ಸ್ವಾವಲಂಬನೆಯತ್ತ ಮಹಿಳೆಯರ ಹೆಜ್ಜೆ: ‘ಆರಿ ಲಹರಿ’ ತರಬೇತಿ ಕಾರ್ಯಕ್ರಮದ ಸಮಾರೋಪ

Upayuktha
0



ಮೂಡುಬಿದಿರೆ: ಸಕ್ಷಮಾ–ಆಳ್ವಾಸ್ ಮಹಿಳಾ ಸಂಘ ಹಾಗೂ ಆಳ್ವಾಸ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಲಾಗಿದ್ದ 15 ದಿನಗಳ ‘ಆರಿ ಲಹರಿ’– ಸ್ವಾವಲಂಬನೆಯತ್ತ  ಮೊದಲ ಹೆಜ್ಜೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಮಂಗಳವಾರ ಮಿಜಾರ್‌ನ ಆಳ್ವಾಸ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ನಡೆಯಿತು.


ಉಜಿರೆಯ ರುಡ್‌ಸೆಟಿ ಅಧ್ಯಾಪಕ ಅಬ್ರಹಾಂ ಜೇಮ್ಸ್ ಪಿ.ವಿ. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ನಾವು ಕಲಿಯುವ ಪ್ರತಿಯೊಂದು ಕೌಶಲ್ಯವೂ ಬದುಕಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಕಲಿತ ಕೌಶಲ್ಯವನ್ನು ಕೇವಲ ಪ್ರಮಾಣಪತ್ರಕ್ಕೆ ಸೀಮಿತಗೊಳಿಸದೆ, ಅದನ್ನು ಆದಾಯದ ಮೂಲವನ್ನಾಗಿ ಪರಿವರ್ತಿಸಿಕೊಳ್ಳಬೇಕು. ನಿರಂತರ ಅಭ್ಯಾಸ, ಆತ್ಮವಿಶ್ವಾಸ ಹಾಗೂ ಪರಿಶ್ರಮದ ಮೂಲಕ ಮಹಿಳೆಯರು ತಮ್ಮದೇ ಆದ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬಹುದು ಎಂದರು.


ಭಾರತ್ ಇನ್‌ಫ್ರಾಟೆಕ್‌ನ ಆಡಳಿತ ನಿರ್ದೇಶಕ ಮೊಹಮ್ಮದ್ ಮುಸ್ತಫಾ ಮಾತನಾಡಿ, ಕೌಶಲ್ಯ ತರಬೇತಿ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಸ್ವಾವಲಂಬನೆಯ ದಾರಿಯನ್ನು ತೆರೆಯುತ್ತದೆ.  ಕಸೂತಿ ಕೌಶಲ್ಯಕ್ಕೆ ಸ್ಥಳೀಯವಾಗಿ ಉತ್ತಮ ಅವಕಾಶಗಳಿದ್ದು, ಕಲಿತ ಜ್ಞಾನವನ್ನು ಸಣ್ಣ ಉದ್ಯಮವಾಗಿ ಬೆಳೆಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸ್ವತಂತ್ರರಾಗಬಹುದು ಎಂದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, “ಮಹಿಳೆಯರಿಗೆ ಕೌಶಲ್ಯ ನೀಡುವುದು ಎಂದರೆ ಒಂದು ಕುಟುಂಬಕ್ಕೆ ಮಾತ್ರವಲ್ಲ, ಇಡೀ ಸಮಾಜಕ್ಕೆ ಹೊಸ ಅವಕಾಶವನ್ನು ನೀಡಿದಂತೆ. ಕಲಿತ ಕೌಶಲ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ದು ಸ್ವಂತ ಉದ್ಯೋಗ ಹಾಗೂ ಸ್ವಾವಲಂಬನೆಯತ್ತ ಸಾಗಬಹುದು ಎಂದರು.


ಮಂಗಳೂರು ಉತ್ತರದ ಇನ್ನರ್ ವೀಲ್ ಕ್ಲಬ್‌ನ ಅಧ್ಯಕ್ಷೆ ಕವಿತಾ ಕಾಮತ್ ಮಾತನಾಡಿದರು. ಸಕ್ಷಮಾದ ಸಂಚಾಲಕಿ ಡಾ. ಗ್ರೀಷ್ಮಾ ವಿವೇಕ್ ಆಳ್ವ, ಆಳ್ವಾಸ್ ಹೋಮಿಯೋಪಥಿ ಕಾಲೇಜಿನ ಪ್ರಾಚರ‍್ಯ ಡಾ ಹೆರಾಲ್ಡ್ ರೋಷನ್ ಪಿಂಟೊ, ಆಳ್ವಾಸ್ ಹೋಮಿಯೋಪಥಿ ಕಾಲೇಜಿನ ಆಡಳಿತಾಧಿಕಾರಿ ಡಾ. ಪ್ರಜ್ಞಾ ಆಳ್ವ ಇದ್ದರು.


ಸಮಾರಂಭದಲ್ಲಿ ತರಬೇತಿ ಪೂರ್ಣಗೊಳಿಸಿದ 65 ಮಹಿಳೆಯರ ತಯಾರಿಸಿದ ಕಸೂತಿ ಕೆಲಸಗಳನ್ನು ಪ್ರದರ್ಶಿಸಲಾಯಿತು. ಡಾ ಪ್ರಜ್ಞಾ ದೇವಾಡಿಗ ನಿರೂಪಿಸಿ, ಡಾ ಹೆರಾಲ್ಡ್ ರೋಷನ್ ಪಿಂಟೋ ಸ್ವಾಗತಿಸಿ, ಡಾ ವಸುಮತಿ ವಂದಿಸಿ, ಕಾರ್ಯಕ್ರಮದ ವರದಿ ವಾಚನವನ್ನು  ಡಾ. ಪ್ರಜ್ಞಾ ಆಳ್ವ ಮಾಡಿದರು.


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top