ಸಂಜೆ ಕೆಂಪಿನ ಬಾನ ಅಂಚಲಿ,
ಮರವು ನಿಂತಿದೆ ಮೌನದಲಿ,
ರೆಂಬೆಯ ಮೇಲೆ ಕುಳಿತ ಹಕ್ಕಿ,
ಹಾಡುತಲಿದೆ ಇಂಪಿನಲಿ. ll೦೧ll
ಅಜ್ಞಾನವೆಂಬ ತೊಟ್ಟಿಲ ಒಳಗೆ,
ಜ್ಞಾನದ ಕಣ್ಣು ತೆರೆಯುತಿದೆ,
ವೇದ ಶಾಸ್ತ್ರದ ಸಾರವೆಲ್ಲ,
ತಾಯಿಯ ಮಮತೆಯಲಿ ಹರಿಯುತಿದೆ. ll೦೨ll
ತೊಟ್ಟಿಲು ಮುರಿದು ನೇಣು ಹರಿದರೂ,
ಬದುಕಿನ ಪಯಣ ನಿಲ್ಲುವುದಿಲ್ಲ,
ಆತ್ಮದ ಜ್ಯೋತಿ ಬೆಳಗುತಿರಲು,
ಕತ್ತಲೆಯು ಎಂದೂ ಉಳಿಯುವುದಿಲ್ಲ. ll೦೩ll
ಪ್ರಕೃತಿ ತಾಯಿಯ ಮಡಿಲಿನಲ್ಲಿ,
ಪ್ರತಿಯೊಂದು ಜೀವವೂ ಒಂದೇ,
ಶರಣು ಶರಣಾರ್ಥಿ ಎನ್ನುತ್ತಾ,
ಸಾಗಲಿ ಬಾಳು ಒಂದಾಗಿ ಇಂದೇ. ll೦೪ll
ಶಿವಶರಣೆ: ರೂಪಾ ಬ. ನಾಟೀಕಾರ ಮುದ್ದೇಬಿಹಾಳ


