ನೀರ್ಚಾಲು : ಇಲ್ಲಿಗೆ ಸಮೀಪದ ಬನವಾಸಿ ಪ್ರಕೃತಿಧಾಮಕ್ಕೆ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ. ಹೀ.ಚಿ ಬೋರಲಿಂಗಯ್ಯ ಅವರು ಇತ್ತೀಚೆಗೆ ಭೇಟಿ ನೀಡಿ ಬನವಾಸಿಯ ಪರಿಸರ ಪ್ರೇಮಿ ಕಾರ್ಯಗಳನ್ನು ವೀಕ್ಷಿಸಿದರು.
ಬನವಾಸಿಯಲ್ಲಿನ ಸುಸ್ಥಿರ ಕೃಷಿ ಮಾದರಿಗಳು, ಪ್ರಾಯೋಗಿಕ ಪರಿಸರ ಪ್ರೇಮಿ ಚಟುವಟಿಕೆಗಳು ಇಂದಿನ ಕಾಲಕ್ಕೆ ಅನಿವಾರ್ಯವಾಗಿವೆ. ಆದ ಕಾರಣ ಹೊಸ ತಲೆಮಾರು ಇಲ್ಲಿಂದ ಕಲಿಯಬೇಕಾದ ಪಾಠಗಳು ಅನೇಕವಿವೆ. ಪ್ರಾಕೃತಿಕ ಸಂಪನ್ಮೂಲಗಳನ್ನು ಈ ರೀತಿಯಲ್ಲಿ ಸದುಪಯೋಗಪಡಿಸುವಂತಹ ಜಾಣ್ಮೆಯನ್ನು ಇಂದಿನ ಯುವತಲೆಮಾರು ಕಲಿತುಕೊಳ್ಳಬೇಕಾಗಿದೆ” ಎಂದು ಈ ಸಂದರ್ಭದಲ್ಲಿ ಅವರು ನುಡಿದರು.
ಪೆರ್ಲ ನಾಲಂದ ಕಾಲೇಜಿನ ಪ್ರಾಂಶುಪಾಲ ಡಾ. ಮೋಹನ ಕುಂಟಾರ್, ಶಿವರಾಂ ಬೆಂಗಳೂರು ಹಾಗೂ ಬೋರಲಿಂಗಯ್ಯ ಅವರ ಕುಟುಂಬ ಸದಸ್ಯರು ಜತೆಗಿದ್ದರು. ಬನವಾಸಿಯ ರೂವಾರಿ ಡಾ, ರತ್ನಾಕರ ಮಲ್ಲಮೂಲೆ ದಂಪತಿ ಅವರನ್ನು ಸ್ವಾಗತಿಸಿದರು.


