ಸುದಾನ ಶಾಲೆಯಲ್ಲಿ ಓಣಂ ಆಚರಣೆ.

Upayuktha
0


ಪುತ್ತೂರು: ಸುದಾನ ವಸತಿ ಶಾಲೆಯಲ್ಲಿ ಓಣಂ ಹಬ್ಬವನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜೊತೆಗೂಡಿ ಹೂವಿನ ರಂಗೋಲಿ 'ಪೂಕಳಂ ' ಗಳನ್ನು ರಚಿಸುವ ಮೂಲಕ ಆಚರಿಸಲಾಯಿತು. ಮುಖ್ಯ ಶಿಕ್ಷಕಿ ಶೋಭಾನಾಗರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.  


ವಿದ್ಯಾರ್ಥಿನಿ ಸಿಯೋನಾ ಎಲ್ಸಾ ಅನೀಶ್ ಓಣಂ ಹಾಡು ಹಾಡಿ ರಂಜಿಸಿದರು. ಉಪ ಮುಖ್ಯ ಶಿಕ್ಷಕಿ ಲವೀನಾ ನವೀನ್ ಹನ್ಸ್, ಪ್ರತಿಭಾ ಕಲಾ ಸಂಘದ ನಿರ್ದೇಶಕಿ ಬಕುಳ, ಸಂಯೋಜಕರಾದ ಪ್ರತಿಮಾ,ಗಾಯತ್ರಿ ಮತ್ತು ಅಮೃತವಾಣಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಗ್ರೀಷ್ಮಾ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲೆಯ ಪ್ರತಿಭಾ ಕಲಾ ಸಂಘವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top