲಿ ಪರದೆಯಿಂದ ಆತ್ಮದ ಕಡೆಗೆ: ಜೆನ್-ಜೀ ನಡವಳಿಕೆಗಳು, ಮಿತಿಗಳು ಮತ್ತು ಅದರಾಚೆಗಿನ ಆಯಾಮಗಳು ಈ ವಿಷಯದ ಬಗ್ಗೆ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತಾಡಿದರು.


ಇಂದಿನ ಪೀಳಿಗೆ, ಅವರ ಪೋಷಕರು, ಶಿಕ್ಷಕರ ನಡುವಿನ ವ್ಯತ್ಯಾಸ ಮತ್ತು ಜವಾಬ್ಧಾರಿಗಳ ಬಗ್ಗೆ ವಾಸ್ತವಿಕ ಉದಾಹರಣೆಗಳನ್ನು ಉಲ್ಲೇಖಿಸಿದ ಅವರು ಯುವಜನತೆ ಪಾಲಿಸಬೇಕಾದ ಮತ್ತು ಪಾಲಿಸಬಾರದ ವಿಷಯಗಳ ಬಗ್ಗೆ ತಿಳಿಸಿದರು. 


ಒಬ್ಬರ ಸಾಮರ್ಥ್ಯವನ್ನು, ದೇಹದ ಆಕಾರವನ್ನು ಟೀಕಿಸುವುದು ಕೂಡಾ ಅಪರಾಧ. ಅಂತಹ ಸಂದರ್ಭದಲ್ಲಿ ಅದನ್ನು ಎದುರಿಸುವ, ಪ್ರತಿಕ್ರಿಯಿಸುವ ಬಗೆ ಮತ್ತು ದೂರು ಸಲ್ಲಿಸಬೇಕಾದ ಪ್ರಾಧಿಕಾರಗಳ ಬಗ್ಗೆ ತಿಳಿಸಿದರು. ನೀವು ಕೋಪಗೊಂಡಿದ್ದರೆ, ಅತಿಯಾದ ಉತ್ಸಾಹದಲ್ಲಿದ್ದರೆ ಅಥವಾ ಒತ್ತಡದಲ್ಲಿದ್ದರೆ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು 10 ನಿಮಿಷಗಳ ಕಾಲ ಮುಂದೂಡಿ. ಸಾಧ್ಯವಾದರೆ ಆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಮೊದಲು ಒಂದು ರಾತ್ರಿ ಚೆನ್ನಾಗಿ ಯೋಚಿಸಿ ಎಂದು ಹೇಳಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕಿ ರಕ್ಷ.ಎಸ್.ಆರ್ ಮಾತನಾಡಿ ಮೊದಲು ಆಲಿಸಿ ನಂತರ ಮಾತನಾಡಿ, ಕೆಲವೊಮ್ಮೆ ಅಲ್ಲಿ ಉಪಸ್ಥಿತರಿದ್ದು ಮೌನವಾಗಿ ಆಲಿಸುವುದರಿಂದ ಜೀವನದಲ್ಲಿ ಹೆಚ್ಚಿನ ಪ್ರಯೋಜನಗಳಾಗುತ್ತದೆ ಎಂದರು. ಒಬ್ಬ ಉತ್ತಮ ಇಂಜಿನಿಯರ್ ಆಗುವ ಜತೆಯಲ್ಲಿ ದೇಶದ ಪ್ರಜ್ಞಾವಂತ ಪ್ರಜೆಯಾಗಿ ಎಂದು ನುಡಿದರು.


ಕಾಲೇಜು ಆಂತರಿಕ ದೂರು ಸಮಿತಿಯ ಅಧ್ಯಕ್ಷೆ ಡಾ.ಜೋತಿಮಣಿ.ಕೆ, ಡಾಟಾಸೈನ್ಸ್ ವಿಭಾಗ ಮುಖ್ಯಸ್ಥೆ ಪ್ರೊ.ರೂಪಾ.ಜಿ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾಟಾಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ಗಗನ್‌ದೀಪ್ ಸ್ವಾಗತಿಸಿ, ನಿಹಾರಿಕಾ ಅತಿಥಿಗಳನ್ನು ಪರಿಚಯಿಸಿದರು. ಆಶ್ಲೇಷ್ ವಂದನಾರ್ಪಣೆಗೈದರು. ಶ್ರೇಯಾ.ಎಮ್ ಕಾರ್ಯಕ್ರಮ ನಿರ್ವಹಿಸಿದರು.


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top