ಪುತ್ತೂರು: ಸುದಾನ ವಸತಿ ಶಾಲೆಯಲ್ಲಿ ಅಕ್ಟೋಬರ್ 2 ರಂದು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜಯಂತಿಯನ್ನು ರ‍್ಥಪರ‍್ಣವಾಗಿ ಆಚರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಶೋಭಾನಾಗರಾಜ್ ಮತ್ತು ಎಲ್ಲಾ ಶಿಕ್ಷಕರು ಹಿರಿಯ ನಾಯಕರರ‍್ವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸುವ ಮೂಲಕ ಗೌರವವನ್ನು ಸಲ್ಲಿಸಿದರು.
ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಸಂಸ್ಮರಣೆಯನ್ನು ವಿದ್ಯರ‍್ಥಿ ಅಪ್ರಮೇಯ ನಡೆಸಿಕೊಟ್ಟರು. ಹಿಂದು,ಕ್ರಿಶ್ಚಿಯನ್,ಬೌದ್ಧ,ಜೈನ ಮತ್ತು ಇಸ್ಲಾಂ ಮತ-ರ‍್ಮಗಳ ರ‍್ಮ ಗ್ರಂಥದ ಪಠಣವನ್ನು ವಿದ್ಯರ‍್ಥಿಗಳಾದ ಶ್ರೀಈಶ ಎನ್ ಹೆಗ್ಡೆ (ಭಗವದ್ಗೀತೆ), ಏರೋನ್ ಇಮಾನ್ಯುವಲ್ (ಬೈಬಲ್), ಆರಾಧ್ಯ ಬೌದ್ಧ್(ತ್ರಿಪಿಟಿಕಾ), ಆರಾಧ್ಯ ಜೈನ್(ಅಂಗ), ಶೇಕ್ ಇಮ್ರಾನ್ ( ಕುರಾನ್) ಪಠಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಶೋಭಾನಾಗರಾಜ್ ಅವರು "ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಮಹಾನ್ ವ್ಯಕ್ತಿತ್ವ, ಸೇವಾಮನೋಭಾವಗಳ ಬಗ್ಗೆ ವಿವರಿಸಿ ಅವರನ್ನು ಜೀವನದ ಆರ‍್ಶ ವ್ಯಕ್ತಿಯಾಗಿಸಿಕೊಳ್ಳಿ" ಎಂದು ಕರೆನೀಡಿದರು. ಸಹಶಿಕ್ಷಕಿ ಸವಿತಾ ಕಾರ್ಯಕ್ರಮವನ್ನು ನರ‍್ವಹಿಸಿದರು. ಇದನ್ನು ಸುದಾನ ಶಾಲೆಯ ಸ್ಕೌಟ್-ಗೈಡ್ಸ್ ಸಂಸ್ಥೆಯು ಆಯೋಜಿಸಿತ್ತು. ಸ್ಕೌಟ್-ಗೈಡ್ಸ್ ಶಿಕ್ಷಕಿಯರು ಸಹಕರಿಸಿದರು.

.png)
